ಜಿಲ್ಲೆಗಳುತುಮಕೂರುವೀಡಿಯೊಗಳು

ಇಂದಿರಾ ಕ್ಯಾಂಟೀನ್ ಮಾಜಿ ಶಾಸಕ ಭೇಟಿ

ತಿಪಟೂರು: ತಾಲ್ಲೂಕಿನ ಬಸ್ ನಿಲ್ಲದಾಣದ ಬಳಿ ಇರುವ ಇಂದಿರಾ ಕ್ಯಾಂಟೀನ್‌ಗೆ ಮಾಜಿ ಶಾಸಕ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಸೂಚಿಸಿದರು.  

                ಬಡವರ ಹಸಿವನ್ನು ತಣಿಸುವ ಸಿದ್ದರಾಮಯ್ಯನವರ ಸರ್ಕಾರದ ಅನ್ನಭಾಗ್ಯ ಮತ್ತು ಇಂದಿರಾ ಕ್ಯಾಂಟೀನ್‌ಗಳಂತಹ ಜನಪರ ಯೋಜನೆಗಳನ್ನು ಬಂದ್ ಮಾಡಲಾಗಿದ್ದ ಸರ್ಕಾರದ ನಡೆಗೆ ಹೈಕೋರ್ಟ್ ಆದೇಶ ನೀಡಿ ಮತ್ತೆ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯುವಂತೆ ಮಾಡಿದೆ.

                ಮಾಜಿ ಶಾಸಕ ಕೆ.ಷಡಕ್ಷರಿ ಅವರ ಕನಸಿನ ಕೂಸಾದ ತಿಪಟೂರು ನಗರದ ಹೃದಯ ಭಾಗದಲ್ಲಿನ ಇಂದಿರಾ ಕ್ಯಾಂಟೀನ್  ವ್ಯವಸ್ಥೆ ಹಾಗೂ ರುಚಿ ಶುಚಿ ಬಗ್ಗೆ ವಿಚಾರಣೆ ಮಾಡಿ ಉತ್ತಮ ಗುಣ ಮಟ್ಟದ ಆಹಾರ ವ್ಯವಸಿತವಾಗಿ ನೀಡಬೇಕು ಎಂದು ಸೂಚನೆ ನೀಡಿದರು

                ಈ ವೇಳೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಡೇನೂರು ಕಾಂತರಾಜು, ನಗರಸಭಾ ಸದಸ್ಯರಾದ ತರಕಾರಿ ಪ್ರಕಾಶ್, ಸದಸ್ಯ ಯೋಗೀಶ್, ಶ್ರೀನಿವಾಸ್, ಲೋಕನಾಥ್‌ಸಿಂಗ್, ಸುನಿಲ್ ಮ್ಯಾಗಲ ಮನೆ  ಇತರರಿದ್ದರು.

Leave a Reply