ಪತ್ರಿಕೋದ್ಯಮ ವಿಷಯಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳನ್ನು ಕಡೆಗಣಿಸುತ್ತಿರುವ ರಾಜ್ಯ ಸರ್ಕಾರ


ಗಂಗಾವತಿ :ಕರ್ನಾಟಕ ಸರಕಾರವು ಪತ್ರಿಕೋದ್ಯಮ ವಿಷಯದ ಬಗ್ಗೆ ಗಮನ ಹರಿಸಬೇಕು. ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ. ಎಷ್ಟು ಮುಖ್ಯವಾಗಿದೆಯೋ ಅಷ್ಟೇ ಮುಖ್ಯವಾಗಿ ಈಗಿನ ಕಾಲದಲ್ಲಿ ಪತ್ರಿಕಾಂಗ ಒಂದು  ಅಷ್ಟೇ ಬಹುಮುಖ್ಯ ವಾದ ಅಂಗ ಪತ್ರಿಕಾಂಗ,  ಇತ್ತೀಚಿಗೆ  ಬಡವರಿಂದ ಬಡವರಿಗಾಗಿ ಬಡವರಿಗೊಸ್ಕರ ಇರುವುದೇ ಪತ್ರಿಕೋದ್ಯಮ ಎಂಬ ಮಾತುಗಳು ಕೇಳುತ್ತೇವೆ. ಮತ್ತು ನಮ್ಮ ದೇಶದ ಲಾಂಚನವಾದ ನಾಲ್ಕು ಮುಖಗಳ ಸಿಂಹ ಹೇಗೆ ತನ್ನ ಒಂದು ಮುಖವನ್ನು ತೋರಿಸುವುದಿಲ್ಲ ಹಾಗೆ ನಮ್ಮ ಪತ್ರಿಕೋದ್ಯಮ ವೃತ್ತಿಯು ಹಾಗೆ‌, ಜನರಿಗೆ  ಅನ್ಯಾಯ ಅಗಿದೆ ಎಂದರೆ ಮೊದಲು ಇರುವುದೆ ಮಾಧ್ಯಮ, ಪತ್ರಿಕೆ, ಅನ್ಯಾಯ ಸರಿ ಪಡಿಸಿದ ನಂತರ ಕಾಣದ ಕೈಗಳು ಅಗಿ ಬಿಡುತ್ತಾವೆ. ಮತ್ತು ಹಿಂದಿನ ಕಾಲದಲ್ಲಿ ನ್ಯಾಯ ಸೀಗ ಬೇಕಾದರೆ ಪೊಲಿಸ್ ಠಾಣೆ ಮೆಟ್ಟಲು ಹೇರಬೇಕಿತ್ತು ಅದರೆ ಇದೀಗ ನ್ಯಾಯ ಹಣವಂತರ ಪಾಲು ಅಗುತ್ತಿದೆ ಎಂದ ತಕ್ಷಣವೇ ನೆನಪು ಹಾಗೊದು ಪತ್ರಿಕೆ, ಟಿವಿ ಚಾನಲ್ ಗಳು. ಈ ಪತ್ರಿಕಾಂಗ ಸಮಾಜದಲ್ಲಿ ಒಂದು ದೊಡ್ಡ ಅಂಗ ಮತ್ತು ಅತಿ ಬಡತನದ ರೇಖೆಯಲ್ಲಿ ಇರುವ ಜನರಿಗೆ ಮತ್ತು ಸಮಾಜದಲ್ಲಿ ಜನರ ಕಷ್ಟಕ್ಕೆ ಧ್ವನಿ ಅಗುವ ಒಂದು ಅಂಗ. ಮತ್ತು ಸಮಾಜ ಗತುಕ ವ್ಯಕ್ತಿಗಳಿಗೆ ಹಾಗೂ ಮೊಸದ ಲಂಚ ತಿನ್ನುವಂತಹ ವ್ಯಕ್ತಿಗಳಿಗೆ ಸಿಂಹ ಸ್ವಪ್ನವಾಗಿ ಕಾಡಿರುವ ಮತ್ತು ಕಡುವಂತ ಎದೆಗಾರಿಕೆ, ಚಾತುರ್ಯವನ್ನು ದೃಶ್ಯಮಾದ್ಯಮ, ಶ್ರಾವ್ಯ ಮಾದ್ಯಮ, ಮುದ್ರಣ ಮಾಧ್ಯಮಕ್ಕೆ ಇರುವದೆ ಪತ್ರಿಕೋದ್ಯಮ ಎಂದು ಕರೆಯುತ್ತೇವೆ.

