ಕೊಪ್ಪಳ

ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಣದ ದಿನ ಕಾರ್ಯಕ್ರಮ

ಗಂಗಾವತಿ ಡಿಸೆಂಬರ್ 6 : ಭಾರತೀಯ ಪ್ರಜಾ ಸಂಘ (ಭೀಮ ನಡೆ) ಸಂಘಟನೆಯ ಪರವಾಗಿ, ಗಂಗಾವತಿ ನಗರದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಭಾರತೀಯ ಪ್ರಜಾ ಸಂಘದ ಜಿಲ್ಲಾ ಮತ್ತು ತಾಲೂಕ ಪದಾಧಿಕಾರಿಗಳು ಸೇರಿ, ವಿಶ್ವ ನಾಯಕರಾ ದ ಸಂವಿಧಾನ ಶಿಲ್ಪಿ ಭಾರತರತ್ನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಣದ ದಿನದ ಅಂಗವಾಗಿ, ನಗರದ ಡ.ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್ ಡಾಕ್ಟರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .

ಈ ಸಂದರ್ಭದಲ್ಲಿ ರಾಜ್ಯಘಟಕದ ಗೌರವಾಧ್ಯಕ್ಷರಾದ ಮುದಿಯಪ್ಪ ಬರಗೂರು ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಪಂಪಾಪತಿ ಸಿದ್ದಾಪುರ ಹಾಗೂ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಉಸ್ತುವಾರಿ ಆಗಿರುವ ದೇವಣ್ಣ ಸಂಗಪುರ್ ಹಾಗೂ ಕೊಪ್ಪಳ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ದೇವಪುತ್ರಪ್ಪ ಆಯೋಧ್ಯ ಮತ್ತು ಉದ್ಯೋಗ ಖಾತ್ರಿ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷರಾದ ದುರ್ಗೇಶ್ ಹಣವಾಳ ಇವರು ಗಂಗಾವತಿ ತಾಲೂಕು ಅಧ್ಯಕ್ಷರಾದ ಅಂಬರೀಶ ಹಂಪಿ, ಉಪಾಧ್ಯಕ್ಷರಾದ ಹುಸೇನಪ್ಪ ಹೊಸಕೆರೆ ಹಾಗೂ ಇನ್ನಿತರ ಪದಾಧಿಕಾರಿಗಳು ಕಾರ್ಯಕರ್ತರೆಲ್ಲಾ ಸೇರಿ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಇವರ 66 ನೇ ಪುಣ್ಯಸ್ಮರಣೆಯ ಮಹಾ ಪರಿನಿರ್ವಾಣ ದಿನಾಚರಣೆಯನ್ನು ತುಂಬಾ ಉತ್ಸಾಹದಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ದೇವಪುತ್ರಪ್ಪ ಆಯೋಧ್ಯ ಹಾಗೂ ಪಂಪಾಪತಿ ಸಿದ್ದಾಪುರ, ದೇವಣ್ಣ ಸಂಗಪುರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply