ತಾಲೂಕಿನಲ್ಲಿ ಶೇ% 100, ಮತದಾನ, 14ರ ದಿನಾಂಕದತ್ತ ಎಲ್ಲರ ಚಿತ್ತ

ಸಿರುಗುಪ್ಪ: ತೀವ್ರ ಕುತೂಹಲ ಕೆರಳಿಸಿದ್ದ ವಿಧಾನಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದಿದ್ದು ಸಿರುಗುಪ್ಪ ತಾಲ್ಲೂಕು ದಾಖಲೆಯಾಗಿದ್ದು ಶೇಕಡಾ 100% ನೂರು ಮತದಾನವಾಗಿದ ತಾಲ್ಲೂಕಿನಲ್ಲಿ ಒಟ್ಟು 27 ಗ್ರಾಮ ಪಂಚಾಯಿತಿಗಳಿದ್ದು ಹಚ್ಚೊಳ್ಳಿ, ಬೀರಳ್ಳಿ, ರಾವಿಹಾಳ್, ಬಿ.ಎಂ ಸೂಗೂರು, ರಾರಾವಿ, ಕುರುವಳ್ಳಿ, ಬಾಗೇವಾಡಿ, ಬಗ್ಗೂರು, ದೇಶನೂರು, ಕೆಂಚನಗುಡ್ಡ, ನಡುವಿ ಹಳೆಕೋಟೆ, ಉಪ್ಪಾರ ಹೊಸಹಳ್ಳಿ, ಕೆ.ಬೆಳಗಲ್, ಕೆ.ಸೂಗೂರು, ಬಲಕುಂದಿ, ಮಣ್ಣೂರು ಸೂಗೂರು, ಮುದ್ದಟನೂರು, ಸಿರಿಗೇರಿ, ಶಾನವಾಸಪುರ, ಕೊಂಚಿಗೇರಿ, ಕರೂರು, ಉತ್ತನೂರು, ಹೆಚ್ ಹೊಸಳ್ಳಿ ತಾಳೂರು, ಕುಡುದರಹಾಳು ಮತ್ತು ಬೈರಾಪುರ ಗಳು ಆಗಿವೆ. ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಹಾಗೂ ಸಿರುಗುಪ್ಪ ನಗರಸಭೆ ಸೇರಿ ಒಟ್ಟು 29 ಮತದಾನ ಕೇಂದ್ರಗಳಿಂದ 545 ಮತದಾರರು ಸಂಜೆ 4ಗಂಟೆಯೊಳಗೆ ಮತದಾನ ಮಾಡಿದರು

ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಬೇರೆ ಗ್ರಾಮಗಳಲ್ಲಿರುವ ಮತದಾರರನ್ನು ಕರೆತರಲು ಪ್ರತ್ಯೇಕ ವಾಹನಗಳ ವ್ಯವಸ್ಥೆ ಮಾಡಿಕೊಂಡಿದ್ದರು. ತಹಸಿಲ್ದಾರ್ ಎನ್.ಆರ್ ಮಂಜುನಾಥಸ್ವಾಮಿ ಸೇರಿದಂತೆ ಸೆಕ್ಟರ್ ಅಧಿಕಾರಿಗಳು ಎಲ್ಲ ಮತಗಟ್ಟೆಗಳಿಗೆ ಭೇಟಿ ನೀಡಿ ವೀಕ್ಷಣೆ ಮತ್ತು ಪರಿಶೀಲನೆ ಮಾಡುತ್ತಾ ಶಾಂತವಾಗಿ ಹಾಗೂ ಪಾರದರ್ಶಕವಾದ ಮತದಾನಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು ಈ ವಿಧಾನ ಪರಿಷತ್ ಚುನಾವಣೆಗೆ ಕ್ಷೇತ್ರದ ಶಾಸಕ ಎಂ ಎಸ್ ಸೋಮಲಿಂಗಪ್ಪ ನಗರಸಭೆ ನೂತನ ಅಧ್ಯಕ್ಷೆ ಸುಶೀಲಮ್ಮ ಕೆ ವೆಂಕಟರಾಮರೆಡ್ಡಿ ಮತದಾನ ಮಾಡಿದರು.


ಬಿಜೆಪಿ ಅಭ್ಯರ್ಥಿ ವೈ ಎಂ ಸತೀಶ್ ಸಿರಗುಪ್ಪ ಕ್ಷೇತ್ರದ ಶಾಸಕ ಎಂ ಎಸ್ ಸೋಮಲಿಂಗಪ್ಪ ಮತ್ತು ತಾಲ್ಲೂಕು ಅಧ್ಯಕ್ಷ ಆರ್ ಸಿ ಪಂಪನಗೌಡ ಸೇರಿದಂತೆ ಇನ್ನಿತರ ಮುಖಂಡರುಗಳೊಡನೆ ಮತಗಟ್ಟೆಗೆ ಮತದಾನ ಪ್ರಕ್ರಿಯೆಗಳನ್ನು ತೆರಳಿ ವೀಕ್ಷಿಸಿದರು
ಶಾಂತಿಯುತ ಮತ್ತು ಯಾವುದೇ ಅಹಿತಕರ ಘಟನೆಗಳಿಗೆ ಕಾರಣವಾಗದಂತೆ ತಾಲ್ಲೂಕು ಆಡಳಿತ ಮದ್ಯ ಮಾರಾಟ ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ನ್ನು ಮಾಡಲಾಗಿತ್ತು. ಇದೀಗ ಚುನಾವಣೆ ಮುಗಿದು ಜಿಲ್ಲೆ ಮತ್ತು ತಾಲ್ಲೂಕಿನಾದ್ಯಂತ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆಯೇ ತೀವ್ರ ಪೈಪೋಟಿ ನಡೆದಿದ್ದು ಮತದಾನದ ನಂತರವೂ ಮತದಾರ ತನ್ನ ಗುಟ್ಟುಬಿಟ್ಟು ಕೊಟ್ಟಿಲ್ಲ. ಮತದಾರರು ಬರೆದಿರುವ ಅಭ್ಯರ್ಥಿಗಳ ಹಣೆಬರಹದ ಮತಪೆಟ್ಟಿಗೆಗಳು ಭದ್ರವಾಗಿವೆ ಹಣ ಹೆಂಡ ವಸ್ತ್ರ ಅಧಿಕಾರ ಪ್ರವಾಸ ಸೇರಿದಂತೆ ಮತದಾರರ ಎಲ್ಲ ಹೆಬ್ಬಯಕೆಗಳನ್ನೂ ಪಕ್ಷ ಮತ್ತು ಅಭ್ಯರ್ಥಿಗಳು ಪೂರೈಸಿದ್ದು ಅಧಿಕೃತ ಫಲಿತಾಂಶದ ದಿನಾಂಕ 14ನ್ನು ಕಾಯಲಾಗುತ್ತಿದೆ.


ಮನದಾಳದ ಮಾತಿಗಿಳಿದು ಅಳೆದು ತೂಗಿದಾಗ ಇಡೀ ಗ್ರಾಮ ಪಂಚಾಯಿತಿ ವ್ಯವಸ್ಥೆಗೆ ಮಹತ್ತರ ಬದಲಾವಣೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಏಳಿಗೆಗಾಗಿ ಹೋರಾಟ ಮಾಡಿರುವ ಮತ್ತು ಹೆಚ್ಚಿನ ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದು ಸಾರಿರುವ ಕಿಸಿಕೆ ಕಡೆಗೆ ಒಲವು ತೋರಿದ್ದೇವೆಂದು ಉಸಿರಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top