ಹಿಂದೂಗಳು ಸ್ನೇಹ ಪ್ರಿಯರು ಕೆಣಕಬೇಡಿ

ದೇವನಹಳ್ಳಿ,ಫೆ, 28 : ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ನಂತಹ ಹಿಂದೂ ವಿರೋಧಿ ಸಂಘಟನೆಗಳನ್ನು ರದ್ದು ಮಾಡಬೇಕು ಹಾಗೂ ಇಂತಹ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಹೇಳಿ ಸಧನದಲ್ಲಿ ಕೋಲಾಹಲ ಎಬ್ಬಿಸಿ ಸಾರ್ವಜನಿಕ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಕಾಂಗ್ರೆಸ್ ಶಾಸಕರನ್ನು ಅಮಾನತ್ತುಗೊಳಿಸಬೇಕು ದೇಶಕ್ಕೆ ಮಾರಕವಾದ ಕಾಂಗ್ರೆಸ್ ಪಕ್ಷವನ್ನು ಮುಂದಿನ ದಿನಗಳಲ್ಲಿ ಬೇರು ಸಮೇತ ಕಿತ್ತೊಗೆಯಬೇಕು ಕೊಲೆಯಾದ ಹರ್ಷನ ಕುಟುಂಬಕ್ಕೆ ವಯಕ್ತಿಕವಾಗಿ 50 ಸಾವಿರ ನೀಡುವುದಾಗಿ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಖಜಾಂಚಿ ಎ.ಕೆ.ಪಿ.ನಾಗೇಶ್ ತಿಳಿಸಿದರು. ದೇವನಹಳ್ಳಿ ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವತಿಯಿಂದ ಕಾಂಗ್ರೆಸ್ ಜನವಿರೋಧಿ ನೀತಿಗಳ ವಿರುದ್ಧ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿ ವರೆಗೆ ಪ್ರತಿಭಟನಾ ರಾಲಿಯಲ್ಲಿ ಭಾಗವಹಿಸಿ ಮಾತನಾಡಿ, ಹರ್ಷ ಕೊಲೆ ಮಾಡಿದವರನ್ನು ಗಲ್ಲಿಗೇರಿಸಬೇಕು ಇಲ್ಲವೇ ಎನ್ ಕೌಂಟರ್ ಮಾಡಬೇಕು ಇಂತಹ ಕೃತ್ಯಕ್ಕೆ ಬೆಂಬಲವಾಗಿ ನಿಂತಿರುವ ಮುಸ್ಲಿಂ ನಾಯಕರಿಗೆ ಎಚ್ಚರಿಕೆ ನೀಡುತ್ತಿದ್ದು ಹಿಂದೂಗಳನ್ನು ಕೆಣಕಬೇಡಿ ಹಿಂದೂಗಳ ಸ್ನೇಹಜೀವಿಗಳ ಅದನ್ನೇ ಬಂಡವಾಳವಾಗಿಟ್ಟುಕೊಂಡು ದೇಶ ವಿರೋಧಿ ಕೆಲಸ ಮಾಡಿದರೆ ಸಹಿಸುವುದಿಲ್ಲಾ ಎಂದು ಕಟುವಾಗಿ ಎಚ್ಚರಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಭಾರತದಲ್ಲಿ ಮೋದಿಯವರ ನೇತೃತ್ವದ ಸರ್ಕಾರ ಇಡೀ ಪ್ರಪಂಚ ಮೆಚ್ಚುವಂತಹ ಆಡಳಿತ ನೀಡುತ್ತಿದೆ. ಬೊಮ್ಮಾಯಿ ಯವರ ಆಡಳಿತವು ಉತ್ತಮ ರೀತಿಯ ಆಡಳಿತ ನೀಡುತ್ತಿದ್ದು, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹತಾಶೆ ಹೊಂದಿದೆ. ತನ್ನ ಕೋಳಿ ಕೂಗಿದರೆ ಮಾತ್ರ ಬೆಳಗಾಗುವುದು ಎಂದು ನಂಬಿದ್ದ ಜಂಭದ ಮುದುಕಿಯ ಕತೆಯಂತೆ ವಂಶಾಡಳಿತ ಕಾಂಗ್ರೆಸ್ ಪಕ್ಷದ ಆಡಳಿತದಿಂದ ಮಾತ್ರ ದೇಶ ಆಳಲು ಸಾಧ್ಯ ಬೇರೆ ಯಾರಿಂದಲೂ ಆಡಳಿತ ನಡೆಸಲು ಸಾಧ್ಯವೇ ಇಲ್ಲ ಎನ್ನುವ ಒಣಜಂಭದಿಂದ ಜನರನ್ನು ಗೊಂದಲಕ್ಕೆ ಈಡು ಮಾಡುತ್ತಿದ್ದಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕಾರ್ಯವನ್ನು ಹಾಳುಗೆಡಹುವ ಕಾರ್ಯ ಕಾಂಗ್ರೆಸ್ ಪಕ್ಷದಿಂದ ಆಗುತ್ತಿದೆ.

