ಭಾರತದಲ್ಲಿ ಶಕ್ತಿ ಕೇಂದ್ರೀತವಾಗಿರುವ ಕ್ರೈಸ್ತರು

ನ್ಯೂಯಾರ್ಕ್ ಟೈಮ್ಸ್ ನಲ್ಲಿ 2021 ರ ಡಿಸೆಂಬರ್ 22 ರಂದು “ಬಂಧನಗಳು, ಹಲ್ಲೆಗಳು ಮತ್ತು ರಹಸ್ಯ ಪ್ರಾರ್ಥನೆಗಳು: ಭಾರತದ ಕ್ರೈಸ್ತರ ಕಿರುಕುಳದ ಒಳಗೆ” ಎಂಬ ಶೀರ್ಷಿಕೆಯ ಲೇಖನ ದುರದೃಷ್ಟಕರ ಮತ್ತು ತಪ್ಪುದಾರಿಗೆ ಎಳೆಯುವಂತಿದೆ. ಭಾರತ ಜಗತ್ತಿನ ಅತ್ಯಂತ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾಗಿದೆ ಎಂಬುದು ತಿಳಿದಿರುವ ಸತ್ಯ. ಪ್ರಪಂಚದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರ ಎಂಬ ಹೆಮ್ಮೆಯೂ ಭಾರತಕ್ಕಿದೆ. ವಾಕ್ ಸ್ವಾತಂತ್ರ್ಯ, ಧಾರ್ಮಿಕ ಮತ್ತು ಸಹಭಾಗಿತ್ವದಂತಹ ಹೆಚ್ಚಿನವುಗಳು ಭಾರತದಲ್ಲಿ ಆಚರಿಸಲಾಗುವ ಜೀವನದ ತತ್ವಗಳಾಗಿವೆ. ದೇಶದಲ್ಲಿ ಶೇ 80 ರಷ್ಟು ಹಿಂದುಗಳು. ಸರಿ ಸುಮಾರು ಶೇ 15 ರಷ್ಟು ಮುಸ್ಲಿಮರು, ಶೇ 2.3 ರಷ್ಟು ಕ್ರೈಸ್ತರಿದ್ದಾರೆ. ಸ್ವಾತಂತ್ರ್ಯ ಪಡೆದ ನಂತರ ಕ್ರೈಸ್ತರ ಶೇಕಡಾವಾರು ಪ್ರಮಾಣ ಸ್ಥಿರವಾಗಿ ಬೆಳೆದಿದೆ. ಜೊತೆಗೆ ಭಾರತದ ಒಟ್ಟಾರೆ ಜನಸಂಖ್ಯೆಯು ಸಹ ಹೆಚ್ಚಳವಾಗಿದ್ದು, ಭಾರತೀಯರಿಗೆ ಧರ್ಮ ಎಂದರೆ ಅದು ಜೀವನ ವಿಧಾನವಾಗಿದೆ.

ಈ ಲೇಖನಕ್ಕೆ ಪ್ರತಿಕ್ರಿಯೆಯಾಗಿ ರಕ್ಷಣಾತ್ಮಕ ಅಥವಾ ರಾಜಕೀಯ ಧ್ವನಿಯನ್ನು ತೆಗೆದುಕೊಳ್ಳದೇ ಪ್ರತಿಯೊಬ್ಬರ ಸಮಯವನ್ನು ಗೌರವಿಸಲು ಬಯಸಿದ್ದು, ತಪ್ಪು ಹಾದಿಗೆಳೆಯುವ ಮೂರು ವಿಷಯಗಳನ್ನು ಇಲ್ಲಿ ವಿವರಿಸುತ್ತೇನೆ.

