ಮಕ್ಕಳ ರಕ್ಷಣೆ ಎಲ್ಲರ ಜವಾಬ್ದಾರಿ: ತಹಶೀಲ್ದಾರ್ ರಾಜೀವ್

ಶಿಡ್ಲಘಟ್ಟ: ಮಕ್ಕಳ ಪಾಲನೆ- ಪೋಷಣೆ ಮಾಡುವ ಜತೆಗೆ ಅವರನ್ನು ವಯಸ್ಕರಾಗುವ ತನಕ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಹಶೀಲ್ದಾರ್ ರಾಜೀವ್ ಹೇಳಿದರು. ನಗರದ ತಾಲ್ಲೂಕು ಕಚೇರಿ ಮುಂಬಾಗದಲ್ಲಿ ಆಯೋಜಿಸಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಬಾಲಭವನ ಸೊಸೈಟಿ, ಸಮಗ್ರ ಶಿಶು ಅಭಿವೃದ್ಧಿ,ತಾಲ್ಲೂಕು ಬಾಲಭವನ ಸೊಸೈಟಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ -1098 ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಜನ ಜಾಗೃತಿ ಜಾಥ ಮತ್ತು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪೋಷಕರು ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಬೇಕು. ಈಗಾಗಲೇ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನೂತನವಾಗಿ ಮಕ್ಕಳ ಸಹಾಯ ವಾಣಿ 1098 ಯೋಜನೆ ಪ್ರಾರಂಭಿಸ ಲಾಗಿದೆ. ಸಂಕಷ್ಟದಲ್ಲಿರುವ ಮಕ್ಕಳನ್ನು ಸಮುದಾಯದಲ್ಲಿ ಕಂಡ ಕೂಡಲೇ ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಕ್ಕಳ ರಕ್ಷಣೆಯಲ್ಲಿ ಸಾರ್ವಜನಿಕರು ಭಾಗಿ ಯಾಗಬೇಕು.ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣೆಗೆ ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿ ಕಾರ್ಯ ನಿರ್ವಹಿಸು ತ್ತಿದೆ ಎಂದು ತಿಳಿಸಿದರು.

ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ನೌತಾಜ್ ಮಾತನಾಡಿ ಜನರು ಮತ್ತು ಮಕ್ಕಳ ಜತೆ ಬೆರೆತು ಕೆಲಸ ಮಾಡುವಂತ ಸಂಘ ಸಂಸ್ಥೆಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಜನಪ್ರತಿನಿಧಿಗಳು ಮುಂತಾದವರಿಗೆ 1098 ಕುರಿತು ತಿಳಿವಳಿಕೆ ನೀಡಿ ಅವರ ಮೂಲಕ ಮಕ್ಕಳಿಗೆ ಸಹಾಯ ಒದಗಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಸರಕಾರವು ಅನೇಕ ಸಹಾಯವಾಣಿಗಳನ್ನು ಮಾಡಿದೆ,ಅದರಲ್ಲಿ ಮಕ್ಕಳ ಸಹಾಯವಾಣಿ-1098 ಉಚಿತ ಕರೆಯನ್ನು ಒದಗಿಸಲಾಗಿದೆ.ಮಕ್ಕಳು ಕರೆ ಮಾಡಿ ಯಾವುದೇ ಭಾಷೆಯಲ್ಲಿ ಮಾತನಾಡಿದರೂ,ಅವರ ಸಮಸ್ಯೆಗೆ 1098 ಪರಿಹಾರ ಒದಗಿಸುತ್ತದೆ ಎಂದರು.

ಇದರ ಗುರಿ ಮತ್ತು ಉದ್ದೇಶ ಕುರಿತು, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ,ತಪ್ಪಿಸಿಕೊಂಡ ಮಕ್ಕಳು,ಹಿಂಸೆ ಮತ್ತು ಅತ್ಯಾಚಾರಕ್ಕೆ ಒಳಗಾದ ಮಕ್ಕಳು,ಭಿಕ್ಷೆ ಬೇಡುವ ಮಕ್ಕಳು,ಕಾಣೆಯಾದ ಮಕ್ಕಳು,ಮಕ್ಕಳ ಕಲ್ಯಾಣ ಸಮಿತಿ ಕುರಿತು ಹಾಗೂ ಯಾವುದೇ ಸಂಕಷ್ಟದಲ್ಲಿರುವ ಮಗುವನ್ನು ಕಂಡಾಗ ಹಾಗೂ ಪಾಲನೆ, ಪೋಷಣೆ ಮತ್ತು ರಕ್ಷಣೆಯ ಅಗತ್ಯತೆಯಿರುವ ಮಕ್ಕಳನ್ನು ಕಂಡಾಗ 1098 ನಂಬರ್‌ಗೆ ಕರೆಮಾಡಿ ತಿಳಿಸಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶ್ರೀಕಾಂತ್,ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ,ನಗರಸಭೆ ಸಿಬ್ಬಂದಿ ಮುರುಳಿ,ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಮಹೇಶ್,ಲಕ್ಷ್ಮಿ,ಅರುಣಾ ಮತ್ತು ಇತರರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top