teachers

ಭಾರತದಲ್ಲಿ ಪ್ರಪ್ರಥಮ ಬಾರಿಗೆ  ಶಿಕ್ಷಕ  ಮತ್ತು  ವಿದ್ಯಾರ್ಥಿ  ಪಾಲ್ಗೊಳ್ಳುವಿಕೆ  ಸಮ್ಮಿಳಿತಗೊಳಿಸುವ  ಕ್ರಾಂತಿಕಾರಿ  ಶೈಕ್ಷಣಿಕ  ಆಪ್  ಬಿಡುಗಡೆ

ಬೆಂಗಳೂರು: ಶಿಕ್ಷಣ ಕ್ಷೇತ್ರ ವಿದ್ಯಾರ್ಥಿಗಳಿಗೆ ಹಾಗು ಶಿಕ್ಷಕರಿಗೆ ಪ್ರತ್ಯೇಕವಾಗಿ ಸೇವೆ ಸಲ್ಲಿಸುತ್ತಿರುವ ಶೈಕ್ಷಣಿಕ ಆಪ್ಗಳಿಂದ ತುಂಬಿ ಹೋಗಿದೆ. ಆದರೆ, ಇವೆಲ್ಲಕ್ಕಿಂತ ವಿಶಿಷ್ಟವಾಗಿ ರೂಪುಗೊಂಡಿರುವುದು ಈಡೆನ್ ಎಡ್ಜ್ “ಜೀನಿಯಸ್” ಆಪ್. ಏಕೆಂದರೆ, ದತ್ತಾಂಶ ಆಧಾರಿತವಾಗಿರುವ ಈ ಅಪ್ ಯಾವುದೇ ತಡೆಗಳಿಲ್ಲದ ಬೋಧನೆ ಮತ್ತು ಕಲಿಕೆಯ ಅನುಭವವನ್ನು ಜೊತೆಯಾಗಿ ನೀಡುವ ವೇದಿಕೆಯಾಗಿದೆ. ಆ ಮೂಲಕ ಕಲಿಕೆ ಹಾಗು ಬೋಧನೆಯಲ್ಲಿ ಹೊಸ ನಾವಿನ್ಯತೆಗೆ ನಾಂದಿ ಹಾಡಿದೆ.

ಅನ್ಯ ದೇಶಗಳಲ್ಲಿ ಶಿಕ್ಷಕರದ್ದು ವೃತ್ತಿ, ನಮ್ಮಲ್ಲಿ ಅತಿ ಎತ್ತರದ ಗೌರವ – ಡಾ.ಚಂದ್ರಶೇಖರ ಕಂಬಾರ

ಭಾರತೀಯ ಸಂಸ್ಕೃತಿಕ ಬೇರುಗಳು ಎಲ್ಲಿ ಹರಡಿಕೊಂಡಿವೆಯೋ ಅಲ್ಲಿ ಮಾತ್ರ ಶಿಕ್ಷಕರಿಗೆ ಮಹೋನ್ನತ ಗೌರವ ದೊರೆಯುತ್ತದೆ. ನಮ್ಮಲ್ಲಿ ಅಕ್ಷರ ಕಲಿಸುವವರಿಗೆ ಬಹು ಎತ್ತರದ ಸ್ಥಾನ ದೊರೆಯುತ್ತಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದ್ದಾರೆ.

2023-24ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ: ಸಂಪೂರ್ಣ ಪಟ್ಟಿ ಇಲ್ಲಿದೆ

ಬೆಂಗಳೂರು: ಕರ್ನಾಟಕ ಶಿಕ್ಷಣ ಇಲಾಖೆ 2023-24ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಕಲಿಯಿರಿ ಕಲಿಸಿರಿ ಶಾಲಾ ಪ್ರಾರಂಭೋತ್ಸವಕ್ಕೆ ಶಾಲಾ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಿದ ಶಿಕ್ಷಕರು