ಈ ಇಂತಹ ವಿಷಯಗಳನ್ನು ಕೇಳಿದ ನಂತರ ವಿದ್ಯಾರ್ಥಿಗಳು ಪತ್ರಿಕಾರಂಗಕ್ಕೆ ಧುಮುಕ ಬೇಕು ಎಂಬ ಆಶಾಭವನೆಯನ್ನು ಇಟ್ಟು  ವಿಷಯವನ್ನು ಅಯ್ಕೆ ಮಾಡಿಕೊಂಡು ಬಂದಿರುತ್ತಾರೆ. ಅದರೆ ಸರ್ಕಾರಿ ಕೆಲಸದ ಅತೀದೊಡ್ಡ ನಿರೀಕ್ಷೆಯನ್ನು  ಇಲ್ಲಿ ಹುಸಿ ಅಗುತ್ತಾದೆಯಾ ಎಂಬ ಭಾವನೆ ಮುಡುತ್ತಾದೆ. ಕಾರಣ ಸರ್ಕಾರ ಬಹುತೇಕ ಎಲ್ಲಾ ವಿಷಯಗಳ ಅಧಾರಿತಕ್ಕೆ ಸಂಬಂಧಿಸಿದಂತೆ ವಿಷಯವಾರು ನೌಕರಿಯನ್ನು ಕೊಡುತ್ತಾ ಬರುತ್ತದೆ ಅದರೆ ಪತ್ರಿಕೋದ್ಯಮದ ಪದವಿ, ಸ್ನಾತಕೋತ್ತರ ಪಡೆದ ವಿದ್ಯಾರ್ಥಿಗಳಿಗಾಗಿ ಯಾವುದೇ ಒಂದು‌ ಸರಕಾರಿ ಕೆಲಸ ಇದೆ ಎಂದು ಹೇಳುತ್ತಾ ಇಲ್ಲ‌ ಎಂಬ ನೋವಿನ ಸಂಗಾತಿ. ಮತ್ತು ಈ ವಿಷಯವೂ ವೃತ್ತಿಪರ ಕೋರ್ಸ್ ಹಾಗಿದ್ದು  ಇದಕ್ಕೆ ವಿಷೇಶವಾಗಿ ಹೆಚ್ಚಿನ ಪ್ರಮಾಣದಲ್ಲಿ ನಮಗೆ ಬೇಕಾದ ಕ್ಯಾಮರಾ, ಕಂಪ್ಯೂಟರ್, ವಿಡಿಯೋ ಕ್ಯಾಮರಾ, ಮೈಕ್, ಇನ್ನು ಮುಂತಾದ ಉಪಯುಕ್ತ ವಸ್ತುಗಳನ್ನು ಕೊಡಬೇಕು ಮತ್ತು  ಈ ವಿಷಯಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಯಾವುದೇ ಜಾತಿ ಮತ ಧರ್ಮ ಬಿಟ್ಟು ಲ್ಯಾಪ್‌ಟಾಪ್, ಕ್ಯಾಮೆರಾ ಇನ್ನೂ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಿತರಿಸಬೇಕು. ಹೆಚ್ಚಿನ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಧನಸಹಾಯ, ವಿದ್ಯಾಸಿರಿ ಅಂತಹ ಹಲವಾರು ಕಾರ್ಯ ಯೊಜನೆ ರೂಪಿಸಬೇಕು.
ವಿಶೇಷವಾಗಿ  ಕೆಳಿಕೊಳ್ಳುವುದು ಏನೆಂದರೆ ಪ್ರತಿ ಗ್ರಾಮ ಪಂಚಾಯತಿ ,ತಾಲ್ಲೂಕು ಪಂಚಾಯತ್ ಜಿಲ್ಲಾ ಪಂಚಾಯತ, ಪಟ್ಟಣ ಪಂಚಾಯತ್, ಪುರಸಭೆ,  ನಗರಸಭೆ, ತಹಶಿಲ್ದಾರ, ಜಿಲ್ಲಾಧಿಕಾರಿ ಭವನದಲ್ಲಿ, ಪ್ರತಿಯೊಂದು ಸರ್ಕಾರಿ ಕೆಲಸದಲ್ಲಿ ಪತ್ರಿಕೋದ್ಯಮ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿ  ಹೆಚ್ಚಿನ ಪ್ರಮಾಣದಲ್ಲಿ ಸರಕಾರಿ ಕೆಲಸ ಮಾಡಲು  ಅವಕಾಶ ಮಾಡಿ ಕೊಡಬೇಕು. ಅವಗ ಸರಕಾರದ ಕೆಲಸಕ್ಕೆ ಅಡ್ಡಿ ಮಾಡುವಂತಹ ಅನಾಮಧೇಯ ಪತ್ರಿಕೆ ಹೇಸರು ಹೇಳಿಕೊಂಡು ತಿರುಗಡುವ ಅನಾಮಧೇಯ ವ್ಯಕ್ತಿಗಳಿಗೆ ಕಡಿವಾಣದ ಮಟ್ಟ ಹಾಕಿದಾಗೆ ಹಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ.

ದೇವರಜ್ ಗುಡದಳ್ಳಿ. ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ.

Leave a Comment

Your email address will not be published. Required fields are marked *

Translate »
Scroll to Top