program

ದಯಾನಂದ್ ಸಾಗರ್ ಕಾಲೇಜಿನಿಂದ “ಗೇಮ್ ಆನ್ ಕ್ಯಾಂಪಸ್” ಆಯೋಜನೆ

ಬೆಂಗಳೂರು : ದಯಾನಂದ್ ಸಾಗರ್ ಅಕಾಡೆಮಿ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ಮೆಂಟ್ ನಿಂದ ಆಯೋಜಿಸಲಾದ “ಗೇಮ್ ಆನ್ ಕ್ಯಾಂಪಸ್” ನಲ್ಲಿ ” ವ್ಯಾಲೊರೆಂಟ್ ಪಂದ್ಯಾವಳಿಯ ಚಾಂಪಿಯನ್ ಆಗಿ ಟೀಮ್ ರೈಡರ್ಸ್” ಹೊರಹೊಮ್ಮಿದೆ. “ಟೀಮ್ ನೆಕ್ಸಸ್ “ಬಿಜಿಎಂಐ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ನೆಟ್ ಹಾಗೂ ಕೆ – ಸೆಟ್ ಪರೀಕ್ಷಾ ತರಬೇತಿ ಕಾರ್ಯಗಾರ

ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗಾವಕಾಶ ಕೋಶ ಸ್ನಾತಕೋತ್ತರ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಸ್ನಾತಕೊತ್ತರ ವಿದ್ಯಾರ್ಥಿಗಳಿಗಾಗಿ ನೆಟ್ ಮತ್ತು ಕೆ ಸೆಟ್ ಪರೀಕ್ಷಾ ತರಬೇತಿ ಕಾರ್ಯಗಾರವನ್ನು ಸೆ.06ರಂದು ಕಾಲೇಜಿನ ವಾಣಿಜ್ಯಶಾಸ್ತ್ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉದ್ಯೋಗಾವಕಾಶ ಕೋಶದ ಸಂಚಾರಕರಾದ ಪ್ರೊ ವೆಂಕಟೇಶ್ ಬಾಬು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೈಯಾಲಿಕಾವಲ್ ನಲ್ಲಿರುವ ತಿರುಮಲ ತಿರುಪತಿ ದೇವಾಸ್ಥಾನದಲ್ಲಿ ಮಹಾ ಸಂಪ್ರೋಕ್ಷಣ ಕಾರ್ಯಕ್ರಮ‌

ಬೆಂಗಳೂರು: ವೈಯಾಲಿಕಾವಲ್ ನಲ್ಲಿರುವ ತಿರುಮಲ ತಿರುಪತಿ ದೇವಾಸ್ಥಾನ ನಿರ್ಮಾನ ವಾಗಿ 12 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಮಹಾ ಸಂಪ್ರೋಕ್ಷಣ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಡಾ ಸಂಪತ್ ರವಿನಾರಾಯಣ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಡಾ ಸಂಪತ್ ರವಿನಾರಾಯಣ್ ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ದೇವಸ್ಥಾನ ನಿರ್ಮಿಸಿ ಹನ್ನೆರಡು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಈ ತಿಂಗಳ‌ 9, 10, ಹಾಗೂ 11 ರಂದು ಸಂಪ್ರೊಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ತಿರುಪತಿಯಿಂದ …

ವೈಯಾಲಿಕಾವಲ್ ನಲ್ಲಿರುವ ತಿರುಮಲ ತಿರುಪತಿ ದೇವಾಸ್ಥಾನದಲ್ಲಿ ಮಹಾ ಸಂಪ್ರೋಕ್ಷಣ ಕಾರ್ಯಕ್ರಮ‌ Read More »

