ಜಿಲ್ಲೆಗಳುತುಮಕೂರುವೀಡಿಯೊಗಳು

ಗೂಡ್ ಶೆಡ್ ಕಾಲೋನಿಗೆ ಪಾಲಿಕೆ ಆಯುಕ್ತರ ಭೇಟಿ

ತುಮಕೂರು: ಇತ್ತೀಚೆಗೆ ತುಮಕೂರು ನಗರ ಸೇರಿದಂತೆ ವಿವಿಧೆಡೆ ಸುರಿದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ, ವಾಸ ಮಾಡಲು ಪರದಾಡಿದ್ದ ಕುಟುಂಬಗಳ ಬಳಿ ತೆರಳಿದ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಪರಿಶೀಲನೆ ನಡೆಸಿದರು.


ನಗರದ ೧೮ನೇ ವಾರ್ಡ್ ವ್ಯಾಪ್ತಿಯ ಗೂಡ್ ಶೆಡ್ ಕಾಲೊನಿಯ ಇಂದಿರಾ ಕಾಲೇಜು ಹಿಂಭಾಗ ಕೆಲವು ಮನೆಗಳಿಗೆ ನೀರು ನುಗ್ಗಿ ಜೀವನ ಮಾಡಲು ಆಸರೆಯಾಗಿದ್ದ ಮನೆಗಳು ಮುಳುಗಿದ್ದವು. ಅಲ್ಲದೆ ಕೊಪ್ಪ ಗ್ರಾಮದ ಸರ್ವೆ ನಂ ೪೦ರಲ್ಲಿ ೮ಎಕರೆ ಹನ್ನೊಂದು ಗುಂಟೆ ಜಾಗ ಒತ್ತುವರಿಯಾಗಿತ್ತು. ಈ ಸಂಬಂಧ ಆರ್‌ಟಿಐ ಕಾರ್ಯಕರ್ತ ಇಮ್ರಾನ್ ಪಾಷಾ ಅವರು, ಸಾಮಾಜಿಕ ಜಾಲತಾಣಗಳ ಮೂಲಕ ಆಯುಕ್ತರ ಗಮನ ಸೆಳೆದಿದ್ದರು ಎಂದು ತಿಳಿದು ಬಂದಿದೆ.


ಈ ಹಿನ್ನೆಲೆಯಲ್ಲಿ ಇಂದು ಪಾಲಿಕೆ ಆಯುಕ್ತೆ ರೇಣುಕಾ ಅವರು, ಇಮ್ರಾನ್ ಪಾಷಾರೊಂದಿಗೆ ತೆರಳಿ ಎರಡೂ ಪ್ರದೇಶಗಳನ್ನು ಪರಿಶೀಲನೆ ಮಾಡಿದರು. ಈ ವೇಳೆ ಸ್ಥಳೀಯರಿಂದ ಅಹವಾಲುಗಳನ್ನು ಸ್ವೀಕರಿಸಿ, ಶೀಘ್ರದಲ್ಲಿಯೇ ಪರಿಹರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಮುಜೀದಾ ಖಾನಂ, ಪಾಲಿಕೆ ಸಿಬ್ಬಂದಿ ಮತ್ತು ಗೂಡ್‌ಶೆಡ್ ಕಾಲನಿಯ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply