ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಅಡಕೆ ಮತ್ತು ಬಾಳೆ ಗಿಡ ಇತ್ತೀಚೆಗೆ ಜೋರಾಗಿ ಬೀಸಿದ ಗಾಳಿ ಮಳೆಗೆ ಸರ್ವನಾಶವಾಗಿದೆ .

ಇತ್ತೀಚೆಗೆ ಬಿಸಿದ ಬಿರುಗಾಳಿ ಮಳೆಗೆ ಸಿಲುಕಿ ೩೦೦ ಕ್ಕೂ ಹೆಚ್ಚು ಅಡಕೆ ಗಿಡಗಳು ನೆರಕ್ಕುರುಳಿದ್ದು ಎರಡು ಎಕರೆಯಲ್ಲಿದ್ದ ಬಾಳೆ ನಾಶವಾಗಿದೆ
ಚಿಕ್ಕೇನಹಳ್ಳಿ ಗ್ರಾಮದ ರೈತ ಸೀನಪ್ಪ ಹಾಗು ಜಯಪ್ರಕಾಶ್‌ಗೆ ಸೇರಿದ ಬಾಳೆ ಹಾಗೂ ಅಡಕೆ ತೋಟದಲ್ಲಿ ಈ ಘಟನೆ ನಡೆದಿದೆ. ಈ ಜಮೀನಿನಲ್ಲಿ ಲಕ್ಷಾಂತರ ವೆಚ್ಚಮಾಡಿ ಬೆಳೆದಿದ್ದ ಬೆಳೆ ನಾಶವಾಗಿದ್ದರಿಂದ ಕಂಗಾಲಾಗಿದ್ದು, ಮಕ್ಕನ್ನು ಸಾಕಿದಂತೆ ಅಡಕೆ ಮರಗಳನ್ನು ಬೆಳೆಸಲಾಗಿತ್ತು. ಆದರೆ ವಾಯು ಹಾಗೂ ವರುಣನ ಅಬ್ಬರಕ್ಕೆ ತ್ತತ್ತಾಗಿರುವುದು ನೋವಿನ ಸಂಗತಿಯಾಗಿದೆ. ಕಷ್ಟು ಪಟ್ಟು ಬೆಳೆದ ಬೆಳೆ ನಷ್ಟವಾಗಿದ್ದು , ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.