ಎನ್ಇಪಿ ದೇಶದ ಪಾಲಿಗೊಂದು ಸುವರ್ಣಾವಕಾಶ

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಸುವರ್ಣಾವಕಾಶವಾಗಿದೆ, ಇದರ ಲಾಭವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೂಲೆಮೂಲೆಗೂ ಕೊಂಡೊಯ್ಯಬಹುದು. ಈ ವಿಚಾರದಲ್ಲಿ ರಾಜ್ಯವು ಮುಂದಾಳತ್ವ ವಹಿಸಿಕೊಳ್ಳಲು ಸಿದ್ಧವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಇಲ್ಲಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಶುಕ್ರವಾರದಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ನಡೆದ `ರಾಷ್ಟ್ರೀಯ ಶೈಕ್ಷಣಿಕ ಪಠ್ಯಕ್ರಮ ಚೌಕಟ್ಟಿನ (ಎನ್ಸಿಎಫ್) ಕಡ್ಡಾಯ ಮಾರ್ಗದರ್ಶಿ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದಲ್ಲಿ …

ಎನ್ಇಪಿ ದೇಶದ ಪಾಲಿಗೊಂದು ಸುವರ್ಣಾವಕಾಶ Read More »

ಮಾತೃಭಾಷೆಗಳೇ ಸಾರ್ವಭೌಮ : ಸಿಎಂ

ಹುಬ್ಬಳ್ಳಿ,: ಮಾತೃಭಾಷೆಗಳೇ ಸಾರ್ವಭೌಮ. ಎಲ್ಲರೂ ಇದನ್ನು ಮನಗಂಡು ಗೌರವಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.ಅಜಯ ದೇವಗನ್ ಅವರ ಟ್ವೀಟ್ ಗೆ ಸುದೀಪ್ ಅವರು ಪ್ರತಿಯಾಗಿ ಟ್ವೀಟ್ ಮಾಡಿರುವುದು ಸರಿ ಇದೆ. ನಮ್ಮ ರಾಜ್ಯಗಳು ಭಾಷಾವಾರು ಪ್ರಾಂತ್ಯಗಳಾದ ಮೇಲೆ ಆ ರಾಜ್ಯ ಗಳಲ್ಲಿ ಮಾತೃಭಾಷೆಗಳಿಗೆ ಪ್ರಾಧ್ಯಾನ್ಯತೆ ಇದೆ. ಅದೇ ಸಾರ್ವಭೌಮ. ಇದನ್ನು ಎಲ್ಲರೂ ಮನಗಂಡು ಗೌರವಿಸಬೇಕು ಎಂದು ಸಿಎಂ ಹೇಳಿದರು.

ಜನರ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುವ ಕಾರ್ಯಕ್ರಮ

ಬೆಂಗಳೂರು ; ರಾಜ್ಯದ ಜನರ ಆರೋಗ್ಯದ ದೃಷ್ಟಿಯಿಂದ ಪಡಿತರ ವ್ಯವಸ್ಥೆಯಡಿ ಅಕ್ಕಿಯ ಜತೆ ಸಿರಿಧಾನ್ಯ,ಜೋಳ ಮತ್ತು ರಾಗಿಯನ್ನು ಸಮಪ್ರಮಾಣದಲ್ಲಿ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯ ಸರ್ಕಾರ ಪಡಿತರ ಚೀಟಿದಾರರಿಗೆ ನೀಡುವ ಅಕ್ಕಿ,ಗೋಧಿ ಇಲ್ಲವೇ ರಾಗಿ ನೀಡುತ್ತಿದ್ದು ಅದೇ ಕಾಲಕ್ಕೆ ಕೋವಿಡ್ ಕಾಲದಲ್ಲಿ ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಡಿ ಐದು ಕೆಜಿ ಅಕ್ಕಿ ಒದಗಿಸುವ ಕೆಲಸವನ್ನು ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಒದಗಿಸುವ ಅಕ್ಕಿ,ಗೋಧಿ ಇಲ್ಲವೇ ರಾಗಿಯ ಜತೆಗೆ ಪ್ರಧಾನಮಂತ್ರಿಗಳ ಗರೀಬ್ …

ಜನರ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುವ ಕಾರ್ಯಕ್ರಮ Read More »

