ವಿಜಯಾಪುರ

ಪೌರ ಕಾರ್ಮಿಕರನ್ನು ಖಾಯಂಗೊಳಸಲು  ಪೌರಕಾರ್ಮಿಕರ ಮಹಾ ಸಂಘ ಆಗ್ರಹ

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರು ಹಾಗೂ ಮೇಲ್ವಿಚಾರಕರನ್ನು ಖಾಯಂಗೊಳಿಸುವ ಕುರಿತು ರಾಜ್ಯ ಬೆಜಟ್ ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ವಿಧಾನಮಂಡಲ ಅಧಿವೇಶನದಲ್ಲಿ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘ ಆಗ್ರಹಿಸಿದೆ.

ಶ್ರಮ ಸಂಸ್ಕೃತಿಗೆ ಅಂತರಾಷ್ಟ್ರೀಯ ಮನ್ನಣೆ ಗಿನ್ನಿಸ್ ಬುಕ್ ದಾಖಲೆಗೆ ಸೇರಿದ ಲಂಬಾಣಿ ಕಸೂತಿ

ವಿವಿಧ ಬಣ್ಣದ ಹಲವು ಸಣ್ಣ ತುಣುಕುಗಳನ್ನು ದಾರದಿಂದ ಹೊಲಿದು ಜೋಡಿಸಿ, ಅದರ ಮೇಲೆ ಕಸೂತಿ ಮಾಡುವ ಲಂಬಾಣಿ ಮಹಿಳೆಯರ ಕಲೆ, ಶ್ರಮ ಸಂಸ್ಕೃತಿಯ ಪ್ರತೀಕ. ಆದಿ ಕಾಲದ ಮಾನವನ ಸುಪ್ತ ಪ್ರಜ್ಞೆಯಲ್ಲಿ ಅರಳಿದ ಕಲೆಗಳು ಇಂದು ತಂತ್ರಜ್ಞಾನದ ಅತ್ಯುನ್ನತ ಮಟ್ಟ ತಲುಪಿವೆ. ತಾಂತ್ರಿಕ ಕಾಲಘಟ್ಟದಲ್ಲೂ ಲಂಬಾಣಿ ಮಹಿಳೆಯರು ಉಳಿಸಿ ಬೆಳಿಸಿಕೊಂಡು ಬಂದ ಕಸೂತಿ ಕಲೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರುವ ಕ್ಷಣಕ್ಕೆ ಹಂಪಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ಸಾಕ್ಷಿಯಾಗಿದೆ.

ಮುಖ್ಯಮಂತ್ರಿ ಸ್ಥಾನ ಸೇಲ್‌ಗೆ ಇಟ್ಟ ಹಾಗೆ ಪ್ರತಿಪಕ್ಷದ ನಾಯಕನ ಸ್ಥಾನವೋ ಸಹ ಸೇಲ್‌ಗೆ ಇಟ್ಟಿರಬಹುದು: ಬಿಜೆಪಿ ನಾಯಕರ ಕಾಲೆಳೆದ MBP

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡಬಾರದು. ಅವರಿಗೆ ನಮ್ಮ ಸರ್ಕಾರದ ಅಭಿವೃದ್ಧಿ ಬಗ್ಗೆ ಹೊಟ್ಟೆ ಉರಿಯಾಗಿದೆ. ಕೇಂದ್ರ ಸಚಿವರಾಗಿದ್ದಾರೆ. ಬಹಳ ತಿಳಿದುಕೊಂಡವರು ಈ ರೀತಿ ಮಾತನಾಡಬಾರದು ಎಂದು ಸಚಿವ ಎಂ.ಬಿ. ಪಾಟೀಲ್ ತಿರುಗೇಟು ನೀಡಿದರು.

ಗುರಿ ಮುಟ್ಟಲು ಸತತ ಪರಿಶ್ರಮ ಅಗತ್ಯ

ಬಳ್ಳಾರಿ : ನಮ್ಮ ನೆರೆಹೊರೆಯವರನ್ನು ಪ್ರೀತಿಯಿಂದ ಕಾಣುವುದರ ಜೊತೆಗೆ ಆಡಂಬರದ ಜೀವನಕ್ಕಿಂತ ಸಾಮಾನ್ಯನಾಗಿ ಜೀವಿಸಿದರೆ ಜೀವನದ ಬೆಲೆ ತಿಳಿಯುತ್ತದೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ಕುಮಾರ್ ಬಂಡಾರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶ್ರೀ ಸಿದ್ದಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವಕ್ಕೆ ಚಾಲನೆ

ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನ ಸುಕ್ಷೇತ್ರ ಸಂಗಾಪುರ ಗ್ರಾಮದಲ್ಲಿ ಇಂದು ಶ್ರೀ ಸಿದ್ದಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ ಅವರು ಯಾತ್ರಿ ನಿವಾಸವನ್ನು ಲೋಕಾರ್ಪಣೆ ಮಾಡಿದರು. ಕ್ಷೇತ್ತದ ಶಾಸಕರೂ ಆಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಮಠಾಧೀಶರಾದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ, ಮಾಜಿ ಸಚಿವರಾದ ಅಪ್ಪಾಜಿ ನಾಡಗೌಡ, ಶಾಸಕರಾದ ಆನಂದ ನ್ಯಾಮಗೌಡ, ಸುನಿಲ್ ಪಾಟೀಲ್, ಪ್ರಕಾಶ್ ರಾಥೋಡ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಅಲಗೂರು ಹಾಜರಿದ್ದರು.

ಸಚಿವ ಸಂಪುಟ ವಿಸ್ತರಣೆ: ಎಲ್ಲಾ ಭಾಗಗಳಿಗೂ ಪ್ರಾತಿನಿಧ್ಯಕ್ಕೆ ಪ್ರಯತ್ನ

ವಿಜಯಪುರ: ಸಚಿವ ಸಂಪುಟ ವಿಸ್ತರಣೆಯಾದಲ್ಲಿ ರಾಜ್ಯದ ಎಲ್ಲಾ ಭಾಗಗಳಿಗೆ ಆದಷ್ಟೂ ಪ್ರಾತಿನಿಧ್ಯ ನೀಡಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಜಯಪುರದ ಕೊಡಗಾನೂರ ಹೆಲಿಪ್ಯಾಡ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರು ಕರೆದಿಲ್ಲ. ದೆಹಲಿಯಲ್ಲಿ ನಿರ್ಣಯವಾದಾಗ ತಿಳಿಸಲಾಗುವುದು ಎಂದರು. ವಿಜಯಪುರದಲ್ಲಿ ಮೂರು ಶಾಸಕರಿದ್ದಾರೆ. ಯಾರಿಗೂ ಪ್ರಾತಿನಿಧ್ಯ ದೊರೆತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಎಲ್ಲಾ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡಬೇಕು ಎಂದಿದೆ. ರಾಜಕೀಯ ಸ್ಥಿತಿಗತಿಯ ಮೇಲೆ ಕೆಲವು ನಿರ್ಣಯಗಳಾಗುತ್ತವೆ ಎಂದರು.

ಕೋವಿಡ್ ಅಲ್ಪಪ್ರಮಾಣದಲ್ಲಿ ಹೆಚ್ಚಳ ಆದರೆ ಗಾಬರಿಯಾಗುವ ಅಗತ್ಯವಿಲ್ಲ

ವಿಜಯಪುರ : ರಾಜ್ಯದಲ್ಲಿ ಅಲ್ಪಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ. ಕೋವಿಡ್ ನಿಯಂತ್ರಣಕ್ಕೆ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಅವರು ತಿಳಿಸಿದರು. ಅವರು ಇಂದು ವಿಜಯಪುರದ ಕೊಡಗಾನೂರ ಹೆಲಿಪ್ಯಾಡ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ ಸ್ಥಿತಿಗತಿ ಬಗ್ಗೆ ವೀಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಅವರಿಗೆ ವಿವತಿಸಾಗುವುದು ಎಂದು ಅವರು ಹೇಳಿದರು. ವಿಮಾನ ನಿಲ್ದಾಣಗಳಲ್ಲಿ …

ಕೋವಿಡ್ ಅಲ್ಪಪ್ರಮಾಣದಲ್ಲಿ ಹೆಚ್ಚಳ ಆದರೆ ಗಾಬರಿಯಾಗುವ ಅಗತ್ಯವಿಲ್ಲ Read More »

ಹೋನವಾಡ ಗ್ರಾಮ ಘಟಕ ಅನಾವರಣ

ಗಂಗಾವತಿ : ಬಿಜಾಪುರ ಜಿಲ್ಲೆ ಸೇರಿದಂತೆ ತಾಲೂಕ ಹಾಗೂ ವಿವಿಧ ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಅಸ್ತಿತ್ವಕ್ಕೆ ವಿಜಯಪುರ,, ರೈತರ ಧ್ವನಿಯಾಗಿ ರಾಜ್ಯಾದ್ಯಂತ ಸಂಘಟನೆ ರಾಜ್ಯಾಧ್ಯಕ್ಷ ಶರಣೆಗೌಡ ಕೆಸರಟ್ಟಿ ದಿನಾಂಕ 18.4. 2022 ರಂದು ಬಿಜಾಪುರ ಜಿಲ್ಲೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದಿಂದ ಜಿಲ್ಲಾ ಘಟಕವನ್ನು ಹಾಗೂ ತಿಕೋಟಾ ತಾಲೂಕು ಘಟಕ ಮತ್ತು ಹೋನವಾಡ ಗ್ರಾಮ ಘಟಕವನ್ನು ಅನಾವರಣ ಮಾಡಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರನ್ನು ಹಾಗೂ ತಾಲೂಕ ಅಧ್ಯಕ್ಷರು ಗಳನ್ನು …

ಹೋನವಾಡ ಗ್ರಾಮ ಘಟಕ ಅನಾವರಣ Read More »

ಶಾಸನ ನೀಡಿದ ಹಲ್ಮಿಡಿ ಗ್ರಾಮದಲ್ಲಿ ೩ ವರ್ಷಕ್ಕೊಮ್ಮೆ ವಿಶೇಷ ಹಬ್ಬ

ಬೇಲೂರು : ನಾಲ್ಕು ಸಾವಿರ ಜನರಿಂದ ಬಾಗಿನ ಅರ್ಪಣೆ: ಇಲ್ಲಿಲ್ಲ ಜಾತಿ, ಮತ, ಪಂಥ ಅನಂತರಾಜೇಅರಸು ಬೇಲೂರು ಇದೊಂದು ಅಪರೂಪದ, ೩ ವರ್ಷಕ್ಕೆ ಒಮ್ಮೆ ನಡೆಯುವ ಹಿರೆಯೊಡೆಯಲಿಂಗೇಶ್ವರ ದೇವರ ಜಾತ್ರಾಮಹೋತ್ಸವ. ೩ ಸಾವಿರಕ್ಕೂ ಹೆಚ್ಚು ಬಾಗಿನ ಅರ್ಪಣೆ, ಸುಮಾರು ೪ ಸಾವಿರಕ್ಕೂ ಹೆಚ್ಚು ಭಕ್ತರು ಇಲ್ಲಿ ಸೇರುತ್ತಾರೆ.ಹೂವಿನಿಂದ ಪೂಜಿಸುವಂತಿಲ್ಲ, ಮಹಿಳೆಯರು ಹೂವು ಮುಡಿಯುವಂತಿಲ್ಲ. ದೇವರ ಒಕ್ಕಲಿಗ ಕುಟುಂಬದಲ್ಲಿ ಮುಟ್ಟುಮೈಲಿಗೆ ಆಗುವಂತಿಲ್ಲ. ಜಾತ್ರಾ ಮಹೋತ್ಸವ ನಡೆಯುವ ೭ ದಿನ ಮುಂಚಿನಿಂದಲೇ ಮಾಂಸಾಹಾರ ಸೇವನೆ, ರಾತ್ರಿ ವೇಳೆ ಯಾವುದೇ ರೀತಿಯ …

ಶಾಸನ ನೀಡಿದ ಹಲ್ಮಿಡಿ ಗ್ರಾಮದಲ್ಲಿ ೩ ವರ್ಷಕ್ಕೊಮ್ಮೆ ವಿಶೇಷ ಹಬ್ಬ Read More »

Translate »
Scroll to Top