ಪರೀಕ್ಷಾ ಕೇಂದ್ರದಲ್ಲೆ ಸಾವನ್ನಪಿದ ವಿಧ್ಯಾರ್ಥಿನಿ

ನರಸೀಪುರ.ಮಾ.೨೮- ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಎಕ್ಸಾಮ್ ಹಾಲ್‌ಗೆ ಬಂದ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿರುವ ಘಟನೆ ವಿದ್ಯೋದಯ ಪರೀಕ್ಷಾ ಕೇಂದ್ರದಲ್ಲಿ ಬೆಳಿಗ್ಗೆ ಸಂಭವಿಸಿದೆ. ಅಕ್ಕೂರು ಗ್ರಾಮದ ಕೆಂಪರಾಜು ಎಂಬುವರ ಪುತ್ರಿ ಅನುಶ್ರೀ(೧೬) ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಬಂದು ಸಾವನ್ನಪ್ಪಿದ್ದಾರೆ. .ತಾಲೂಕಿನ ಮಾದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಾಂಗ ಮಾಡುತ್ತಿದ್ದ ಅನುಶ್ರೀ ಇಂದು ಪಟ್ಟಣದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಕ್ಕೆ ಹಾಜರಾಗಿದ್ದಳು.ತಾನು ಪರೀಕ್ಷೆ ಬರೆಯಬೇಕಾಗಿದ್ದ ಕೇಂದ್ರಕ್ಕೆ ಹಾಜರಾಗಬೇಕಾದ ಆಕೆ ಗೊಂದಲ ಮಾಡಿಕೊಂಡು ಪಕ್ಕದಲ್ಲೇ ಇದ್ದ ಶಿವಾನಂದ ಶರ್ಮ ಆಂಗ್ಲ ಮಾಧ್ಯಮ ಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಮುಂದಾಗಿ ಸುಮಾರು ಹದಿನೈದು ನಿಮಿಷಗಳ ಕಾಲ ಪರೀಕ್ಷೆ ಬರೆದಿದ್ದಳು ಎನ್ನಲಾಗಿದೆ.

ನಂತರ ಕೆಲ ಹೊತ್ತಾದ ಮೇಲೆ ಆಕೆ ಕುಳಿತು ಪರೀಕ್ಷೆ ಬರೆಯುತ್ತಿದ್ದ ಹಾಲ್ ಟಿಕೆಟ್ ನಂಬರ್ ಬೆರೋಬ್ಬ ವಿಧ್ಯಾರ್ಥಿಯದ್ದಾಗಿತ್ತು,ಇದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರು ವಿಧ್ಯಾರ್ಥಿಗೆ ಮನವರಿಕೆ ಮಾಡಿ ಪಕ್ಕದ ಸೆಂಟರ್‌ಗೆ ಕರೆದೊಯ್ಯುತ್ತಿದ್ದ ಸಂಧರ್ಭದಲ್ಲಿ ಶಾಲೆಯ ಮೆಟ್ಟಿಲನ್ನು ಹತ್ತುವ ವೇಳೆ ಕುಸಿದು ಬಿದ್ದಿದ್ದಾಳೆ ಎನ್ನಲಾಗಿದೆ. .ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸದರು ಆಕೆ ಅಷ್ಟರಲ್ಲಾಗಲೇ ಮೃತ ಪಟ್ಟಿದ್ದಳೆಂದು ವೈದ್ಯರು ಧೃಡೀಕರಿಸಿದರು.ವಿಷಯ ತಿಳಿದ ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ,ಡಿಡಿಪಿಐ ರಾಮಚಂದ್ರ ರಾಜೇ ಅರಸ್,ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ ಮತ್ತಿತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Leave a Comment

Your email address will not be published. Required fields are marked *

Translate »
Scroll to Top