kannadanadu

ಬಳ್ಳಾರಿಯ ಲೋಕಾಯುಕ್ತ ಪೊಲೀಸ್ ರ ಭರ್ಜರಿ ಬೇಟೆ

ಬಳ್ಳಾರಿಯ ಲೋಕಾಯುಕ್ತ ಪೊಲೀಸ್ ರ ಭರ್ಜರಿ ಬೇಟೆ, ಲಂಚಕ್ಕೆ ಬೀಡಿಕೆ ಇಟ್ಟ ಹಾಗೂ ಲಂಚೆ ಪಡೆತ್ತಿರುವಾಗ ಅಧಿಕಾರಿಗಳು ಬಂಧನ, ಬಳ್ಳಾರಿಯ ಬೂಡಾ ಕಚೇರಿ ಆಯುಕ್ತ ಸೇರಿ ಒಟ್ಟು ಆರು ಜನರ ಬಂಧನ, ರಮೇಶ ವಟಗಲ್, ಬೂಡಾ ಆಯುಕ್ತ 5 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಬಂಧನ, ಕಲ್ಲಿನಾಥ್ ನಗರ ಯೋಜನಾ ಸದಸ್ಯ, 6 ಲಕ್ಷ ಲಂಚದ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಬಂಧನ, ನಾರಾಯಣ, ಬೂಡಾ ಮ್ಯಾನೇಜರ್, ಫೋನ್ ಪೇ ಮೂಲಕ 10 ಸಾವಿಗೆ ಲಂಚ ಸ್ವೀಕರಿಸಿದ ಹಿನ್ನೆಲೆ ಬಂಧನ, ಶಂಕರ್, ಕೇಸ್ ವರ್ಕರ್ 60 ಸಾವಿರ ಲಂಚದ ಬೇಡಿಕೆಗಾಗಿ ಬಂಧಿಸಿ, ಫೋನ್ ಪೇ ಮೂಲಕ 20 ಸಾವಿರ ಸ್ವೀಕರಿಸಿದ ಹಿನ್ನೆಲೆ ಬಂಧನ.

ಮುಸ್ಲಿಮರ ಶೇ ೪ರಷ್ಟು ಮೀಸಲಾತಿ ಮುಂದುವರಿಸುವುದಾಗಿ ಬಿಜೆಪಿ ಮುಚ್ಚಳಿಕೆ ಬರೆದುಕೊಟ್ಟಿತ್ತು: ಮೋದಿಗೆ ಸಿಎಂ ತಿರುಗೇಟು

ಬೀದರ್: ಮುಸ್ಲಿಮರಿಗೆ ನೀಡಲಾಗಿರುವ ಶೇ. ೪ರಷ್ಟು ಮೀಸಲಾತಿಯನ್ನು ಮುಂದುವರೆಸುತ್ತೇವೆ ಎಂದು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ರ್ಕಾ ರ ಸುಪ್ರೀಂ ಕರ್ಟ್ರನಲ್ಲಿ ಹೇಳಿತ್ತು. ಈಗಲೂ ಆ ಮೀಸಲಾತಿ ಮುಂದುವರಿದಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಅತೀ ಶ್ರೀಮಂತ ಉದ್ಯಮಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿಯವರಿಂದ ಹುಬ್ಬಳ್ಳಿ-ಧಾರವಾಡ ಜನಕ್ಕೆ ಏನು ಸಿಕ್ತು: ಸಿ.ಎಂ ಪ್ರಶ್ನೆ

ಶಿಗ್ಗಾಂವ್: ರಾಜ್ಯದ ಜನರ ತೆರಿಗೆ ಹಣಕ್ಕೆ ಕೇಂದ್ರದಿಂದ ಆದ ದ್ರೋಹವನ್ನು ಸಮರ್ಥಿಸಿದ ಪ್ರಹ್ಲಾದ್ ಜೋಶಿಯನ್ನು ಈ ಬಾರಿ ಸೋಲಿಸಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಹುಬ್ಬಳ್ಳಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಹಸೂಟಿ ಪರವಾಗಿ ಪ್ರಜಾಧ್ವನಿ-2 ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

ಕೇವಲ ನರೇಂದ್ರ ಮೋದಿಯವರಿಗೆ ಮಾತ್ರ ದೇಶದ ಪ್ರಧಾನ ಮಂತ್ರಿಯಾಗುವ ಯೋಗ್ಯತೆ ಇದೆ: ಕೆ ಅಣ್ಣಾಮಲೈ, ಬಿಜೆಪಿ ನಾಯಕ

ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ನಿನ್ನೆ ಸಾಯಂಕಾಲ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ರ್ಥಿಾ ಬಿವೈ ರಾಘವೇಂದ್ರ ಅವರ ಪರ ಮತ ಯಾಚಿಸಿದ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ , ದೇಶದ ಪ್ರಧಾನಿಮಂತ್ರಿಯಾಗಲು ರ್ಹಲತೆ ಮತ್ತು ಯೋಗ್ಯತೆ ಬೇಕು, ಆ ಯೋಗ್ಯತೆ ಇಂಡಿಯ ಒಕ್ಕೂಟದ ಒಬ್ಬ ನಾಯಕನಲ್ಲೂ ಇಲ್ಲ ಎಂದು ಹೇಳಿದರು. ಪ್ರಧಾನ ಮಂತ್ರಿ ಹುದ್ದೆ ಆಟಿಕೆಯ ವಸ್ತು ಅಲ್ಲ, ಅಥವಾ ಒಂದು ಕಿಂರ್ಗಾೆರ್ಟ್ನ್ ಶಾಲೆಯ ಟೀಚರ್ ಆದಂತಲ್ಲ ಎಂದ ಅಣ್ಣಾಮಲೈ, ದೇಶದಲ್ಲಿ ಪ್ರಧಾನಮಂತ್ರಿಯಯಾಗುವ ಯೋಗ್ಯತೆ ಕೇವಲ ನರೇಂದ್ರ ಮೋದಿಯವರಿಗಿದೆ, ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿಸಲೆಂದೇ ನಿಮ್ಮ ಸಹಕಾರ ಕೋರಲು ಬಂದಿದ್ದೇವೆ ಎಂದರು. ವಿರೋಧ ಪಕ್ಷಗಳ ಒಕ್ಕೂಟದಲ್ಲಿ, ಫರೂಕ್ ಅಬ್ದುಲ್ಲಾ ಮಮತಾ ಬ್ಯಾರ್ಜೀ , ರಾಹುಲ್ ಗಾಂಧಿ, ಎಂಕೆ ಸ್ಟಾಲಿನ್ ಮೊದಲಾದವರೆಲ್ಲ ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ, ಅದರೆ ಅವರ ಕನಸು ಯಾವತ್ತೂ ನನಸಾಗಲ್ಲ ಎಂದು ಅವರು ಹೇಳಿದರು. ಭದ್ರಾವತಿಯಲ್ಲಿ ತಮಿಳು ಮಾತಾಡುವ ಜನ ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಅಣ್ಣಾಮಲೈ ತಮಿಳು ಭಾಷೆಯಲ್ಲೂ ಮಾತಾಡಿದರು.

ನೇಹಾ ಹತ್ಯೆ: ಸಿಬಿಐಗೆ ವಹಿಸುವಂತೆ ಕೇಳಲು ಬಿಜೆಪಿಯವರಿಗೆ ನೈತಿಕತೆ ಇಲ್ಲ, ಸಿಐಡಿ ತನಿಖೆ ಚುರುಕು- ಸಿಎಂ ಸಿದ್ದರಾಮಯ್ಯ

ಬೀದರ್: ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆ. ಈಗ ಹುಬ್ಬಳ್ಳಿ ವಿದ್ಯರ್ಥಿೇನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಿದ್ದೇವೆ. ಆಕೆಯ ಕುಟುಂಬಕ್ಕೆ ಶೀಘ್ರವೇ ನ್ಯಾಯ ಒದಗಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ದೇವದಾಸ್ ಅವರಿಗೆ ಎಐಡಿಎಸ್ಓ ವತಿಯಿಂದ ವಿದ್ಯಾರ್ಥಿಗಳ ಬೇಡಿಕೆಯ ಪ್ರಣಾಳಿಕೆ ಸಲ್ಲಿಕೆ

ಬಳ್ಳಾರಿ: ದುಡಿಯುವ ಜನರ ಹೋರಾಟದ ಧ್ವನಿಯಾಗಿರುವ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ದೇವದಾಸ್ ಅವರಿಗೆ ಎಐಡಿಎಸ್ಓ ವತಿಯಿಂದ ವಿದ್ಯಾರ್ಥಿಗಳ ಬೇಡಿಕೆಯ ಪ್ರಣಾಳಿಕೆಯನ್ನು ಸಲ್ಲಿಸಲಾಯಿತು.

‘ವೋಟ್ ಮಾಡಿ, ಊಟ ಮಾಡಿ’: ಬೆಂಗಳೂರು ಹೋಟೆಲ್​ಗಳಲ್ಲಿ ಸಿಗಲಿದೆ ಉಚಿತ ದೋಸೆ, ಸಿಹಿ ತಿಂಡಿ!

ಬೆಂಗಳೂರು: ಮತದಾನದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಮತ್ತು ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಬೆಂಗಳೂರಿನ ಕೆಲವು ಹೋಟೆಲ್ಗಳು ವಿಶಿಷ್ಟ ಜಾಗೃತಿ ಕರ್ಯ ಕ್ರಮ ಆಯೋಜಿಸುತ್ತಿವೆ. ಕಳೆದ ರ್ಷಿ ವಿಧಾನಸಭೆ ಚುನಾವಣೆಯಲ್ಲಿ ಮಾಡಿದ್ದಂತೆಯೇ ಈ ಬಾರಿಯೂ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ಬಂದವರಿಗೆ ಉಚಿತ ಆಹಾರ, ರಿಯಾಯಿತಿ ದರದಲ್ಲಿ ತಿಂಡಿ ನೀಡುವ ಬಗ್ಗೆ ಘೋಷಣೆ ಮಾಡಿವೆ.

ಚಿಕ್ಕಬಳ್ಳಾಪುರದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ: ಪುಷ್ಪ ಕೃಷಿಗೆ ಉತ್ತೇಜನ – ರಕ್ಷಾ ರಾಮಯ್ಯ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ವ್ಯಾಪಕ ಪ್ರಚಾರ ನಡೆಸಿದರು.
ಹಿರಿಯ ರಾಜಕಾರಣಿ, ಮಾಜಿ ಶಾಸಕರಾದ ಕೆ.ಪಿ. ಬಚ್ಚೇಗೌಡ, ಅನುಸೂಯಮ್ಮ ಅವರ ಜೊತೆಗೂಡಿ ಭರ್ಜರಿ ಮತಬೇಟೆಯಲ್ಲಿ ತೊಡಗಿದರು.

Translate »
Scroll to Top