ಕುಷ್ಟಗಿ:- ತಾಲೂಕಿನ ದೋಟಿಹಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳನ್ನು ೨೦೨೨ನೇ ವರ್ಷದ ಶಾಲಾ ಪ್ರಾರಂಭೋತ್ಸವಕ್ಕೆ ಕಲಿಯಿರಿ ಕಲಿಸಿರಿ ಜಾತಾ ಮಾಡುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಮುಖ್ಯೋಪಧ್ಯಾಯರು, ಶಾಲಾ ಶಿಕ್ಷಕರು ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳ ಮೂಲಕ ಗ್ರಾಮದ ಓಣಿ ಓಣಿಗಳಲ್ಲಿ ತಿರುಗಾಡಿ ಕಲಿಯಿರಿ ಕಲಿಸಿರಿ ಎಂಬ ಘೋಷಣೆ ಕುಗುತ್ತಾ ಮಕ್ಕಳನ್ನು ಶಾಲೆಗೆ ಕರೆತರಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸಿದ್ರಾಮಪ್ಪ ಅಮರಾವತಿ ಸೇರಿದಂತೆ ಶಾಲಾ ಶಿಕ್ಷಕ, ಶಿಕ್ಷಕಿಯರು ಮಕ್ಕಳು ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿಯವರ “ನವ ಭಾರತ”ದ ಕನಸು ನನಸಾಗುತ್ತಿದೆ

ಬೆಂಗಳೂರು: ಆಧುನಿಕ ಜಗತ್ತಿಗೆ ವೈದ್ಯರು ಒಗ್ಗಿಕೊಂಡು ಸಮಾಜಕ್ಕೆ ಉತ್ತಮ ಸೇವೆ ನೀಡಬೇಕು. ವೈದ್ಯರ ಕೆಲಸದಲ್ಲಿ ಧರ್ಮ, ಜಾತಿಯ ಭೇಧವಿಲ್ಲ. ಹಳ್ಳಿ ಹಳ್ಳಿಯಲ್ಲೂ ಆರೋಗ್ಯ ಸೇವೆ ಸುಲಭವಾಗಿ ಸಿಕ್ಕಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು. ಬೆಂಗಳೂರಿನ ಬಿಜಿಎಸ್ ಮೆಡಿಕಲ್ ಕಾಲೇಜಿನ ಮೂರನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವೈದ್ಯರು ತಪಾಸಣೆ ಅಥವಾ ಚಿಕಿತ್ಸೆಯ ವೇಳೆ ರೋಗಿಯ ಮತ್ತು ಅವರ ಸಂಬಂಧಿಕರ ಕಣ್ಣಿನಲ್ಲಿರುವ ಪ್ರೀತಿ ಅಥವಾ ಕಷ್ಟಗಳನ್ನು ಕಾಣುವಂತಗಬೇಕು. ಅವರ …

ಪ್ರಧಾನಿ ನರೇಂದ್ರ ಮೋದಿಯವರ “ನವ ಭಾರತ”ದ ಕನಸು ನನಸಾಗುತ್ತಿದೆ Read More »

ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್‍ನಾರಾಯಣಗೆ ಬಿಳ್ಕೊಡುಗೆ

ದೇವನಹಳ್ಳಿ: ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್‍ನಾರಾಯಣ್ ಅವರು ನಮ್ಮ ತಾಲೂಕಿಗೆ ಶೈಕ್ಷಣಿಕವಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದರ ಪರಿಣಾಮವಾಗಿ ದೇವನಹಳ್ಳಿ ತಾಲೂಕಿಗೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಬರಲು ಸಾಧ್ಯವಾಯಿತು. ಹಾಗೂ ಅವರು ಕರ್ತವ್ಯದಲ್ಲಿದ್ದಾಗ ಅವರು ನನಗೆ ನೀಡುತ್ತಿದ್ದ ಮಾರ್ಗದರ್ಶನದಿಂದಾಗಿ ನಾನು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕೆಲಸ ಮಾಡಲು ಸಹಕಾರಿಯಾಗಿದೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೊಟ್ರೇಶ್ ತಿಳಿಸಿದರು. ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್‍ನಾರಾಯಣ್ ಅವರಿಗೆ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು ಅಶ್ವಥ್ ನಾರಾಯಣ್ ಅವರು …

ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್‍ನಾರಾಯಣಗೆ ಬಿಳ್ಕೊಡುಗೆ Read More »

