ಜಿಲ್ಲೆಗಳುಬಳ್ಳಾರಿ

ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಬ್ರಹ್ಮ ರಥೋತ್ಸವ ಅಂಗವಾಗಿ ಪೂರ್ವಭಾವಿ ಸಭೆ ಫೆ.12ರಂದು

ಬಳ್ಳಾರಿ: ನಗರದ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಯ ಉತ್ಸವ ಮತ್ತು ಬ್ರಹ್ಮರಥೋತ್ಸವ ಫೆ.೧೬ರವರೆಗೆ ಜರುಗಲಿದ್ದು, ಮಾ.೦೧ರಂದು ಮಹಾಶಿವರಾತ್ರಿಯ ಅಂಗವಾಗಿ ವಿಶೇಷಪೂಜಾ ಕೈಂಕರ್ಯಗಳನ್ನು ಆಚರಣೆ ಮಾಡುವ ಬಗ್ಗೆ ಫೆ.12ರಂದು ಮಧ್ಯಾಹ್ನ ೩ ಗಂಟೆಗೆ ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಿಗದಿಪಡಿಸಲಾಗಿದೆ ಎಂದು ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಹಾಗೂ ಭಕ್ತಾಧಿಗಳ ಹಿತದೃಷ್ಟಿಯಿಂದ ಹಾಗು ಕೋವಿಡ್-೧೯ ಹರಡುವುದನ್ನು ತಡೆಯುವ ಕುರಿತು ಮುಂಜಾಗ್ರತಾ ಕ್ರಮವಾಗಿ ಮಹೋತ್ಸವ ಮತ್ತು ರಥೋತ್ಸವವನ್ನು ರದ್ದುಪಡಿಸಿರುವ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವ ?ರತ್ತುಗಳಿಗೆ ಒಳಪಟ್ಟು ಬ್ರಹ್ಮರಥೋತ್ಸವ ಮತ್ತು ಇತರೆ ಕೈಂಕರ್ಯಗಳನ್ನು ನಡೆಸಲು ಸೂಚಿಸಿದ್ದಾರೆ.
ಸದರಿ ಸಭೆಗೆ ಕಳೆದ ವ? ಕೈಗೊಂಡ ಕ್ರಮ ಮತ್ತು ಪ್ರಸಕ್ತ ವ? ಕೈಗೊಳ್ಳಬೇಕಾದ ಕ್ರಮಗಳ ಮಾಹಿತಿಯೊಂದಿಗೆ ಹಾಜರಾಗಲು ಕೋರಿದ್ದಾರೆ.

Leave a Reply