ಮೇ ತಿಂಗಳ ಮೊದಲ ಭಾನುವಾರ ವಿಶ್ವ ನಗು ದಿನ ಆಚರಣೆ-ರಂಗಲಕ್ಷ್ಮಿ ಶ್ರೀನಿವಾಸ್

ಬೆಂಗಳೂರು ; ಮೇ ತಿಂಗಳ ಮೊದಲ ಭಾನುವಾರದ ವಿಶ್ವ ನಗು ದಿನಾಚರಣೆಯಿಂದ ಜೂನ್ 21 ರ ವಿಶ್ವ ಯೋಗದ ದಿನದವರೆಗೆ ನಗೆ ಯೋಗ ಅಭಿಯಾನ ನಡೆಸಲಾಗುವುದು ಎಂದು ಅಂತರರಾಷ್ಟ್ರೀಯ ನಗೆಯೋಗ ತರಬೇತಿದಾರರು, ಗಿನ್ನೀಸ್ ವಿಶ್ವ ದಾಖಲೆ ಸ್ಥಾಪಿಸಿರುವ ನಗೆಯೋಗ ತಜ್ಞೆ ರಂಗಲಕ್ಷ್ಮಿ ಶ್ರೀನಿವಾಸ್ ಹೇಳಿದ್ದಾರೆ.ಸ್ವಾತಂತ್ರ್ಯ ದೊರೆತ 75 ನೇ ವರ್ಷಾಚರಣೆಯ ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ನಡೆಯುತ್ತಿರುವ ಯೋಗ ದಿನಾಚರಣೆಯನ್ನು ಯೋಗದ ಮತ್ತೊಂದು ಆಯಾಮವಾಗಿರುವ ನಗೆಯೋಗದ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಈ …

ಮೇ ತಿಂಗಳ ಮೊದಲ ಭಾನುವಾರ ವಿಶ್ವ ನಗು ದಿನ ಆಚರಣೆ-ರಂಗಲಕ್ಷ್ಮಿ ಶ್ರೀನಿವಾಸ್ Read More »

ಏಪ್ರಿಲ್‌ 22 ರಂದು ನಮ್ಮ ಕಾಶ್ಮೀರ – ನಮ್ಮ ಹೊಣೆ ರಾಷ್ಟ್ರೀಯ ಸಂವಾದ ಕಾರ್ಯಕ್ರಮ

ಬೆಂಗಳೂರು : ಅನಂತ ಕುಮಾರ್‌ ಪ್ರತಿಷ್ಠಾನವೂ ಅದಮ್ಯ ಚೇತನದ ಸಹಕಾರದೊಂದಿಗೆ ಏಪ್ರಿಲ್‌ 22 ರಂದು ನಮ್ಮ ಕಾಶ್ಮೀರ – ನಮ್ಮ ಹೊಣೆ ರಾಷ್ಟ್ರೀಯ ಸಂವಾದವನ್ನು ಆಯೋಜಿಸಿದೆ. ಭಾರತದ ಮುಕುಟಮಣಿ ಎಂದೇ ಖ್ಯಾತಿ ಹೊಂದಿರುವ ಕಾಶ್ಮೀರ, ಪ್ರತ್ಯಕ್ಷ ಶಾರದಾಮಾತೆಯ ಆವಾಸಸ್ಥಾನ. ಅದಕ್ಕಾಗಿಯೇ “ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ” ಎಂದು ನಿತ್ಯವೂ ನಮಸ್ಕರಿಸುವ ಪದ್ಧತಿ ರೂಢಿಗೆ ಬಂದಿದೆ. ಇಲ್ಲಿನ ಸರ್ವಜ್ಞ ಪೀಠವು ಹಿಂದಿನಿಂದಲೂ ಮಹಾನ್ ವಿದ್ವಾಂಸರ ನೆಲೆಯಾಗಿತ್ತು. ಶ್ರೀ ಶಂಕರಾಚಾರ್ಯರು ಅಲ್ಲಿಗೆ ಹೋಗಿ ಆ ಮಹಾನ್ ವಿದ್ವಾಂಸರನ್ನು ವಾದದಲ್ಲಿ ಗೆದ್ದು …

ಏಪ್ರಿಲ್‌ 22 ರಂದು ನಮ್ಮ ಕಾಶ್ಮೀರ – ನಮ್ಮ ಹೊಣೆ ರಾಷ್ಟ್ರೀಯ ಸಂವಾದ ಕಾರ್ಯಕ್ರಮ Read More »

