ಸೂರತ್‌ನಲ್ಲಿ ಇಂದು ಬೆಂಕಿ ದುರಂತ

ಸೂರತ್,ಜನವರಿ,೨೦ : ಸೂರತ್‌ನಲ್ಲಿ ಇಂದು ಬೆಂಕಿ ದುರಂತ ಸಂಭವಿಸಿದ್ದು ಇಲ್ಲಿನ ಪಾಲ್ಸಾನಾ ಬಳಿಯ ಸೌಮ್ಯಾ ಡೈಯಿಂಗ್ ಮಿಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಕಾರ್ಖಾನೆ ಬೆಂಕಿಗೆ ಆಹುತಿಯಾಗಿದೆ.

ಬೆಳ್ಳಂಬೆಳಿಗ್ಗೆ ೩.೩೦ರ ಸಮಯದಲ್ಲಿ ಈ ದುರಂತ ಸಂಭವಿಸಿದೆ. ಕಾರ್ಖಾನೆಯ ಎಲ್ಲಾ ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದ್ದು ಕಾರ್ಖಾನೆಯಲ್ಲಿದ್ದ ಎರಡು ಗ್ಯಾಸ್ ಬಾಟೆಲ್‌ಗಳು ಸ್ಫೋಟಗೊಂಡಿದ್ದರಿಂದ ಈ ದುರಂತ ನಡೆದಿದೆ ಎಂದು ತಿಳಿಯಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಹರಸಾಹಸಪಟ್ಟು ಬೆಂಕಿಯನ್ನು ನಂದಿಸಿದರು.

Leave a Comment

Your email address will not be published. Required fields are marked *

Translate »
Scroll to Top