ದೇಶಭಕ್ತ ವೀರ ಸಿಂಧೂರ ಲಕ್ಷ್ಮಣನ ಮೂರ್ತಿ ಉದ್ಘಾಟನೆ

ಯರಗಟ್ಟಿ: ಸಮೀಪದ ಯರಝರ್ವಿ ಗ್ರಾಮದಲ್ಲಿ ದೇಶಭಕ್ತ ವೀರ ಸಿಂಧೂರ ಲಕ್ಷ್ಮಣನ ಮೂರ್ತಿ ಅನಾವರಣ ಸಮಾರಂಭ ಕುಂಭ ಮೇಳ, ಡೊಳ್ಳು ಕುಣಿತ ಹಾಗೂ ಸಕಲ ವಾದ್ಯವೃಂದದೊಂದಿ ಮೆರೆವ ಮೂಲಕ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ವಿಧಾನ ಸಭಾ ಉಪ ಸಭಾಧ್ಯಕ್ಷ ಆನಂದ ಮಾಮನಿ ಲಕ್ಷ್ಮಣನು ಒಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರನಾಗಿದ್ದನು. ದೇಶಪ್ರೇಮ ಸಿಂಧೂರ ಲಕ್ಷಣನು ತನ್ನದೇ ಆದ ರೀತಿಯಲ್ಲಿ ಆಂಗ್ಲ ಸರಕಾರದ ವಿರುದ್ಧ ಸಮರ ಸಾರಿದ್ದನು.
ಅಪ್ರತಿಮ ಶೂರ ಸ್ವಾತಂತ್ರ ಹೋರಾಟಗಾರ ಸಿಂಧೂರ ಲಕ್ಷ್ಮಣ ಮರೆಯಾಗುತ್ತಿದ್ದಾನೆ ಜನಮಾನಸದಿಂದ ಇವರನ್ನು ಸಂಭ್ರಮದ ಈ ದಿನದಂದು ಅವರನ್ನೊಮ್ಮೆ ನೆನೆಯೋಣ ಎಂದರು.

ಬ್ರಿಟೀಷ್ ಆಳರಸರು ಜಾರಿಗೊಳಿಸಿದ ಕಾಯಿದೆಗಳು, ನ್ಯಾಯ ಪದ್ಧತಿ, ಹೇರಿದ ತೆರಿಗೆ ಮೊದಲಾದವು ಸ್ಥಳೀಯರನ್ನು ದುರ್ಬಲಗೊಳಿಸಿದವು. ರೈತರು, ಬಡವರು, ಕೂಲಿಕಾರರಾದ ಸ್ಥಳೀಯರಿಂದ ದುಡ್ಡು ವಸೂಲಿ ಮಾಡಿಕೊಡುವ ದಾಸ್ಯಕ್ಕೆ ಸ್ಥಳೀಯ ಅರಸರು ಶರಣಾಗುವಂತಾಯಿತು. ಇಂಥ ಧೋರಣೆ ನೀತಿಗಳು ಸ್ಥಳೀಯ ನಾಯಕರನ್ನು ರೊಚ್ಚಿಗೆಬ್ಬಿಸಿದವು. ಈ ಅವಧಿಯಲ್ಲಿ ಕರ್ನಾಟಕದಲ್ಲಿ ನಡೆದ ಅನೇಕ ಬಂಡಾಯ ಗಳಲ್ಲಿ ವೀರ ಸಿಂಧೂರ ಲಕ್ಷ್ಮಣನ ಮತ್ತವರ ಸಹಚರರ ಬಂಡಾಯ ಕರುನಾಡ ಉತ್ತರ ಭಾಗದಲ್ಲಿ ಜನಜನಿತವಾಗಿದೆ. ಕರುನಾಡ ಉತ್ತರ ಅದರಲ್ಲೂ ಮುಂಬೈ ಕರ್ನಾಟಕದ ಪ್ರದೇಶಗಳಲ್ಲಿ ಸಿಂಧೂರ ಲಕ್ಷ್ಮಣನ ಹೆಸರು ನೆನಪಿಸಿದರೆ ಮೈ ರೋಮಾಂಚನಗೊಳ್ಳುತ್ತದೆ. ಬ್ರಿಟೀಷ್ ಅಧಿಕಾರಶಾಹಿ ಹಾಗೂ ಅವರ ಪೋಷಕರಾಗಿದ್ದ ಜಮೀನ್ದಾರರ ವಿರುದ್ಧ ತನ್ನ ಸಣ್ಣ ಗುಂಪನ್ನು ಜೊತೆಯಲ್ಲಿ ಟ್ಟುಕೊಂಡು ದೊಡ್ಡ ಹೋರಾಟ ಮಾಡಿದ ಸಿಂಧೂರ ಲಕ್ಷ್ಮಣ ಚರಿತ್ರೆ ಅಜರಾಮರ ವಾದುದು. ಅವನು ಬ್ರಿಟಿಷರಿಗೆ ಕೊಟ್ಟ ಹೊಡೆತ ಕಡಿಮೆ ಅವದಿಯದ್ದಾದರು ಅವರು ಸುದಾರಿಸಿಕೊಳ್ಳಲು ಅನೇಕ್ ವರ್ಷ ಸಮಯ ಬೇಕಾಯಿತು ಎಂದು ಹೇಳಿದರು.

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ವರದಾನೇಶ್ವರ ಸ್ವಾಮಿಗಳು, ಶ್ರೀ ವಾಲ್ಮೀಕಿ ಆಶ್ರಮ ಗೋವಾದಲ್ಲಿ, ಪೂಜ್ಯ ಶ್ರೀ ಚಿದಾನಂದ ಸ್ವಾಮಿಗಳು, ವಹಿಸಿದ್ದರು, ಸರ್ವೋತ್ತಮ ಜಾರಕಿಹೊಳಿ, ಪುಂಡಲೀಕ ಮೇಟಿ, ಎಸ್. ಎಚ್. ನಾಯ್ಕರ, ಮಾಜಿ ಜಿ. ಪಂ. ಸದಸ್ಯರಾದ ಶ್ರೀಮತಿ ವಿದ್ಯಾರಾಣಿ ಸೊನ್ನದ, ಸಿಂಧೂರ ಲಕ್ಷ್ಮಣ ವಂಶಸ್ಥರಾದ ಲಕ್ಷ್ಮಣ ಭೀಮನು ನಾಯ್ಕ, ಸುರೇಶ ಮುರಗೋಡ, ಸಿದ್ದಪ್ಪ ಮಾಳಗಿ, ಭೀಮಶಿ ದೇಗಾನಟ್ಟಿ, ಪ್ರಕಾಶ ಲಿಂಗರಡ್ಡಿ, ಅರ್ಜುನ ದಳವಾಯಿ, ಭೀಮಶಿ ಕಡಬಿ, ಸುರೇಶ ದಾಸಪ್ಪನವರ, ವಾಲ್ಮೀಕಿ ಸಮಾಜದ, ಯುವಕರು, ಯರಝರ್ವಿ ಗ್ರಾಮಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top