ಜಿಲ್ಲೆಗಳುದಕ್ಷಿಣ ಕನ್ನಡ

ಪೊಲೀಸ್ ಪೇದೆ ಆತ್ಮಹತ್ಯ

ಉಳ್ಳಾಲ(ಮಂಗಳೂರು): ಕೆಎಸ್​ಆರ್​ಪಿಯ ಏಳನೇ ಬೆಟಾಲಿಯನ್​ನ ನೂತನ ಬ್ಯಾಚ್​ನ ಪೊಲೀಸ್ ಕಾನ್ಸ್ಟೇಬಲ್​ ಬಾಡಿಗೆ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸೈಗೋಳಿ ಸೈಟ್​ನಲ್ಲಿ ಭಾನುವಾರ ಸಂಜೆ ಬೆಳಕಿಗೆ ಬಂದಿದೆ.


ಬೆಳಗಾವಿ ನಿವಾಸಿ ವಿಮಲನಾಥ ಜೈನ್ (28) ಆತ್ಮಹತ್ಯೆಗೆ ಶರಣಾದ ಪೊಲೀಸ್​ ಕಾನ್​​ಸ್ಟೇಬಲ್​ ಎಂದು ಗುರುತಿಸಲಾಗಿದೆ.
ತಿಂಗಳ ಹಿಂದೆಯಷ್ಟೇ ವಿಮಲನಾಥ ಅವರ ತಾಯಿ ತೀರಿಕೊಂಡಿದ್ದು, ಅದೇ ದುಃಖದಲ್ಲಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.


ನೂತನ ಬ್ಯಾಚ್‌ನವರಾಗಿದ್ದ ವಿಮಲನಾಥ್ ಇಂದು ಕರ್ತವ್ಯಕ್ಕೆ ಹಾಜರಾಗದೇ ಬಾಡಿಗೆ ರೂಮಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply