ಟಿ ಬಿ ಸೋಲಿಸಿ, ದೇಶ ಗೆಲ್ಲಿಸಿ -ಅಭಿಯಾನ

ಮಸ್ಕಿ :ಕ್ಷಯರೋಗದ ಬಗ್ಗೆ ಸಾರ್ವಜನಿಕರು ಮುಕ್ತವಾಗಿ ಮಾತನಾಡುವ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ, ಕ್ಷಯ ಮುಕ್ತ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಮಾಡಬೇಕಾದ ಸಮಯ ಇದಾಗಿರುತ್ತದೆ ಎಂದು ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಡಾ. ಮೌನೇಶ ಹೇಳಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಸ್ಕಿ ಸರ್ಕಾರಿ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಆಜಾದಿ ಕಾ ಅಮೃತ ಮಹೋತ್ಸವ ಅಭಿಯಾನ ಅಂಗವಾಗಿ ವಿಶ್ವ ಕ್ಷಯರೋಗ ಕುರಿತು ಜಾಗೃತಿ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಕ್ಷಯರೋಗವು ಒಂದು ಸಾಂಕ್ರಾಮಿಕ ಖಾಯಿಲೆಯಾಗಿದ್ದು, 2025 ರೊಳಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಭಾರತವನ್ನು ಕ್ಷಯ ಮುಕ್ತ ಮಾಡುವ ನಿಟ್ಟಿನಲ್ಲಿ “ಟಿಬಿ ಸೋಲಿಸಿ, ದೇಶ ಗೆಲ್ಲಿಸಿ” ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ. “ಟಿಬಿ ಸೋಲಿಸಿ, ದೇಶ ಗೆಲ್ಲಿಸಿ ಅಭಿಯಾನದಡಿಯಲ್ಲಿ “ಕ್ಷಯಮುಕ್ತ ಕರ್ನಾಟಕ” ಅಭಿಯಾನವನ್ನು ಕೂಡ ನಡೆಸಲಾಗುತ್ತಿದ್ದು ಅಭಿಯಾನ ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕೆಂದು ಹೇಳಿದರು.

ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ,ಚಿತ್ರಕಲೆ,ರಸಪ್ರಶ್ನೆ ಸ್ಪರ್ಧೆ ಮೂಲಕ ಕ್ಷಯರೋಗದ ಅರಿವು ಮೂಡಿಸುವುದು, ಗೋಡೆ ಬರಹ ಮೂಲಕ ಕ್ಷಯರೋಗದ ಜಾಗೃತಿ ಮೂಡಿಸುವುದು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು. “ಕ್ಷಯ ಮುಕ್ತ ಕರ್ನಾಟಕ”ದ ನಮ್ಮ ಪ್ರಯತ್ನಗಳನ್ನು ಪ್ರದರ್ಶಿಸಲು, ಕೆಂಪು ದೀಪ ಕಾರ್ಯಕ್ರಮ ಮೂಲಕ ಟಿ ಬಿ ಹಾನಿಕಾರಕ ಪರಿಣಾಮದ ಬಗ್ಗೆ ಗಮನ ಸೆಳೆಯಲು ಮಾರ್ಚ್ 24 ರಂದು ಪ್ರಮುಖ ಸ್ಮಾರಕಗಳು ಹಾಗೂ ಆಯ್ದ ಸರಕಾರಿ ಕಟ್ಟಡಗಳಲ್ಲಿ ಕೆಂಪು ದೀಪವನ್ನು ಬೆಳಗಿಸಲು ಕ್ರಮವಹಿಸಲಾಗಿದೆ ಕ್ಷಯರೋಗ ಹರಡುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರತಿ ಕ್ಷಯರೋಗಿಯ ಮನೆಯ ಸದಸ್ಯರಿಗೆ ತಪಾಸಣೆ ಮಾಡಿ ಆರಂಭಿಕ ಹಂತದಲ್ಲಿ ಕ್ಷಯಪತ್ತೆ ಮಾಡಿ (ಎಲ್.ಟಿ.ಬಿ.ಐ) ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರ ಸೂಚಿಸಿದ್ದು ಯೋಜನೆಯನ್ನು ಕಾರ್ಯಗತ ಮಾಡಲು ತಯಾರಿ ನಡೆಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೋಹಿನ್ ಪಾಷಾ ರಾಯಚೂರು ಜಿಲ್ಲಾ ಸಂಯೋಜಕರು ರವರು ಕ್ಷಯರೋಗ ದಿನವನ್ನು ಆಚರಣೆ ಮಾಡುವ ಉದ್ದೇಶಗಳ ಬಗ್ಗೆ ವಿವರಿಸಿ, ಕ್ಷಯರೋಗ ನಿರ್ಮೂಲನೆಗೆ ಅನೇಕ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕ್ಷಯರೋಗದ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಜನ ಜಾಗೃತಿ ಶಿಭಿರಗಳು ಮಾಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ಷಯರೋಗ ಪತ್ತೆ ಮಾಡುವುದು ಸಾಧ್ಯವಾಗುತ್ತದೆ ಎಂದರು. ಖಾಸಗಿ ವಲಯದಿಂದ ಹೆಚ್ಚಿನ ಕ್ಷಯರೋಗ ಪ್ರಕರಣಗಳ ಪತ್ತೆಯಾಗುವಂತೆ ಕ್ರಮವಹಿಸುವದರೊಂದಿಗೆ, ಕ್ಷಯರೋಗ ಬೇರೆಯವರಿಗೆ ಹರಡುವುದನ್ನ ಮತ್ತು ಡಿ.ಆರ್ ಟಿಬಿ ಆಗದಂತೆ ತಡೆಯಬೇಕಾದ ಅನಿವಾರ್ಯತೆಯಿದ್ದು, ಇದಕ್ಕೆ ಎಲ್ಲರ ಸಹಕಾರದ ಅವಶ್ಯಕತೆಯಿರುತ್ತದೆ ಅಲ್ಲದೇ ಕ್ಷಯರೋಗ ನಿರ್ಮೂಲನೆಗೆ ಪ್ರತಿಯೊಬ್ಬ ನಾಗರಿಕನು ತಮ್ಮ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಎಂದರು. ಕ್ಷಯರೋಗ ದಿನದ ಪ್ರಯುಕ್ತ ಎನ್.ಟಿ.ಇ.ಪಿ ಸಿಬ್ಬಂದಿಗಳು ನಗರದ ಪ್ರಮುಖ ಬೀದಿ ಹಾಗೂ ಮಾರುಕಟ್ಟೆ ಬಳಿ ಧ್ವನಿವರ್ಧಕ ಮೂಲಕ ಕ್ಷಯ ಅರಿವು ಘೋಷಣೆ ಹೇಳುತ್ತಾ ಮಾಸ್ಕ ಹಾಗೂ ಕರ ಪತ್ರಗಳ ವಿತರಿಸಿದರು ಹಾಗೂ ಆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಕೈಗೊಂಡರು. ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಮೋಹಿನ್ ಪಾಷಾ, ಮಸ್ಕಿ ತಾಲೂಕು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವ ಶ್ರೀ, ಡಾ. ಮೌನೇಶ, ತಾಲೂಕ ಕ್ಷಯರೋಗದ ನಿರ್ಮಲನ ಅಧಿಕಾರಿ ದೇವರಾಜ್, ಆರೋಗ್ಯ ನಿರೀಕ್ಷಣಾ ಅಧಿಕಾರಿ ಗದ್ದಪ್ಪ, ಹುಸೇನಪ್ಪ, ಆಲಂ ಪಾಷಾ, ಮತ್ತು ಕಾಲೇಜಿನ ಪ್ರಾಚಾರ್ಯರಾದ ರಂಗಪ್ಪ, ಉಪನ್ಯಾಸಕರಾದ ಶರಣಪ್ಪ, ಮಾಂತೇಶ ಮಸ್ಕಿ, ಶಂಕರಗೌಡ, ವಿನಾಯಕ್ ರಾವ್, ನಿಂಗಪ್ಪ, ರಂಗನಾಥ್, ಹಾಗೂ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top