ಅಂತರರಾಷ್ಟ್ರೀಯ

ವಿಕಿಪೀಡಿಯಾಗೇ 27,000 ಡಾಲರ್ ದಂಡ ವಿಧಿಸಿದ ರಷ್ಯಾ ನ್ಯಾಯಾಲಯ

ಮಾಸ್ಕೋ: ರಷ್ಯಾ ಸೇನೆಯ ಬಗೆಗೆ ತಪ್ಪು ಮಾಹಿತಿ ನೀಡಿದ್ದನ್ನು ತೆಗೆದುಹಾಕಲು ಸೈಟ್ ನಿರಾಕರಿಸಿದೆ ಎಂದು ರಷ್ಯಾದ ರಾಜಧಾನಿ ಮಾಸ್ಕೋದಲ್ಲಿರುವ ಉಚ್ಚ ನ್ಯಾಯಾಲಯ ವಿಕಿಪೀಡಿಯಕ್ಕೆ 27,000 ಡಾಲರ್ ದಂಡ ವಿಧಿಸಿದೆ.

The seal with red imprint FINE on white surface. Isolated. 3D Illustration


ಸೇನೆಯ ಬಗೆಗೆ ತಪ್ಪು ಮಾಹಿತಿ ಮತ್ತು ಉಕ್ರೇನ್ ಯುದ್ಧ ಸಂಬಂಧ ರಷ್ಯಾ ಬಗ್ಗೆ ತನ್ನ ಎರಡು ತಪ್ಪು ಲೇಖನ ತೆಗೆದು ಹಾಕುವಂತೆ ವಿಕಿಪೀಡಿಯಾಗೆ ಸೂಚಿಸಲಾಗಿತ್ತು. ಅದು ಪಾಲನೆಯಾಗಿಲ್ಲ ಎಂದು ಈ‌ ದಂಡ ವಿಧಿಸಲಾಗಿದೆ.
ರಷ್ಯಾದ ಮಿಲಿಟರಿಯ ಬಗ್ಗೆ ಋಣಾತ್ಮಕ ವರದಿಯನ್ನು ತೆಗೆದುಹಾಕಲು ನಿರಾಕರಿಸಿದ ವಿಕಿಪೀಡಿಯದ ಮೂಲ ಕಂಪನಿ ವಿಕಿಮೀಡಿಯಾ, ಮೇಲ್ಮನವಿ ಸಲ್ಲಿಸುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಹೇಳಿದೆ.

Leave a Reply