ಜಿಲ್ಲೆಗಳುಬಳ್ಳಾರಿವೀಡಿಯೊಗಳುಹೊಸಪೇಟೆ

ಕಠಿಣ ಲಾಕ್ಡೌನ್ಗೆ ಬಳ್ಳಾರಿ ಸ್ತಬ್ಧ

ಬಳ್ಳಾರಿ : ಇಡೀ ರಾಜ್ಯಾದ್ಯಂತ ವಿಧಿಸಲಾದ ಲಾಕ್‌ಡೌನ್‌ಗೆ ಇಂದು ಇಡೀ ಬಳ್ಳಾರಿ ನಗರವೇ ಸ್ತಬ್ಧಗೊಂಡಿದೆ.

          ಕಳೆದ ಏ.೨೮ರಿಂದ ಮೇ.೧೨ರವರೆಗೆ ವಿಧಿಸಲಾಗಿದ್ದ ಸೆಮಿಲಾಕ್‌ಡೌನ್‌ನಿಂದ ಯಾವುದೇ ಪ್ರಯೋಜನೆಯಾಗದ ಹಿನ್ನೆಲೆಯಲ್ಲಿ ಹಲವಾರು ಸಭೆಗಳನ್ನು ನಡೆಸಿದ ಬಳಿಕ ಲಾಕ್‌ಡೌನ್‌ಗೆ ತೀರ್ಮಾನ ಮಾಡಿದ್ದ ಸಿಎಂ ಯಡಿಯೂರಪ್ಪನವರು ಲಾಕ್‌ಡೌನ್ ಪದ ಬಳಕೆ ಮಾಡದೆಯೇ ಲಾಕ್‌ಡೌನ್ ಘೋಷಿಸಿದರು.

          ಮೇ.೧೦ರಿಂದ ಮೇ.೨೪ರವರೆಗೆ ೧೪ದಿನಗಳ ಕಾಲ ಕಠಿಣ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಬೆಳಗ್ಗೆ ೬ ಗಂಟೆಯಿಂದ ೧೦ ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅನುವು ಮಾಡಿಕೊಡಲಾಗಿದೆ. ಅದನ್ನೇ ಆಸರೆಯಾಗಿ ತೆಗೆದುಕೊಂಡ ಸಾರ್ವಜನಿಕರು ದಿನಬಳಕೆ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಮುಗಿಬಿದ್ದಿದ್ದು ಕಂಡು ಬಂತು. ೧೦ ಗಂಟೆಯ ವೇಳೆಗೆ ನಗರದ ಅನೇಕ ಕಡೆಗಳಲ್ಲಿ ರಸ್ತೆಗೆ ಬೊಂಬುಗಳನ್ನು ಅಡ್ಡ ಕಟ್ಟಲಾಗಿದ್ದು, ವಾಹನಗಳು ಓಡಾಡಲು ಆಗದಂತೆ ಮಾಡಲಾಗಿತ್ತು.

          ಇಷ್ಟಾದರೂ ಜನಸಾಮಾನ್ಯರು ಮಾತ್ರ ತಮಗೆ ಕೊರೋನಾ ಎಂದರೆ ಭಯವೇ ಇಲ್ಲದಂತೆ ಓಡಾಡುವುದು ಕಂಡು ಬಂದಿತು. ಅಲ್ಲದೆ ಕೆಲ ಕಡೆಗಳಲ್ಲಿ ದ್ವಿಚಕ್ರವಾಹನಗಳನ್ನು ಸೀಸ್ ಮಾಡಿರುವುದಾಗಿ ತಿಳಿದುಬಂದಿದೆ. ಲಾಕ್‌ಡೌನ್ ಕಠಿಣ ಜಾರಿಗಾಗಿ ಪೊಲೀಸ್ ಇಲಾಖೆಯು ಕಟ್ಟುನಿಟ್ಟಾಗಿ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಕಂಡು ಬಂದಿದೆ.

Leave a Reply