ಉದಾಹರಣೆಗೆ ಈಶ್ವರಪ್ಪನವರು ರಾಷ್ಟ್ರ ಧ್ವಜದ ಟೀಕೆ ಮಾಡಲಿಲ್ಲ, ರಾಷ್ಟ್ರ ವಿರೋಧಿ ಮಾತುಗಳನ್ನು ಆಡಲಿಲ್ಲ. ಆದರೂ ಈ ವಿಚಾರವಾಗಿ ಸದನದಲ್ಲಿ ವಿಚಾರ ತೆಗೆದು ಸದನದ ಸಮಯವನ್ನು ಹಾಳುಮಾಡುತ್ತಿರುವುದು ಕಾಂಗ್ರೆಸ್ ನವರ ಕೆಲಸವಾಗಿದ್ದು, ಬ್ರಿಟಿಷರು ದೇಶ ವನ್ನು ಒಡೆದು ಆಳುವ ಕೆಲಸ ಮಾಡಿದಂತೆ, ಕಾಂಗ್ರೆಸ್ ನವರು ಸಮಾಜವನ್ನು ಒಡೆದು ಆಳುವ ಕೆಲಸ ಮಾಡುತ್ತಿದ್ದಾರೆ. ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಇಂತಹ ಪಿತೂರಿಯನ್ನು ಅರಿತು ಜನರು ಮೋದಿಯವರ ಆಡಳಿತಕ್ಕೆ ಬೆಂಬಲ ನೀಡಬೇಕು. ಅನೇಕ ದೇಶ ವಿರೋಧಿ ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ನಾವೆಲ್ಲ ಹಿಂದುಗಳು ಎಂಬ ಒಗ್ಗಟ್ಟು ನಮ್ಮಲ್ಲಿ ಇರಬೇಕು. ಹರ್ಷನ ಕೊಲೆ ಪ್ರಕರಣವನ್ನು ಖಂಡಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಕಾನೂನು ಸುವ್ಯವಸ್ಥೆ ಮತ್ತಷ್ಟು ಬಿಗಿಗೊಳಿಸಬೇಕು ಎಂದು ತಿಳಿಸಿದರು ಪ್ರತಿಭಟನಾಕಾರರು ದೇವನಹಳ್ಳಿ ತಹಸೀಲ್ದಾರ್ ಶಿವರಾಜ್ ರವರಿಗೆ ಮನವಿ ಪತ್ರ ನೀಡಿದರು. ಪ್ರತಿಭಟನಾ ವೇಳೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುಂದರೇಶ್, ತಾಲ್ಲೂಕಿನ ವಿವಿಧ ಮೋರ್ಚಾಗಳ ಮುಂಚೂಣಿ ನಾಯಕರು ಹಾಜರಿದ್ದರು,

Leave a Comment

Your email address will not be published. Required fields are marked *

Translate »
Scroll to Top