ಮಹಾದಾಯಿ ಯೋಜನೆ ಅನುಷ್ಠಾನ ಕುರಿತು ರಾಜ್ಯ ಸರಕಾರ ನಿರ್ಲಕ್ಷ್ಯ

ಗದಗ,ಡಿಸೆಂಬರ್ 16 : ಮಹಾದಾಯಿ ಯೋಜನೆ ಅನುಷ್ಠಾನ ಕುರಿತು ರಾಜ್ಯ ಸರಕಾರ ನಿರ್ಲಕ್ಷ್ಯತೆ ವಹಿಸಿದ್ದು,ಇದರಿಂದಾಗಿ ರೈತರಿಗೆ ತೊಂದರೆಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸೇನೆಯ ಅಧ್ಯಕ್ಷ ವಿರೇಶ ಸೊಬರದಮಠ ಗದಗನಲ್ಲಿ ಗುರುವಾರ ಆರೋಪಿಸಿದರು. ಪತ್ರಿಕಾ ಭವನದಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಹಾದಾಯಿ ಯೋಜನೆಯಲ್ಲಿ ರಾಜ್ಯದ ರೈತರ ಪಾಲಿನ ನೀರಿನ ಸದ್ಬಳಕೆ ಮಾಡಲು ನ್ಯಾಯಾಧಿಕರಣ 2018 ರಲ್ಲಿ ಒಪ್ಪಿಗೆ ನೀಡಿದ್ದರೂ ಸಹ ರಾಜ್ಯ ಸರಕಾರ ಈ ಯೋಜನೆ ಅನುಷ್ಠಾನಕ್ಕೆ ನಿರ್ಲಕ್ಷ್ಯತೆ ತೋರುತ್ತಿದ್ದೆ ಎಂದು ಸೊಬರದಮಠ ಆರೋಪಿಸಿದರು.


ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಸರಕಾರ ಶೀಘ್ರದಲ್ಲಿ ಕ್ರಮ ಕೈಗೊಳ್ಳದಿದ್ದರೆ, ರೈತ ಸೇನೆ ರಾಜ್ಯವ್ಯಾಪಿ ಹೋರಾಟ ರೂಪಿಸಲಿದೆ ಎಂದು ಸೊಬರದಮಠ ಎಚ್ಚರಿಸಿದರು. ರೈತ ಮುಖಂಡರಾದ ಎಫ್ ಬಿ ಜೋಗಣ್ಣವರ,ಸುಭಾಸ ಗಿರಿಯಣ್ಣವರ,ಮಲ್ಲಿಕಾರ್ಜುನ ಆಲೇಕರ, ಶರಣಪ್ಪ ಧರ್ಮಾಯತ, ಚಂದ್ರಕಾಂತ ಹೊನವಾಡ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top