ಶಾಲಾ ಅಭಿವೃದ್ಧಿ ಮಕ್ಕಳ ಮತ್ತು ಶಿಕ್ಷಕರು ಮೆಚ್ಚಿಗೆ

ಕೊಪ್ಪಳ : ಜಿಲ್ಲೆ ಕುಷ್ಟಗಿ ತಾಲೂಕಿನ ಹನಮಸಾಗರ ಕಸ್ತೂರಿ ಬಾ ವಸತಿ ಶಾಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲಾ ಕಂಪೌಂಡ್, ಸಸಿಗಳನ್ನು ನೆಟ್ಡು ಪರಿಸರ ಸಂರಕ್ಷಣೆ, ಕುಡಿಯುವ ನೀರು, ಆಟದ ಮೈದಾನ ಸೇರಿದಂತೆ ಅನೇಕ ಅಭಿವೃದ್ಧಿಗೊಳಿಸಿ ನೋಡುವವರ ಕಣ್ಣಿಗೆ ಬಹಳ ಅಂದವಾಗಿ ಕಾಣುತ್ತಿದೆ ಎಂದು ಹೇಳ ಬಹುದು ಯಾವ ರೀತಿಯಾಗಿ ಅಭಿವೃದ್ಧಿ ಆಗಿದೆ ಎನ್ನುವುದನ್ನು ಹನಮಸಾಗರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು. .

ಶಿಕ್ಷಕ ವೃತ್ತಿ ಗೌರವಾನ್ವಿತ ಹಾಗೂ ಶ್ರೇಷ್ಠ ವೃತ್ತಿ

ದೇವನಹಳ್ಳಿ: ಅತ್ಯಂತ ಉದಾತ್ತವಾದ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿಯೂ ಒಂದು. ಒಬ್ಬ ಒಳ್ಳೆಯ ಶಿಕ್ಷಕನನ್ನು ವಿದ್ಯಾರ್ಥಿಗಳು ಅವರ ಜೀವನದುದ್ದಕ್ಕೂ ಸ್ಮರಿಸುತ್ತಾರೆ ಎಂದು ಹಿರಿಯ ಶಸ್ತ್ರಚಿಕಿತ್ಸಕರಾದ ಡಾ.ಟಿ.ಹೆಚ್. ಆಂಜಿನಪ್ಪ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಗಿರಿಜಾಶಂಕರ ಕಲ್ಯಾಣ ಮಂಟಪದಲ್ಲಿ ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವತಿಯಿಂದ ದ್ವಿತೀಯ ಪಿ.ಯು ವಿದ್ಯಾರ್ಥಿಗಳಿಗೆ ನೀಡಿದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗಾಗಿ ತಮ್ಮ ಜೀವನವನ ಬಹುಭಾಗ ಸಮರ್ಪಿಸುತ್ತಾರೆ. ತಂದೆ ತಾಯಿಗಳಿಂತ ಹೆಚ್ಚಾಗಿಯೇ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ವಿದ್ಯಾರ್ಥಿಗಳ …

ಶಿಕ್ಷಕ ವೃತ್ತಿ ಗೌರವಾನ್ವಿತ ಹಾಗೂ ಶ್ರೇಷ್ಠ ವೃತ್ತಿ Read More »

ವ್ಯಾಸನಕೆರೆ ಗ್ರಾಮದಲ್ಲಿ ಶಾಲಾ ಮಕ್ಕಳಿಂದ ಹಳ್ಳಿಜೀವನ ಶೈಲಿ ಚಟುವಟಿಕೆ

ಮರಿಯಮ್ಮನಹಳ್ಳಿ ,ಮಾ,21 : ಪಟ್ಟಣ ಸಮೀಪದ ವ್ಯಾಸನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂರುದಿನಗಳ ಓದುವ ಅಭಿಯಾನ ಕಾರ್ಯಕ್ರಮ ಹಳ್ಳಿಜೀವನ ಶೈಲಿ ಚಟುವಟಿಕೆ ಯನ್ನು ಶಾಲಾ ಮಕ್ಕಳಿಂದ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಶ್ರೀಯುತ ಬಿ.ಹುಲುಗಪ್ಪ ಮತ್ತು ಸಿಬ್ಬಂದಿ ವರ್ಗ ದವರು ಮತ್ತು ಮಾರ್ಗದರ್ಶನ ಶಿಕ್ಷಕಿಯಾದ ಶ್ರೀಮತಿ  ಎಂ.ಹನುಮಕ್ಕ  ಹಾಗೂ S D M C ಅಧ್ಯಕ್ಷರು ಸದಸ್ಯರು ಭಾಗವಹಿಸಿದ್ದರು.

Translate »
Scroll to Top