ಸಿನಿಮಾ

ಅಧಿನಾಯಕಿ

ಹೆಣ್ಣು ಸದಾ ಒಂದು ಮಿತಿಯಲ್ಲೇ ಇರಬೇಕು ಅಂತ ಸಮಾಜ ಅವಳನ್ನು ಕೂಡಿಟ್ಟಿದೆ … ಅವಳೆಷ್ಟೇ ಸಾಧನೆಗೈದರೂ, ಮನೆ-ಸಮಾಜ ಏನ್ನನ್ನೇ ಸಮರ್ಥವಾಗಿ ಸಂಭಾಳಿಸಿದರೂ, ಕೊನೆ ಮಾತು ಮಾತ್ರ -“ಅವಳು ಹೆಣ್ಣು”..

ಜಂಟಲ್ ಮ್ಯಾನ್ 2 ಚಿತ್ರಕ್ಕೆ ಕೀರವಾಣಿ ಸಂಗೀತ ಪ್ರಾರಂಭ

ಈ ಹಿಂದೆ ‘ಜಂಟಲ್ ಮ್ಯಾನ್’, ‘ಕಾದಲ್ ದೇಶಂ’ ಸೇರಿದಂತೆ ಹಲವು ಸೂಪರ್ ಹಿಟ್ ತಮಿಳು ಚಿತ್ರಗಳನ್ನು ನಿರ್ಮಿಸಿರುವ ಕೆ.ಟಿ. ಕುಂಜುಮೋನ್, ಈಗ ಬಹಳ ದಿನಗಳ ನಂತರ ‘ಜಂಟಲ್ ಮ್ಯಾನ್ 2’ ಚಿತ್ರದ ಮೂಲಕ ನಿರ್ಮಾಣಕ್ಕೆ ವಾಪಸ್ಸಾಗಿದ್ದಾರೆ. ಈ ಚಿತ್ರದ ಮುಹೂರ್ತ ಸದ್ಯದಲ್ಲೇ ನಡೆಯಲಿದ್ದು, ಅದಕ್ಕೂ ಮುನ್ನ, ಸಂಗೀತ ಸಂಯೋಜನೆಯ ಕೆಲಸಗಳು ಪ್ರಾರಂಭವಾಗಿವೆ.

ಮಾಲಾಶ್ರೀ ಸಿನಿಮಾ ಕೆಂಡದ ಸೆರಗು ಸಿನಿಮಾದ 2ನೇ ಹಾಡು ರಿಲೀಸ್ ಈ ಹುಡುಗಿ ಎಷ್ಟು ಚೆಂದ ಎಂದಿದ್ಯಾರು?

ಸ್ಯಾಂಡಲ್ ವುಡ್ ಕನಸಿನ ರಾಣಿ ಮಾಲಾಶ್ರೀ ನಟನೆಯ ಕೆಂಡದ ಸೆರಗು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕಾದಂಬರಿ ಆಧಾರಿತ ಈ ಚಿತ್ರ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದೀಗ ಈ ಕೆಂಡದ ಸೆರಗು ಸಿನಿಮಾದ ಎರಡನೇ ಹಾಡು ಅನಾವರಣಗೊಂಡಿದೆ.

ಸಿದ್ದಾರ್ಥ್ ಮಹೇಶ್ ಜನ್ಮದಿನದಂದು ನಟನೆಯ ಜೊತೆಗೆ ನಿರ್ದೇಶನಕ್ಕೆ

ನನ್ನ ಸಿಪಾಯಿ ಮತ್ತು ಗರುಡ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ನಾಯಕ ನಟ ಸಿದ್ದಾರ್ಥ್ ಮಹೇಶ್ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ.

ಕಿಚ್ಚ ಸುದೀಪ್ ಬಿಡುಗಡೆ ಮಾಡಿದ ಕೌಸಲ್ಯ ಸುಪ್ರಜಾ ರಾಮ ಟ್ರೇಲರ್

ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ರೇಲರ್ ಅನಾವರಣ ಮಾಡಿದರು.

ಶಿವಣ್ಣ-ಪ್ರಭುದೇವ ಚಿತ್ರ ಕರಟಕ ದಮನಕ ಈ ಹೆಸರೇ ಯಾಕೆ ? ಯೋಗರಾಜ್ ಭಟ್ ಹೇಳಿದ್ದೇನು ?

ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಡ್ಯಾನ್ಸ್ ಕಿಂಗ್ ಪ್ರಭುದೇವ ಮೊದಲ ಬಾರಿಗೆ ಒಟ್ಟಿಗೇ ಅಭಿನಯಿಸಿರುವ ರಾಕ್‌ಲೈನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ರಾಕ್ ಲೈನ್ ವೆಂಕಟೇಶ್ ನಿರ್ಮಿಸಿರುವ, ಯೋಗರಾಜ್ ಭಟ್ ನಿರ್ದೇಶನದ, ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ‘ಕರಟಕ ದಮನಕ’ ಚಿತ್ರದ ಎಕ್ಸ್ ಕ್ಲೂಸಿವ್ ಮೊದಲ ಝಲಕ್ ಬಿಡುಗಡೆಯಾಗಿದೆ.

