ಕೊವೀಡ್ ನಿಂದ ಕಲಾವಿದರಿಗೆ ಕರಿ ನೆರಳು

ಕುಷ್ಟಗಿ,ಜನವರಿ,22 :- ಕೊವೀಡ್-೧೯ ಕೊರೋನಾ ವೈರಸ್ ಬಂದಾಗಿನಿಂದಲು ಕಲೆ ಮತ್ತು‌ ಸಂಸ್ಕೃತಿ ಜನಪದ ಹಾಡುಗಾರಿಕೆ ಕೇಳಲು ಯಾವ ಕಾರ್ಯಕ್ರಮ ನೆಡೆಯದಂತೆ ಕೊರೋನಾ ವೈರಸ್ ಕಟ್ಟಿ ಹಾಕಿದೆ ಆದರೆ ನಮ್ಮೂರಿನಲ್ಲಿ ನಮ್ಮ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಇಂತಹ ಜನಪದ ಕಾರ್ಯಕ್ರಮದ ಮೂಲಕ ಚೌಡ್ಕಿ ಪದ ಕಾರ್ಯಕ್ರಮ ನೀಡಿದ್ದು ಬಹಳ ಶ್ಲಾಘನೀಯ ಎಂದು ಕ್ಯಾದಿಗುಪ್ಪ ಗ್ರಾಮ ಪಂಚಾಯತ ಸದಸ್ಯ ಶೇಖರಪ್ಪ‌ ಉಪ್ಪಾರ ಹೇಳಿದರು. ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಗ್ರಾಮದಲ್ಲಿ‌ ಏರ್ಪಡಿಸಲಾಗಿದ್ದ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಕೊಪ್ಪಳ, ವಿಕ್ಟವಿ ಡ್ರೀಮ್ಸ್ ಫೌಂಡೇಶನ್ ಸಂಸ್ಥೆ (ರಿ) ಕುಷ್ಟಗಿ, ಹಾಗೂ ಗ್ರಾಮ ಪಂಚಾಯತ ಕಾರ್ಯಲಯ ಕ್ಯಾದಿಗುಪ್ಪ ಇವರ ಸಹಯೋಗದಲ್ಲಿ ನಡೆದ ಜನಪದ ಚೌಡ್ಕಿ ಪದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಕಲಾವಿದರ ಬದುಕು ಕೊವೀಡ್-೧೯ ಕೊರೋನಾ ವೈರಸ್ ಬಂದಾಗಿನಿಂದಲು ಕಲಾವಿದರ ಬದುಕಿಗೆ ಕರಿ‌ ನೆರಳು ಬಿಂದಿದೆ ಇಂತಹ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ನಮ್ಮಂತವರ ಸಹಕಾರ ಹೆಚ್ಚು ಹೆಚ್ಚು ಇರಬೇಕಾಗುತ್ತದೆ ಹಾಗೂ ಈ‌ ಒಂದು ಕಲೆ ಉಳಿಯಬೇಕಾದರೆ ನಮ್ಮ ಹಿರಿಯರ ಕಾಲದ‌ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು ಹಳ್ಳಿ ಸೊಗಡಿನಿಂದ ಕುಡಿದ ಈ ಜನಪದ ಕಲೆ ಉಳಿಸಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕಾಗಿದೆ‌ ಎಂದರು.