1 ಕ್ರೈಸ್ತ ವಿರೋಧಿ ಹೋರಾಟಗಾರರು ಹಳ್ಳಿಗಳ ಮೂಲಕ ವ್ಯಾಪಿಸುತ್ತಿದ್ದಾರೆ. ಚರ್ಚ್ ಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಕ್ರೈಸ್ತ ಸಾಹಿತ್ಯವನ್ನು ಸುಡುತ್ತಿದ್ದಾರೆ. ಶಾಲೆಗಳ ಮೇಲೆ ದಾಳಿ ಮಾಡುತ್ತಿದ್ದು, ಆರಾಧಕರ ಮೇಲೆ ಹಲ್ಲೆ ಮಾಡುತ್ತಿದ್ದಾರೆ.

  1. 2014 ರಲ್ಲಿ ಎಲ್ಲವೂ ಬದಲಾಯಿತು. 2014 ರಿಂದ ಕ್ರಿಶ್ಚಿಯನ್ನರ ವಿರುದ್ಧ ಅಪರಾಧಗಳು ದ್ವಿಗುಣಗೊಂಡಿವೆ.
  2. ಕೆಲವು ವರ್ಷಗಳ ಹಿಂದೆ ರಾಜಧಾನಿ ನವದೆಹಲಿಯಲ್ಲಿ ಕ್ಯಾಥೋಲಿಕ್ ಚರ್ಚ್ ಗಳನ್ನು ಧ್ವಂಸಗೊಳಿಸಿದ ನಂತರ ಕ್ರಿಶ್ಚಿಯನ್ ಮುಖಂಡರು ನೆರವಿಗಾಗಿ ಮೋದಿ ಅವರಿಗೆ ಮನವಿ ಮಾಡಿದರು. ಅವರು ನಿರಾಸಕ್ತರಾಗಿದ್ದರು, ನಿಯೋಗದಲ್ಲಿವರನ್ನು ಅಪಹಾಸ್ಯ ಮಾಡುತ್ತಿದ್ದರು ಮತ್ತು ದಾಳಿಗಳ ಬಗ್ಗೆ ಎಂದಿಗೂ ಮಾತನಾಡಲಿಲ್ಲ. 2014 ರ ಡಿಸೆಂಬರ್ ನಲ್ಲಿ ಪ್ರಧಾನಮಂತ್ರಿಯಗಳ ನಿವಾಸದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಭಾಗವಹಿಸಿದ್ದ ಮೂವರು ಪಾದ್ರಿಗಳ ಪ್ರಕಾರ ಅವರು ಡಾನ್ ಗಳಂತೆ ವರ್ತಿಸಿದರು.
    ಈ ಮೇಲಿನ ವಿಚಾರವು ಕ್ರಿಶ್ಚಿಯನ್ನರ ಏಕಾಗ್ರತೆ, ಕಿರುಕುಳವು ಅತಿರೇಖವಾಗಿದೆ ಎಂಬ ಭಾವನೆಯನ್ನು ಬಿಂಬಿಸುತ್ತದೆ. ಇದು ಸತ್ಯಕ್ಕೆ ದೂರ. ನಾವು ಗೊಂದಲಕ್ಕೆ ಒಳಗಾಗಿದ್ದೇವೆ ಮತ್ತು ಪ್ರಸ್ತುತ ಸಂಗತಿಗಳನ್ನು ಹೊರತುಪಡಿಸಿ ಹೇಗೆ ಸೂಕ್ತವಾಗಿ ಪ್ರತಿಕ್ರಯಿಸಬೇಕು ಎಂಬ ಬಗ್ಗೆ ನಮಗೆ ಶೂನ್ಯ ಆವರಿಸಿದೆ. ಕ್ರೈಸ್ತರು ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಾಲೆಗಳು, ಕಾಲೇಜುಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳನ್ನು ನಡೆಸುತ್ತಿದ್ದು, ನಿರಾಶ್ರಿತರಿಗೆ ಆಶ್ರಯದಾತರಾಗಿದ್ದಾರೆ. ಈ ಸಂಸ್ಥೆಗಳಿಂದಾಗಿ ಭಾರತದಲ್ಲಿ ಕ್ರೈಸ್ತರು ಶಕ್ತಿ ಕೇಂದ್ರಿತವಾಗಿದ್ದಾರೆ. ಆದರೂ ಅವರು ಭಾರತದ ಜನಸಂಖ್ಯೆಯ ಶೇ 2.3 ರಷ್ಟಿದ್ದಾರೆ. ಈ ಸಂಸ್ಥೆಗಳು ದೇಶಕ್ಕೆ ಅಪರಿಮಿತ ಕೊಡುಗೆ ನೀಡುತ್ತಿವೆ. ಹಾಲಿ ಸರ್ಕಾರ ಪ್ರಚಾರ ಮಾಡಿದ ಪ್ರಮುಖ ಕಾರ್ಯಸೂಚಿ ಇದ್ದರೆ ಅದು ಬಡವರ ಕಲ್ಯಾಣ ಮತ್ತು ಅಭಿವೃದ್ಧಿ. ಕ್ರಿಶ್ಚಿಯನ್ನರಿಗೆ ಈ ಗುರಿಗಳೊಂದಿಗೆ ಬಲವಾಗಿ ಹೊಂದಾಣಿಕೆ ಮಾಡುವುದು ಸಹಜವಾಗಿದೆ. ಹೌದು ದಾರಿ ತಪ್ಪಿದ ಘಟನೆಗಳು ನಡೆದಿವೆ. ಈ ಘಟನೆಗಳ ವಿಚಾರದಲ್ಲಿ ನಾವು ಕುರುಡರಾಗಲು ಸಾಧ್ಯವಿಲ್ಲ. ಇಂತಹವರನ್ನು ಕಾನೂನಿನ ಮುಂದೆ ತರಬೇಕಾಗಿದೆ.

ಇನ್ನು ಮೂರನೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸರ್ಕಾರ ರಚಿಸಿದ ಕೆಲವು ತಿಂಗಳ ನಂತರ ಅವರನ್ನು ಭೇಟಿ ಮಾಡಿದ ಕ್ರಿಶ್ಚಿಯನ್ ನಾಯಕರ ನಿಯೋಗದಲ್ಲಿ ನಾನೂ ಇದ್ದೆ. ಏಕೆಂದರೆ ಈ ಸಭೆಯನ್ನು ನಾನೇ ಆಯೋಜಿಸಿದ್ದೆ. ಅವರು ಅತ್ಯಂತ ಸೌಹಾರ್ದವಾಗಿದ್ದರು, ಕ್ರಿಸ್ ಮಸ್ ಕೇಕ್ ಕತ್ತರಿಸಿ ದೊಡ್ಡ ನಿಯೋಗದಲ್ಲಿದ್ದ ಎಲ್ಲರಿಗೂ ಹಂಚಿದರು. 2014 ರ ಚುನಾವಣೆಗೂ ಮುನ್ನ ದೆಹಲಿಯಲ್ಲಿ ನಡೆದ ಚರ್ಚ್ ಗಳ ಮೇಲಿನ ದಾಳಿಯ ವಿಷಯವನ್ನು ಪ್ರಸ್ತಾಪಿಸಿದ್ದು ಸತ್ಯ. ಚುನಾವಣೆಗೂ ಕೆಲವು ವಾರಗಳ ಮುನ್ನ 11 ಚರ್ಚ್ ಗಳ ಮೇಲೆ ದಾಳಿ ನಡೆದಿತ್ತು. ಈ ಎಲ್ಲಾ ಚರ್ಚ್ ಗಳಿಗೂ ನಾನು ಭೇಟಿ ನೀಡಿದ್ದೆ. ಈ ದಾಳಿಯ ಹಿಂದೆ ಬಿಜೆಪಿಯ ಕೈವಾಡವಿದ್ದು, ಮೋದಿ ಅಧಿಕಾರಕ್ಕೆ ಬಂದಲ್ಲಿ ಈ ದೇಶದ ಎಲ್ಲಾ ಕ್ರಿಶ್ಚಿಯನ್ ಸಂಸ್ಥೆಗಳ ಭವಿಷ್ಯ ಇದೇ ಆಗಲಿದೆ ಎಂದು ರಾಷ್ಟ್ರೀಯ ಮತ್ತು ಜಾಗತಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ತಪ್ಪಾಗಿ ವರದಿ ಮಾಡಿದ್ದವು. ನಾವು ಈ ವಿಷಯವನ್ನು ಪ್ರಸ್ತಾಪಿಸಿದಾಗ ಪ್ರಧಾನಮಂತ್ರಿಯರು ಧಾರ್ಮಿಕ, ರಾಜಕೀಯ ಸಂಬಂಧವನ್ನು ಲೆಕ್ಕಿಸದೇ ಅಪರಾಧಿಗಳನ್ನು ಶಿಕ್ಷಿಸಲಾಗುವುದು ಎಂದು ಸ್ಪಷ್ಟವಾಗಿ ಮತ್ತು ಒತ್ತಿ ಹೇಳಿದರು. ಬಳಿಕ ಈ ಯಾವುದೇ ಚರ್ಚ್ ಗಳ ಧ್ವಂಸಕ್ಕೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ತನಿಖೆಯಿಂದ ತಿಳಿದು ಬಂತು. ಹೆಚ್ಚಿನ ಆರೋಪಿಗಳು ರಾಜಕೀಯ ಪಕ್ಷಕ್ಕೆ ಸೇರಿದವರು ಎಂದು ತನಿಖೆ ಬಹಿರಂಗಪಡಿಸಿತು. ತಮ್ಮನ್ನು ಬಿಜೆಪಿ ವಿರೋಧಿ ಎಂದು ಪ್ರತಿಬಿಂಬಿಸಿ. ಬಿಜೆಪಿ ಭಯ ಹುಟ್ಟು ಹಾಕುವ ಮೂಲಕ ದೆಹಲಿಯಲ್ಲಿ ತನ್ನ ನೆಲೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದರು. ಈ ದಾಳಿಯ ಹಿಂದೆ ಯಾವ ಪಕ್ಷ ಇದೆ ಎಂದು ನಾವು ಹೆಸರಿಸಲು ಬಯಸುವುದಿಲ್ಲ. ಧಾರ್ಮಿಕತೆ ಪ್ರಜಾಸತ್ತಾತ್ಮಕ ನಂಬಿಕೆಯಾಗಿದ್ದು, ಅದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಆತ, ಆಕೆ ಹೇಳಿದಂತೆ ಈ ವಿಷಯ ರಾಜಕೀಯವಾಗಿ ಬದಲಾಗಬಾರದು.

ಅಲ್ಪ ಸಂಖ್ಯಾತರ ಮೇಲಿನ ಯಾವುದೇ ದಾಳಿಗಳು ಸ್ವೀಕಾರಾರ್ಹವಲ್ಲ. ಇಂತಹವರು ಅಪರಾಧಿಗಳಾಗಿದ್ದು, ಈ ತೆರನಾದ ಯಾವುದೇ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಅಲ್ಲದೇ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಮಂತ್ರಿಯವರು ರಾಜ್ಯ ಸರ್ಕಾರಗಳಿಗೂ ಸೂಚನೆ ನೀಡಿದ್ದರು. ವಸುದೈವಕ ಕುಟುಂಬಕಂನಲ್ಲಿನ ನಂಬಿಕೆ, ಮಾನವೀಯತೆ ಒಂದೇ ಆಗಿದೆ. ಇದು ಪಾಶ್ಚಿಮಾತ್ಯ ಚಿಂತನೆಗಳಿಗಿಂತಲೂ ಹಿಂದಿನದು. ಭಾರತೀಯ ನಾಗರಿಕತೆಯ ಮೂಲ ಇದಾಗಿದೆ. 2014 ರಲ್ಲಿ ಪ್ರಧಾನಮಂತ್ರಿಯವರ ಚುನಾವಣಾ ಪ್ರಚಾರದ ಘೋಷವಾಕ್ಯವೆಂದರೆ “ಸಬ್ ಕಾ ಸಾಥ್ ಸಾಬ್ ಕಾ ವಿಕಾಸ್” ಅಂದರೆ ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿಗಾಗಿ ಎಂಬುದಾಗಿತ್ತು. 