ಹಳ್ಳಿ ಪ್ರತಿಭೆಯ ಸಿನಿ ಜರ್ನಿ: ಮತ್ತೆ ಶುರುವಾಗಿದೆ ಹೃದಯದ ಮಾತು ಆಲ್ಬಮ್ ಬಿಡುಗಡೆಗೆ ಸಜ್ಜು

ಬಳ್ಳಾರಿ: ಕಲೆ ಯಾರೊಬ್ಬರ ಸ್ವತ್ತಲ್ಲ. ಅದಕ್ಕೆ ಯಾವ ಜಾತಿ ಧರ್ಮ ಬಡವ-ಬಲ್ಲಿದ ಎಂಬ ಭೇದ-ಭಾವಗಳಿಲ್ಲ. ಯಾರಲ್ಲಿ ಶ್ರದ್ಧೆ, ಕಲೆಯ ಮೇಲೆ ಪ್ರೀತಿ ಗೌರವ ಇರತ್ತೊ ಅವರು ಮಾತ್ರ ಸಾಧನೆ ಶಿಖಿರ ಏರಲು ಸಾಧ್ಯ. ಅಂತಹದ್ದೇ ಒಂದು ಹಳ್ಳಿ ಪ್ರತಿಭೆ ಮೌನೇಶ್ ರಾಠೋಡ್.

ಗಿಣಿರಾಮದ ರಿತ್ವಿಕ್ ಮಠದ್ ನಾಯಕನಾಗಿರುವ ಉತ್ಸವ

ಸದ್ದಿಲ್ಲದೆ ಶೂಟಿಂಗ್ ಮುಗಿಸಿರುವ ಉತ್ಸವ ಸಿನಿಮಾದಲ್ಲಿ ಗಿಣಿರಾಮ ಸೀರಿಯಲ್ ಖ್ಯಾತಿಯ ರಿತ್ವಿಕ್ ಮಠದ್ ನಾಯಕನಾಗಿ ನಟಿಸಿದ್ದಾರೆ. ಈ ಹಿಂದೆ ಆ ಎರಡು ವರ್ಷಗಳು, ಗಿಫ್ಟ್ ಬಾಕ್ಸ್ ಚಿತ್ರದಲ್ಲಿ ನಟಿಸಿದ್ದ ರಿತ್ವಿಕ್ ಮಠದ್ ಅವರಿಗೆ ‘ಉತ್ಸವ’ 3ನೇ ಸಿನಿಮಾ. ಈ ಚಿತ್ರದ ಮೂಲಕ ಅರುಣ್ ಸೂರ್ಯ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಇದಕ್ಕೆ ಮುನ್ನ ನಾಗೇಂದ್ರ ಅರಸ್ ಸೇರಿದಂತೆ ಹಲವು ನಿರ್ದೇಶಕ ಗರಡಿಯಲ್ಲಿ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಅರುಣ್ ಸೂರ್ಯ ಬೆನ್ನಿಗಿದೆ.

ಶಿವಣ್ಣ ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಕಾನ್ಸೆಪ್ಟ್ ಪೋಸ್ಟರ್ ಬಿಡುಗಡೆ

ಸಂಚುರಿ ಸ್ಟಾರ್ ಡಾ. ಶಿವರಾಜಕುಮಾರ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊಸದೊಂದು ಚಿತ್ರವನ್ನು ಶಿವಣ್ಣ ಒಪ್ಪಿಕೊಂಡಿದ್ದು, ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅವರ ಪಾತ್ರದ ಕಾನ್ಸೆಪ್ಟ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ತಲೈವ ರಜನಿಕಾಂತ್ ಚಿತ್ರ ಜೈಲರ್ ಆಗಸ್ಟ್ 10ಕ್ಕೆ ಕನ್ನಡದಲ್ಲೂ ಬಿಡುಗಡೆ

ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ತಲೈವ ವೃತ್ತಿ ಬದುಕಿನ ವಿಶೇಷ ಚಿತ್ರ‌ ಇದಾಗಿದ್ದು, ದಕ್ಷಿಣ ಭಾರತ ಹಾಗೂ ಬಾಲಿವುಡ್‌ ದಿಗ್ಗಜರು‌ ಜೈಲರ್ ಸಿನಿಮಾದ ಭಾಗವಾಗಿದ್ದಾರೆ. ಸದ್ಯ ಕಾವಾಲಾಯ್ಯ ಹಾಡಿನ ಮೂಲಕ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿರುವ ಈ ಚಿತ್ರ ಆಗಸ್ಟ್ 10ಕ್ಕೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದೆ.

Translate »
Scroll to Top