ಇನ್ನೋರ್ವ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ‌ ಬಸವರಾಜ ವಾಲಿಕಾರ ಮಾತನಾಡಿ ವಿಶ್ವ ವಿಖ್ಯಾತ ಪಡೆದಿರುವ ನಮ್ಮ ಜನಪದ ಕಲೆ ನಾಡಿನ ಅಜ್ಜ ಮುತ್ತಜ್ಜ ಕಾಲದಿಂದ ನಡೆದು ಬಂದಂತೆ ಜನಪದ ಕಲೆ ನಮ್ಮದಾಗಿತ್ತು ಇಂತಹ ಕಲೆಗೆ ಪ್ರೋತ್ಸಾಹಿಸುವಂತಹ ಅಗತ್ಯ ನಮ್ಮ ನಿಮ್ಮೆಲ್ಲರಲ್ಲಿ ಬರಬೇಕಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ ಸದಸ್ಯರಾದ ಬಸವರಾಜ ಯಲಗುಡದಪ್ಪ ಮಾತನಾಡಿ ಹಳ್ಳಿಯ ಜನರಿಂದ ಹುಟ್ಟಿಕೊಂಡ ಜನಪದ ಇವತ್ತು ಸಿನಿಮಾರಂಗಕ್ಕೆ ಮತ್ತು ಟಿ.ವ್ಹಿ ಧಾರಾವಾಹಿಗೆ ಮಾರು ಹೋಗಿವೆ ಎಂದರು. ಕಲಾವಿದರಾದ ಬಸವರಾಜ ಉಪ್ಪಲದಿನ್ನಿ ಪ್ರಾಸ್ತಾವಿಕವಾಗಿ ಮಾತನಾಡಿ ಈ ಜನಪದ ಚೌಡ್ಕಿ ಪದ ಕಾರ್ಯಕ್ರಮವನ್ನು ಕ್ಯಾದಿಗುಪ್ಪ ಗ್ರಾಮದಲ್ಲಿ ಹಾಕಿಕೊಳ್ಳಬೇಕು ಎಂದುಕೊಂಡಾಗ ಗ್ರಾಮ ಪಂಚಾಯತ ಮತ್ತು ಗ್ರಾಮದ ಗುರು ಹಿರಿಯರನ್ನು ಬಂದು ಕೇಳಿದಾಗ ಬಹಳ ಹಿಗ್ಗಿನಿಂದ ಕಾರ್ಯಕ್ರಮ ನೆಡೆಸಲು ಒಪ್ಪಿಕೊಂಡು ಪ್ರತಿಯೊಬ್ಬರ ಸಹಕಾರದಿಂದ ಇವತ್ತು ಜನಪದ‌ ಸೊಗಡಿನಲ್ಲಿ‌ ಕುಡಿರುವ ತಂತಿವಾದ್ಯ ವಾಗಿರುವ ಚೌಡ್ಕಿ ಪದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜನಪದ ಚೌಡ್ಕಿ ಪದ ಕಾರ್ಯಕ್ರಮವನ್ನು ಕಲಾವಿದರಾದ ಪವಾಡೆಪ್ಪ ಚೌಡ್ಕಿ ಹಾಗೂ ಶಿವರಾಯಪ್ಪ ಚೌಡ್ಕಿ ಮತ್ತು‌ ಸಂಗಡಿಗರು ಚೌಡ್ಕಿ ಪದ ಪ್ರಸ್ತುತಪಡಿಸಿ ಜನಮನ‌ ರಂಜಿಸಿದರು.


ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಅಧ್ಯಕ್ಷೆಯಾದ ರೇಣುಕಾ ಗಂಡ ಸಂಗಪ್ಪ ವಾಲಿಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಮೌನೇಶ ಕಮ್ಮಾರ, ಶರಣಪ್ಪ ಹರಿಜನ, ಊರಿನ ಗುರು ಹಿರಿಯರಾದ ಪವಾಡಿಗೌಡ ಪೋಲಿಸ್ ಪಾಟೀಲ, ನಿಂಗಪ್ಪ ಕಂಠಿ, ಭೀಮಪ್ಪ ಬಸಾಪೂರ, ನಿಂಗಪ್ಪ ಗುಡಿಹಿಂದಲ, ಕಲಾವಿದರಾದ ಭರಮಪ್ಪ‌ ಚೌಡ್ಕಿ, ಕೊಳ್ಳಪ್ಪ ಬೂದರ್, ಯಲ್ಲಾಲಿಂಗ‌ ಕುರಿ, ದೊಡ್ಡಪ್ಪ ವಣಗೇರಿ, ರಮೇಶ ಹಕ್ಕಲ್‌ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top