ಕೋ-ಆಪರೇಟಿವ್ ಬ್ಯಾಂಕ್ ನ ಸುವರ್ಣ ಮಹೋತ್ಸವ

ಬೆಂಗಳೂರು : ಪ್ರತಿಷ್ಟಿತ ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕ್ ಐದು ದಶಕಗಳ ತನ್ನ ಯಶಸ್ವಿ ಸಾರ್ಥಕ ಸೇವೆ ಸವಿನೆನಪಿನಲ್ಲಿ ಇದೇ 23ರಂದು ಅರಮನೆ ಮೈದಾನದ ಕಿಂಗ್ಸ್‍ಕೋರ್ಟ್‍ನಲ್ಲಿ ಸುವರ್ಣ ಮಹೋತ್ಸವ ಸಮಾರಂಭವನ್ನು ಹಮ್ಮಿಕೊಂಡಿದೆ. ಈ ಕುರಿತು ಬ್ಯಾಂಕ್ ಅಧ್ಯಕ್ಷರಾದ ಎಚ್.ಸಿ.ಗೋಪಾಲ್, ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ನೀಡಿ, 2019ರಲ್ಲೇ ಬ್ಯಾಂಕ್‍ನ ಸುವರ್ಣ ಮಹೋತ್ಸವ ಸಮಾರಂಭ ಆಚರಣೆ ಮಾಡಬೇಕಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ಸಾಧ್ಯವಾಗದ ಕಾರಣ ಈಗ ಆಚರಣೆ ಮಾಡಲು ನಿರ್ಧರಿಸಲಾಗಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ಉದ್ಘಾಟನೆ …

ಕೋ-ಆಪರೇಟಿವ್ ಬ್ಯಾಂಕ್ ನ ಸುವರ್ಣ ಮಹೋತ್ಸವ Read More »

ಹಲವು ರಾಜ್ಯಗಳಲ್ಲಿ ಇಡಿ, ಸಿಬಿಐ ಏಜನ್ಸಿಗಳನ್ನು ಬಿಜೆಪಿ ತನ್ನಿಚ್ಛೆಯಂತೆ ಬಳಸಿಕೊಂಡಿದೆ : ಶರದ್ ಪವಾರ್

ಬೆಂಗಳೂರು : ದೇಶದ ಐದು ರಾಷ್ಟ್ರೀಯ ಪಕ್ಷಗಳಲ್ಲಿ ಎನ್‌ಸಿಪಿಯೂ ಒಂದಾಗಿದ್ದು, ಉತ್ತರದ ಕೆಲವು ರಾಜ್ಯಗಳಲ್ಲಿ ನಮ್ಮ ಪಕ್ಷ ಪ್ರಬಲವಾಗಿದೆ. ಇದೀಗ ಕರ್ನಾಟಕಕ್ಕೂ ನಮ್ಮ ಪಕ್ಷ ಪಾದಾರ್ಪಣೆ ಮಾಡಿದೆ. ಮುಂಬರುವ ಚುನಾವಣೆಯಲ್ಲಿ ಎನ್‌ಸಿಪಿ ಪಕ್ಷವು ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಲಿದೆ. ಇದರಿಂದ ಯಾವುದೇ ಪಕ್ಷದ ಜಾತ್ಯಾತೀತ ಅಭ್ಯರ್ಥಿಗಳಿಗೆ ತೊಂದರೆ ಆಗುವುದಿಲ್ಲ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ರಾಜ್ಯಸಭಾ ಸದಸ್ಯ ಹಾಗೂ ಎನ್‌ಸಿಪಿ ಪಕ್ಷದ ರಾಷ್ಟ್ರಾಧ್ಯಕ್ಷ ಶರದ್ ಪವಾರ್ ತಿಳಿಸಿದರು. ಇಂದು ಆಯೋಜಸಲಾಗಿದ್ದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು …

ಹಲವು ರಾಜ್ಯಗಳಲ್ಲಿ ಇಡಿ, ಸಿಬಿಐ ಏಜನ್ಸಿಗಳನ್ನು ಬಿಜೆಪಿ ತನ್ನಿಚ್ಛೆಯಂತೆ ಬಳಸಿಕೊಂಡಿದೆ : ಶರದ್ ಪವಾರ್ Read More »

Translate »
Scroll to Top