ಹಟ್ಟಿಯ ಖತರ್ನಾಕ್ ಕುರಿ ಕಳ್ಳರ ಬಂಧನ

ಹಟ್ಟಿ ಚಿನ್ನದ ಗಣಿ : ಡಿವೈಎಸ್‌ಪಿ ಎಸ್‌ಎಸ್ ಹೂಲ್ಲೂರು ಮಾರ್ಗದರ್ಶನದ ಮೇರೆಗೆ ಹಟ್ಟಿ ಪೊಲೀಸ್ ಇನ್ಸ್‌ಪೇಕ್ಟರ್ ಪ್ರಕಾಶ್ ಮಾಳಿ, ಪಿಎಸೈ ರಾಮಲಿಂಗಪ್ಪ, ಎಎಸೈ ಶೇಖ್ ರಹೇಮಾನ್, ಪೊಲೀಸ ಸಿಬ್ಬಂದಿಗಳಾದ ನಾರಾಯಣ, ಬಸವರಾಜ, ರಾಮಪ್ಪ, ಮಾರುತಿ ಕಾರ್ಯಾಚರಣೆ ನಡೆಸಿ, ಹಟ್ಟಿಯಲ್ಲಿ ಕುರಿಗಳನ್ನು ಕದಿಯುತ್ತಿದ್ದ ನಾಲ್ವರು ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಮೂರು ಲಕ್ಷ ಮೌಲ್ಯದ ಒಂದು ಆಟೋ ಮತ್ತು ಕುರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳಲ್ಲಿ ಮೂರು ಜನ ಹಟ್ಟಿ ಪಟ್ಟಣದ ಬುಡ್ಡೇಕಲ್ ಚೌಕ್ ಹತ್ತಿರದವರಾಗಿದ್ದು ನಾಗರಾಜ್ ಬಸಣ್ಣ, ಗುಂಡಪ್ಪ ಬಸ್ಸಣ್ಣ, ಹನುಮಂತರಡ್ಡಿ ಮಲ್ಲಪ್ಪ, ಮತ್ತು ಆಂಜನೇಯ್ಯ ತಿಮ್ಮಣ್ಣ ಎನ್ನುವ ವ್ಯಕ್ತಿ ಗೊಲಪಲ್ಲಿ ಗ್ರಾಮದವರೆಂದು ತಿಳಿದು ಬಂದಿದೆ. 379 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂದಿಸಲಾಗಿದೆ ಎಂದು ತಿಳಿದು ಬಂದಿದೆ. ವೇಳೆ ಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿಗಳಿದ್ದರು.

Leave a Comment

Your email address will not be published. Required fields are marked *

Translate »
Scroll to Top