ಹೊಸವರುಷ ಆಚರಣೆಗೆ ಬ್ರೇಕ್ ಬೇಕರಿ ಉದ್ಯಮಕ್ಕೆ ನಷ್ಟ!

ರಾಯಚೂರು, ಜ,1 : ಹೊಸವರ್ಷದಂದು ಕೇಕ್ ಕತ್ತಿರಿಸುವ ಮೂಲಕ ಅದ್ದೂರಿಯಾಗಿ ಹೊಸವರುಷವನ್ನು ಬರಮಾಡಿಕೊಳ್ಳುವ ವಾಡಿಕೆ ಇದೆ. ಆದರೆ ಈ ಬಾರಿ ಕೊರೊನ ವೈರಸ್, ಓಮಿಕ್ರಾನ್ ಹಾವಳಿಯಿಂದಾಗಿ ರಾಜ್ಯ ಸರಕಾರ ಹೊಸ ವರುಷ ಆಚರಣೆಗೆ ಕಡಿವಾಣ ಹಾಕಿರುವುದರಿಂದ ಬೇಕರಿ ಉದ್ಯಮ ಮತ್ತು ಹೋಟಲ್ ಉದ್ಯಮಕ್ಕೆ ಹೊಡೆತ ಬಿದಿದ್ದು ಮಾಲೀಕರು ನಷ್ಠ ಅನುಭವಿಸಿದ್ದಾರೆ. ರಾಜ್ಯ ಸರಕಾರ ಡಿಸೆಂಬರ 28ರಿಂದ ಜನವರಿ 7ರವರೆಗೆ ರಾತ್ರಿ 10ಗಂಟೆಯಿಂದ ಬೆಳಿಗ್ಗೆ 5ಗಂಟೆಯವರೆಗೆ ನೈಟ್ ಕರ್ಫೂ ಜಾರಿ ಮಾಡಿರುವುದರಿಂದ ಈ ಭಾರಿ 2022ರ ಹೊಷ ವರುಷ ಆಚರಣೆಗೆ ಬ್ರೇಕ್ ಬಿದ್ದಿರುವುದರಿಂದ ಬೇಕರಿ ಉದ್ಯಮಕ್ಕೆ ನಷ್ಠವಾಗಿದೆ. ಪ್ರತಿ ವರುಷ ಹೊಸವರುಷ ಬಂತೆದರೆ ಸಾಕು 2-3ದಿನ ಮುಂಚಿತವಾಗಿ ಹೊಸ ವರುಷಕ್ಕೆ ಅದ್ದೂರಿಯಾಗಿ ತಯಾರಿ ಮಾಡಿಕೊಳ್ಳುತ್ತಿದ್ದರು, ಜೊತೆಗೆ ಬೇಕರಿಗಳಲ್ಲಿ ಕೇಕ್ ಬುಕ್ ಮಾಡುತ್ತಿದ್ದರು. ಆದರೆ ಈ ಭಾರಿ ಯಾವುದೇ ಅಡ್ವಾನ್ಸ್ ಬುಕ್ ಆಗಿಲ್ಲ ಅನ್ನುತ್ತಾರೆ ಬೇಕರಿ ಮಾಲೀಕರು ಈ ಭಾರಿ ರಾಜ್ಯ ಸರಕಾರ ಕರೋನ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ 10ದಿನಗಳಕಾಲ ನೈಟ್ ಕರ್ಫೂ ಹಾಗೂ ಹೊಸ ವರುಷ ಆಚರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಈ ಭಾರಿ ಸಾರ್ವಜನಿಕವಾಗಿ ಹೊಸ ವರುಷ ಆಚರಣೆಗೆ ಬ್ರೇಕ್ ಬಿದ್ದಿರುವುದರಿಂದ ನಮ್ಮ ವ್ಯಾಪರಕ್ಕೆ ಭಾರಿ ನಷ್ಠವಾಗಿದೆ. ಕರೋನ ವೈರಸ್ ಮುಗಿದು ಹೋಯಿತ್ತು ಈ ಭಾರಿಯಾದರು ಹೊಸ ವರುಷ ಅದ್ದೂರಿಯಾಗಿ ನಡೆಯುತ್ತೆ, ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯುತ್ತೆ ಅದ್ದುಕೊಂಡಿದ್ದೆವು ಆದರೆ ರಾಜ್ಯ ಸರಕಾರ ಹೊಸ ವರುಷ ಆಚರಣೆಗೆ ಸರಕಾರ ಬ್ರೇಕ್ ಹಾಕಿರುವುದರಿಂದ ವ್ಯಾಪರ ನಷ್ಠವಾಗಿದೆ.


ಪ್ರತಿವರ್ಷ ಹೊಸ ವರುಷ ಕೇಕ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಅಡ್ವಾನ್ಸ್ ಬುಕ್ಕಿಂಗ್ ಮಾಡಲಾಗುತ್ತಿತ್ತು, ಆದರೆ ಈ ಭಾರಿ ಯಾವುದೇ ಅಡ್ವಾನ್ಸ್ ಬುಕಿಂಗ್ ಆಗಿಲ್ಲ, ಶೇ 50ರಷ್ಟು ವಾಪ್ಯಾರ ನಷ್ಟವಾಗಿದೆ. ಒಂದು ಸಾವಿರದ ವರೆಗೆ ಕೇಕ್ ತಯಾರಿ ಮಾಡುತ್ತಿದ್ದೇವು ಆದರೆ ಈ ಭಾರಿ ಕೇವಲ 300 ಕೇಕ್ ಮಾತ್ರ ತಯಾರಿ ಮಾಡಿದ್ದು, ಅದೂ ಇನ್ನು ವ್ಯಾಪಾರವಾಗಿಲ್ಲ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು 9ಗಂಟೆಯ ನಂತರ ಮನೆಯಿಂದಾಚೆ ಬಂದು ಮಧ್ಯ ರಾತ್ತಿ 12ಗಂಟೆ ಸುಮಾರಿಗೆ ಕೇಕ್ ಕತ್ತರಿಸಿ ಒಬ್ಬರಿಗೊಬ್ಬರು ಶುಭ ಕೊರುತ್ತಿದ್ದರು ಆದರೆ 10ಗಂಟೆಗೆ ನೈಟ್ ಕರ್ಪೂ ಇರುವುದರಿಂದ ಯಾವುದೇ ಯುವಕರು ಹೊರಗಡೆ ಬಂದು ಆಚರಣೆ ಮಾಡುತ್ತಿಲ್ಲ ಎನ್ನುತ್ತಾರೆ ಅಂಗಡಿ ಮಾಲೀಕ ವಿಶ್ವ. ಜನರಿಂದ ತುಂಬಿ ತುಳುಕುತ್ತಿದ್ದ ಬೇಕರಿ ಅಂಗಡಿಗಳು ಈ ಭಾರಿ ಜನರಿಲ್ಲದೆ ಬೀಕೋ ಎನ್ನುತ್ತಿದ್ದವು .

Leave a Comment

Your email address will not be published. Required fields are marked *

Translate »
Scroll to Top