ಹಿಂದುಗಳ ಹಣ ಹಿಂದೂ ದೇವಾಲಯ ಅಭಿವೃದ್ಧಿಗೆ ಮೀಸಲಾಗಬೇಕು

ದೇವನಹಳ್ಳಿ,ಡಿ,30 : ಸರ್ಕಾರದ ಅಧೀನದ ಮುಜರಾಯಿ ದೇವಾಲಯಗಳಿಂದ ಶೇಖರಣೆಯಾಗುವ ಹಣವನ್ನು ಹಿಂದೂ ದೇವಾಲಯದ ಅಭಿವೃದ್ಧಿಗೆ ಹಾಗೂ ಅರ್ಚಕರ ಅನುಕೂಲಕ್ಕೆ ಉಪಯೋಗವಾಗಬೇಕೆಂದು ಸರ್ಕಾರಕ್ಕೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದನ್ನು ಈಗ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದ್ದಾರೆ ಎಂದು ರಾಜ್ಯ ಗೌರವಾಧ್ಯಕ್ಷ ಡಾ.ಜಾನಕಿರಾಮ್ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ದತ್ತಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ಮತ್ತು ತಾಲ್ಲೂಕು ಸಂಘದ ಸಹಯೋಗದಲ್ಲಿ 2022 ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಉತ್ತರಖಾಂಡ್ ರಾಜ್ಯದಲ್ಲಿ ಮಾಡಿರುವ ಮಾದರಿಯಲ್ಲಿ ಕರ್ನಾಟಕದಲ್ಲೂ ಮಾಡಬೇಕು ಮೊದಲು ಎ ದರ್ಜೆ, ಬಿ ದರ್ಜೆ ನೌಕರರಿಗೆ ಮಾಸಿಕ ವೇತನ ತಾರತಮ್ಯ ಇತ್ತು ಈಗ ದೊಡ್ಡ ದೇವಾಲಯ ಚಿಕ್ಕ ದೇವಾಲಯ ಎನ್ನದೇ ಎಲ್ಲವನ್ನು ಸಮನಾಗಿ ಮಾಡಿ ಎ, ಬಿ, ಸಿ ದರ್ಜೆ ಮಾಡಿ ಮಾಸಿಕ ವೇತನ ನೀಡಲು ಹಾಗೂ ಮುಜರಾಯಿ ದೇವಾಲಯಗಳಿಂದ ಬರುವ ಹಣವು ಉಳಿದ 35 ಸಾವಿರ ದೇವಾಲಯಗಳ ಅಭಿವೃದ್ಧಿಗೆ, ಜೀರ್ಣೋದ್ಧಾರ ಕಾರ್ಯಕ್ಕೆ ಸಮನಾಗಿ ವಿನಿಯೋಗಿಸಲಾಗುತ್ತದೆ. ರಾಜ್ಯದ ಯಾವುದೇ ಅರ್ಚಕರು ದೇವಾಲಯದಿಂದ ದೊರೆಯುವ ಸಂಪಾದನೆಯಿಂದ ಜೀವನ ನಡೆಸಲು ಅಸಾಧ್ಯವಾಗಿದೆ ಕಾರಣ ಅರ್ಚಕತನ ನಮ್ಮ ಆಸ್ತಿ ಹಾಗೂ ನಮ್ಮ ಹಕ್ಕು ಮಕ್ಕಳನ್ನು ಹೇಗೆ ಪೋಷಿಸುತ್ತಾರೋ ಅದೇ ರೀತಿ ದೇವಾಲಯ ಪೋಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದತ್ತಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ರಾಜ್ಯಾಧ್ಯಕ್ಷ ಎಂ.ಎಸ್.ವೆಂಕಟಾಚಲಯ್ಯ, ತಾಲ್ಲೂಕು ಸಂಘದ ಗೌರವಾಧ್ಯಕ್ಷ ರಾಜಾಚಾರ್ಯ, ಅಧ್ಯಕ್ಷ ಸಂಪತ್ ಕುಮಾರ್, ಉಪಾಧ್ಯಕ್ಷ ಗೋಪಾಲಸ್ವಾಮಿ, ಸುದರ್ಶನ್, ಕಾರ್ಯದರ್ಶಿ ಸೋಮಶೇಖರ್, ಸಹಕಾರ್ಯದರ್ಶಿ ದ್ವಾರಕಾನಾಥ್, ಖಜಾಂಚಿ ಮಧುಸೂಧನ್, ಸಂಘಟನಾ ಕಾರ್ಯದರ್ಶಿ ರಾಜಕುಮಾರ್, ವಾಸುದೇವಚಯ್ಯ, ಲವಕುಮಾರ್, ಚಂದ್ರಶೇಖರಯ್ಯ, ಕಾನೂನು ಸಲಹೆಗಾರ ರಾಜಗೋಪಾಲಾಚಾರ್, ಕಿರಣ್, ನಿರ್ದೇಶಕರಾದ ಮಟಂ ಸೌಜನ್ಯ, ವೆಂಕಟಸುಬ್ಬಯ್ಯ, ನಾಗರಾಜ್, ವಿರೂಪಾಕ್ಷಯ್ಯ, ಹರ್ಷವರ್ಧನ್, ರಾಘವೇಂದ್ರ ಇತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top