MLA

ಸರಕಾರದ ರಾಜೀನಾಮೆಗೆ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗುವ ಮೂಲಕ ಕಾಂಗ್ರೆಸ್ ಪಕ್ಷವು ಸಂವಿಧಾನದ ರಕ್ಷಣೆ ಮಾಡುತ್ತಿದೆಯೇ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಶ್ನಿಸಿದರು. ಈ ಸರಕಾರ ತಕ್ಷಣ ರಾಜೀನಾಮೆ ಕೊಡಬೇಕಾದ ಅಗತ್ಯವಿದೆ ಎಂದು ಅವರು ಒತ್ತಾಯಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ ಐಪಿಎಸ್ ಅಮಾನತಿಗೆ ಸಿಎಟಿ ತಡೆಯಾಜ್ಞೆ;‌ ಶಾಸಕ ದುರ್ಯೋಧನ ಐಹೊಳೆಗೆ ನೋಟೀಸ್

ಬೆಂಗಳೂರು : ಗೋಕಾಕ್ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ ಅವರನ್ನು ಅಮಾನತು ಮಾಡಿ ಹೊರಡಿಸಿದ್ದ ಆದೇಶಕ್ಕೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧೀಕರ ತಡೆಯಾಜ್ಞೆ ನೀಡಿದೆ.

ನಮ್ಮ ಶಾಸಕರಿಗೆ ಕುಮಾರಸ್ವಾಮಿ ಆಫರ್, ಧಮಕಿ ಬಗ್ಗೆ ಮಾಹಿತಿ ಬಂದಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು : “ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ನಮ್ಮ ಶಾಸಕರಿಗೆ ಕರೆ ಮಾಡಿ ಆಫರ್ ನೀಡುತ್ತಿರುವುದು, ಧಮಕಿ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಶಾಲೆ ಎದುರು ಪ್ರತಿಭಟನೆ : ಶಾಸಕ ಕಾಮತ್  ವರ್ತನೆಗೆ ವ್ಯಾಪಕ ಖಂಡನೆ

ಮಂಗಳೂರು : ನಗರದ ಸೈಂಟ್ ಜೆರೋಸಾ ಶಾಲೆಯಲ್ಲಿ ಮಂಗಳವಾರದ ದಿನ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಪ್ರತಿಭಟನೆಗೆ ಕಾರಣಕರ್ತರಾದ ಶಾಸಕ ವೇದವ್ಯಾಸ ಕಾಮತ್ ಅವರ ನಡೆಯ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ

ಬಳ್ಳಾರಿ :  ತಾಲ್ಲೂಕಿನ ದಾಸರ ನಾಗೇನಹಳ್ಳಿ ಗ್ರಾಮದಲ್ಲಿ ಯುವಜನ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು, ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಗ್ರಾಮದಲ್ಲಿ ರೂ.40 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿದರು. ನಂತರದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಇವರ ಆಶ್ರಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉನ್ನತೀಕರಿಸಿದ ಕೂಸಿನ ಮನೆ ಉದ್ಘಾಟಿಸಿದರು. …

ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ Read More »

ವಿದ್ಯಾನಿಕೇತನ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ

ಗಂಗಾವತಿ : ಗಂಗಾವತಿ ವಡ್ಡರಹಟ್ಟಿಯ ಶ್ರೀ ವಿದ್ಯಾನಿಕೇತನ ಪದವಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಹಾಗೂ ಬೀಳ್ಕೊಡುಗೆ ಸಮಾರಂಭ 23-24 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶಾಸಕ ಜನಾರ್ದನರೆಡ್ಡಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಹಂಪಿ ಉತ್ಸವವು ವಿಜೃಂಭಣೆಯಿಂದ ನಡೆಯಲಿದೆ: ಶಾಸಕರಾದ ಹೆಚ್.ಆರ್.ಗವಿಯಪ್ಪ

ಹೊಸಪೇಟೆ : ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಹಂಪಿ ಉತ್ಸವವನ್ನು ಫೆಬ್ರವರಿ 02, 03 ಮತ್ತು 04ರಂದು ಮೂರು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ವಿಜಯನಗರ ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಹೇಳಿದರು.

ಹೇಮ-ವೇಮ ಸದ್ಬೋಧನ ವಿದ್ಯಾಪೀಠದ ಕಾರ್ಯ ಶ್ಲಾಘನೀಯ

ದಾವಣಗೆರೆ : ಹೇಮ-ವೇಮ ಸದ್ಬೋಧನ ವಿದ್ಯಾಪೀಠಕ್ಕೆ ಒಂದು ದಶಕದ ಸಂಭ್ರಮ. 2012-13ರಲ್ಲಿ ಪ್ರಾರಂಭವಾದ ಉಚಿತ ವಿದ್ಯಾರ್ಥಿನಿಲಯವು 40 ಮಕ್ಕಳೊಂದಿಗೆ ಪುಟ್ಟ ಹೆಜ್ಜೆಯನಿಟ್ಟು ಪ್ರಸ್ತುತ ಸರಿಸುಮಾರು 2,000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ವಸತಿಯುತ ಶಿಕ್ಷಣ ಪಡೆಯುತ್ತಿದ್ದಾರೆ ಈ ವಿದ್ಯಾಪೀಠದ ಕಾರ್ಯ ಶ್ಲಾಘನೀಯ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿಯವರು ತಿಳಿಸಿದರು.

ಜನಾರ್ದನರೆಡ್ಡಿಯವರು ತಂಗುತ್ತಿದ್ದ ಕುಟಿರಕ್ಕೆ ಬೆಂಕಿ

ಗಂಗಾವತಿ : ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜಿ.ಜನಾರ್ಧನ ರೆಡ್ಡಿಯವರು ಗಂಗಾವತಿ ಕ್ಷೇತ್ರದ ಐತಿಹಾಸಿಕ ಪಂಪಾಸರೋವರದಲ್ಲಿ ಆ ಭಾಗದ ಕ್ಷೇತ್ರದ ಜನತೆಯ ಆಗು ಹೋಗುಗಳ ವಿಚಾರಣೆಗೆ ಮತ್ತು ವಿಶ್ರಾಂತಿಗೆಂದು ನಿರ್ಮಿಸಲಾಗಿದ್ದ ಕುಟಿರಕ್ಕೆ ಬೆಂಕಿ ತಗುಲಿದ ಘಟನೆ ವರದಿಯಾಗಿದೆ.

ಸಿಟಿ ರವಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು : ತಮ್ಮ ವಿಡಿಯೋ ತಿರುಚಿ ಸುಳ್ಳು ಹರಿಯಬಿಟ್ಟಿರುವ ಮಾಜಿ ಶಾಸಕ ಸಿಟಿ ರವಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಟಿಪ್ಪು ಸುಲ್ತಾನ್ ಕೊಂದ ಉರಿಗೌಡ-ನಂಜೇಗೌಡ ಸಂಸ್ಕಾರದ ಸುಳ್ಳುಕೋರರ ಕೃತ್ಯ ಎಂದು ಗದಾಪ್ರಹಾರ ಮಾಡಿದ್ದಾರೆ.

Translate »
Scroll to Top