ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

ರಾಯಚೂರು: ನಿನ್ನೆ ಸಂಜೆ ರಾಯಚೂರು ಜಿಲ್ಲೆಯಾದ್ಯಂತ ಸುರಿದ ಗುಡುಗು, ಸಿಡಲು ಮಿಂಚಿನಿಂದ ಕೂಡಿದ ಭಾರಿ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ನಿನ್ನೆ ಸಂಜೆ 12ಗಂಟೆಯಿಂದ ಆರಂಭವಾದ ಮಳೆ ಬೆಳ್ಳಿಗೆ 4ಗಂಟೆಯವರೆಗೆ ಗುಡುಗು, ಸಿಡಿಲು, ಮಿಂಚಿನಿಂದ ಕೂಡಿದ ಮಳೆಯ ಅರ್ಭಟಕ್ಕೆ ರಾತ್ರಿಯಿಡಿ ಜನರು ಜಾಗರಣೆ ಮಾಡಿದರು. ಸೀಯಾತಲಾಬ್, ಜಲಾಲ್ ನಗರ ನೀರಬಾವಿಕುಂಟ, ಬಸವನಬಾವಿ ವೃತ್ತದಲ್ಲಿ ನೀರು ತುಂಬಿ ರಸ್ತೆಗಳು ರಾಜಕಾಲುವೆಯಂತಾಗಿ ಮಾರ್ಪಟ್ಟಿದ್ದವು.

 ನಗರದಲ್ಲಿ ಸುರಿದ ಭಾರಿ ಮಳೆಗೆ ರಾಜಕಾಲುವೆ ಅವ್ಯವಸ್ಥೆಯಿಂದ ಕೂಡಿರುವುದರಿಂದ ರಾಜಕಾಲುವೆ ತುಂಬಿ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿರುವುದರಿಂದ ರಾತ್ರಿಯಿಡಿ ಜನರು ನಿದ್ದೆ ಇಲ್ಲದೇ ಮಕ್ಕಳು ಮರಿಗಳೊಂದಿಗೆ ಹೊರಗಡೆ ಬಂದು ವಾಸಿಸುವತ್ತಾಗಿತ್ತು. ಇನ್ನು ಕೆಲತಾಯದಇರು ಮಂಚದ ಮೇಲೆ ಮಕ್ಕಳು ಕೂಡಿಸಿ ರಕ್ಷಣೆ ರಕ್ಷಣೆ ಮಾಡಿದರು.  ಮನೆಯಲ್ಲಿದ್ದ ಪಾತ್ರೆ, ದಿನಬಳಕೆ ವಸ್ತು ಮತ್ತು ಆಹಾರ ಪದಾರ್ಥಗಳು  ನೀರಿನಲ್ಲಿ ಮುಳುಗಡೆಯಾಗಿದ್ದು, ಜಿಲ್ಲಾಢಳಿತ, ನಗರಸಭೆ ಮತ್ತು ಶಾಸಕರುಗಳಿಗೆ ಜನರು ಹಿಡಿ ಶಾಪಹಾಕುತ್ತಿದ್ದಾರೆ.

ಪ್ರತಿಭಾರಿ ಮಳೆಬಂದಾಗ ಇದೇ ಪರಿಸ್ಥಿ ನಿರ್ಮಾಣವಾಗುತ್ತಿದ್ದು ಇಲ್ಲಿನ ಸ್ಥಳಿಯ ಶಾಸಕರು ಮತ್ತು ನಗರಸಭೆ ಸದಸ್ಯರುಗಳು ಶಾಶ್ವತ ಪರಿಹಾರಕ್ಕೆ ಮುದಾಗುತ್ತಿಲ್ಲ, ಮಳೆ ಬಂದಾಗ ಸ್ಥಳಕ್ಕೆ ಬಂದು ಆಶ್ವಾಸನೆ ನೀಡಿ ಹೋಗುವ ಶಾಸಕರು ಮತ್ತೆ ಮಳೆ ಬಂದಾಗ ಮರಳಿ ಈ ಕಡೆ ಬೇಟಿ ನೀಡುತ್ತಾರೆ ಎಂದು  ಸೀಯತಲಾಬ್ ಬಡಾವಣೆಯ ಜನರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ನೀರು ನುಗ್ಗಿದ ತಗ್ಗು ಪ್ರದೇಶಗಳ ಬಡಾವಣೆಗೆ ಶಾಸಕ ಶಿವರಾಜ್ ಪಾಟೀಲ್ ಬೇಟಿ ನೀಡಿ ಸ್ವಾಂತನ ಹೇಳುವ ಮೂಲಕ  ಸೂಕ್ತ ಪರಿಹಾರಕ್ಕೆ ಗಂಜೀ ಕೇಂದ್ರಗಳನ್ನು ತೆರೆಯಲು ಚಿಂತಿನೆ ನಡೆದಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಎನ್..ಎಸ್‍.ಬೋಸರಾಜ, ನಗರಸಭೆ ಅಧ್ಯಕ್ಷ ಈ.ವಿನಯಕುಮಾರ  ನೀರು ನುಗ್ಗಿದ ತಗ್ಗು ಪ್ರದೇಶಗಳ ಬಡಾವಣೆಗೆ ಭೇಟಿ ಪರೀಶೀಲನೆ ನಡೆಸಿದರು.

Leave a Comment

Your email address will not be published. Required fields are marked *

Translate »
Scroll to Top