ಮುಖ್ಯನ್ಯಾಯಧೀಶ ಮಲ್ಲಿಕಾರ್ಜನ ಗೌಡರನ್ನು ವೃತ್ತಿಯಿಂದ ವಜಾಗೊಳಿಸಿ

ಮರಿಯಮ್ಮನಹಳ್ಳಿ : ಗಣರಾಜ್ಯೋತ್ಸವ ದಿನದಂದು ರಾಯಚೂರಿನ ಕೋರ್ಟ್ ಆವರಣದಲ್ಲಿ ಜಿಲ್ಲಾ ಮುಖ್ಯನ್ಯಾಯಧೀಶರಾದ ಮಲ್ಲಿಕಾರ್ಜನ ಗೌಡ ಅವರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇಟ್ಟರೆ ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದು ಅವಮಾನಿಸಿರುವುದು ದೇಶದ್ರೋಹ ಕೃತ್ಯ ಕೂಡಲೇ ಅವರನ್ನು ವೃತ್ತಿಯಿಂದ ವಜಾಗೊಳಿಸಬೇಕೆಂದು ಮರಿಯಮ್ಮನಹಳ್ಳಿಯ ವಿವಿಧ ದಲಿತ ಪರ ಸಂಘಟನೆಗಳು ಆಗ್ರಹಿಸಿದವು.

ಪಟ್ಟಣದ ನಾಣಿಕೆರೆ ವೃತ್ತದಲ್ಲಿ ಗುರುವಾರ ವಿವಿಧ ದಲಿಪರ ಸಂಘಟನೆಗಳ ಪದಾಧಿಕಾರಿಗಳು ಜಮಾಯಿಸಿ ಮುಖ್ಯನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಅವರ ವಿರುದ್ದ ಘೋಷಣೆಗಳನ್ನು ಕೂಗಿ, ಅವರ ಕೃತ್ಯವನ್ನು ಖಂಡಿಸಿ ಮಾತನಾಡಿದರು. ಕೂಡಲೇ ಮಲ್ಲಿಕಾರ್ಜುನ ಗೌಡರನ್ನು ವೃತ್ತಿಯಿಂದ ವಜಾಗೊಳಿಸಿ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸುವಂತೆ ಉಪತಹಶೀಲ್ದಾರ ಲಾವಣ್ಯ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಸುಬ್ರಮಣ್ಯ, ಎಲ್. ವೆಂಕಟೇಶ, ಎಲ್. ಕೃಷ್ಣ, ಚಂದ್ರಶೇಖರ, ಮಾಬುಸುಭಾನಿ, ವಿರುಪಾಕ್ಷಿ, ಪಂಚಾಯಿತಿ ನೂತನ ಸದಸ್ಯರಾದ ಮರಡಿ ಸುರೇಶ, ಪರಶುರಾಮ, ಆರ್.ಪಿ.ಐ ಸಂಘಟನೆಯ ಎಲ್. ನಾಗರಾಜ್, ಅಂಬೇಡ್ಕರ್ ಸೇನೆ ಅಧ್ಯಕ್ಷ ಕುಮಾರ, ಕರ್ನಾಟಕ ಮಾದಿಗ ಮಹಾಸಭಾ ಅಧ್ಯಕ್ಷ ರವಿಕಿರಣ, ಕರ್ನಾಟಕ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘಟನೆಯ ಜಿಲ್ಲಾಧ್ಯಕ್ಷ ಆನಂದ, ಸಮತಾ ಸೈಬಿಕ ದಳದ ಅಧ್ಯಕ್ಷ ಎಲ್.ಮಂಜುನಾಥ, ಜಾಂಭವ ಯುವ ಸೇನೆ ಅಧ್ಯಕ್ಷ ಮಂಜುನಾಥ, ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ಗಂಗಾಧರ, ನಮ್ಮ ಕರ್ನಾಟಕ ಅಹಿಂದ ಜನಪರ ವೇದಿಕೆ ಅಧ್ಯಕ್ಷ ಕಲ್ಲಪ್ಪ, ಆದಿಜನ ಪಂಚಾಯಿತಿ ಸಂಯೋಜಕರಾದ ಶಂಕ್ರಮ್ಮ ಡಿ, ರಾಮಣ್ಣ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.  

Leave a Comment

Your email address will not be published. Required fields are marked *

Translate »
Scroll to Top