2015 ರ ಫೆಬ್ರವರಿ 16 ರಂದು ದೆಹಲಿಯ ವಿಜ್ಞಾನ ಭವನದಲ್ಲಿ ಕ್ರಿಶ್ಚಿಯನ್ ನಾಯಕರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿಯವರು “ನನ್ನ ಸರ್ಕಾರ ನಂಬಿಕೆಯ ಸಂಪೂರ್ಣ ಸ್ವಾತಂತ್ರ್ಯವನ್ನು ಖಚಿತಪಡಿಸುತ್ತದೆ” ಎಂದು ಹೇಳಿದ್ದರು. ಬಲವಂತ ಅಥವಾ ಅನಪೇಕ್ಷಿತ ಪ್ರಭಾವವಿಲ್ಲದೇ ತನ್ನ ಆಯ್ಕೆಯ ಧರ್ಮವನ್ನು ಉಳಿಸಿಕೊಳ್ಳಲು ಇಲ್ಲವೆ ಅಳವಡಿಸಿಕೊಳ್ಳಲು ಪ್ರತಿಯೊಬ್ಬರಿಗೂ ನಿರಾಕರಣೆ ಮಾಡಲಾಗದ ಹಕ್ಕಿದೆ. “ತಮ್ಮ ಸರ್ಕಾರ ಬಹುಸಂಖ್ಯಾತರ ಅಥವಾ ಅಲ್ಪ ಸಂಖ್ಯಾತರಿಗೆ ಸೇರಿದ ಯಾವುದೇ ಧಾರ್ಮಿಕ ಗುಂಪನ್ನು ಬಹಿರಂಗವಾಗಿ ಇಲ್ಲವೆ ರಹಸ್ಯವಾಗಿ ಇತರರ ವಿರುದ್ಧ ದ್ವೇಷವನ್ನು ಪ್ರಚೋದಿಸಲು ಅವಕಾಶ ನೀಡುವುದಿಲ್ಲ. ನಮ್ಮ ಸರ್ಕಾರ ಎಲ್ಲಾ ಧರ್ಮಗಳಿಗೂ ಸಮಾನ ಗೌರವ ನೀಡುತ್ತದೆ. ಭಾರತ ಬುದ್ಧ ಮತ್ತು ಗಾಂಧಿ ನಾಡು. ಪ್ರತಿಯೊಬ್ಬ ಭಾರತೀಯರಿಗೂ ಎನ್.ಡಿ.ಎ ಆಡಳಿತ ಧಾರ್ಮಿಕ ಗೌರವವನ್ನು ಎತ್ತಿ ಹಿಡಿಯುತ್ತದೆ. ಯಾವುದೇ ನೆಪದಲ್ಲಿ ನಾವು ಯಾವುದೇ ಧರ್ಮದ ವಿರುದ್ಧ ಹಿಂಸೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಂತಹ ಹಿಂಸೆಯನ್ನು ಬಲವಾಗಿ ಖಂಡಿಸುತ್ತೇನೆ. ಈ ದಿಸೆಯಲ್ಲಿ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ.” ಎಂದು ಹೇಳಿದ್ದ.ರು 2014 ರ ನಂತರ ಭಾರತದ ಕ್ರೈಸ್ತರ ನಿಯೋಗವನ್ನು ಕನಿಷ್ಠ ಮೂರು ಬಾರಿ ಪ್ರಧಾನಮಂತ್ರಿಯವರ ಬಳಿಗೆ ಕರೆದೊಯ್ದಿದ್ದೇನೆ. ಈ ಸಂದರ್ಭದಲ್ಲಿ ಕ್ರೈಸ್ತರ ರಕ್ಷಣೆ ಕುರಿತು ತಮ್ಮ ಬದ್ಧತೆ ವ್ಯಕ್ತಪಡಿಸಿದ್ದಾರೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರತಿಯೊಬ್ಬರೂ ಪ್ರಧಾನಮಂತ್ರಿಯವರನ್ನು ಮತ್ತವರ ಪಕ್ಷದ ಸರ್ಕಾರವನ್ನು ತಮ್ಮ ದೃಷ್ಟಿಕೋನದಲ್ಲಿ ಟೀಕಿಸಲು ಹಕ್ಕಿದೆ. ಆದಾಗ್ಯೂ ನಮ್ಮ ಪ್ರಜಾಪ್ರಬುತ್ವ ವ್ಯವಸ್ಥೆಗಳು ಮತ್ತು ನಂಬಿಕೆಗಳನ್ನು ಉಲ್ಲಂಘಿಸುವ ಯಾವುದೇ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ತಮ್ಮದೇ ಆದ ರೀತಿಯ ಕಥಾನಕವನ್ನು ಸೃಷ್ಟಿಸಿದ್ದಕ್ಕಾಗಿ ನ್ಯೂ ಯಾರ್ಕ್ ಟೈಮ್ಸ್ ಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ. 1.4 ಶತಕೋಟಿ ಜನ ಸಂಖ್ಯೆಯ ಶ್ರೀಮಂತ ದೇಶದೊಳಗೆ ಅವರು ಹೇಳಿದಂತೆ ಅಲ್ಲಲ್ಲಿ ನಡೆದ ಘಟನೆಗಳು ಮಾದರಿಯಲ್ಲ. ಇವು ಆತಂಕದಿಂದ ಕೂಡಿದೆ ಎಂದು ಹೇಳಿರುವುದನ್ನು ನಾವು ವಿಷಾದಿಸುತ್ತೇವೆ. ಈ ಕಥಾನಕ ಸರಿಪಡಿಸಲಾಗದ ರಾಜಕೀಯವಾಗಿದೆ ಎಂದು ನಾವು ವಿಷಾದಿಸುತ್ತೇವೆ. 2021 ರಲ್ಲಿ ಮಧ್ಯ ಪ್ರದೇಶದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಗೆ ತರಲಾಗಿದ್ದು, ಸ್ವಲ್ಪಸಂಶೋಧನೆ ಮಾಡಿದರೆ ಮಸೂದೆ 1968 ರಲ್ಲಿ ಮಂಡಿಸಿ ಅಂಗೀಕರಿಸಲಾಯಿತು. ಕಾಂಗ್ರೆಸ್ ಆಗ ಅಧಿಕಾರದಲ್ಲಿತ್ತು. ಆದರೆ ಮತ್ತೊಮ್ಮೆ ಇದನ್ನು ರಾಜಕೀಯ ವಿಷಯವನ್ನಾಗಿ ಮಾಡಲು ಬಯಸುವುದಿಲ್ಲ. ಏಕೆಂದರೆ ಇವುಗಳು ಮಾನವ ಹಕ್ಕುಗಳ ಕಾಳಜಿಗಳಾಗಿವೆ. ನಮ್ಮ ಪ್ರೀತಿಯ ಭೂಮಿಯ ಶ್ರೀಮಂತ ಧಾರ್ಮಿಕ ವೈವಿದ್ಯತೆಯನ್ನು ರಕ್ಷಿಸುವ ಮತ್ತು ನಮ್ಮ ಶಾಶ್ವತ ಬದ್ಧತೆಯನ್ನು ಪುನರುಚ್ಚರಿಸಲು ಬಯಸುತ್ತೇವೆ.

[ಕೆ.ಜೆ. ಅಲ್ಫೋನ್ಸ್ ಅವರು ನಿವೃತ್ತ ಐಎಸ್ ಅಧಿಕಾರಿ ಮತ್ತು ಪ್ರಸ್ತುತ ಸಂಸದರು. 2017 -19 ರ ಅವಧಿಯಲ್ಲಿ ಪ್ರವಾಸೋದ್ಯಮ ಖಾತೆ [ಸ್ವತಂತ್ರ್ಯ] ಸಚಿವರಾಗಿದ್ದರು]

Leave a Comment

Your email address will not be published. Required fields are marked *

Translate »
Scroll to Top