ಕೊಪ್ಪಳಜಿಲ್ಲೆಗಳುವೀಡಿಯೊಗಳು

ಹೊನ್ನಕೇರಿ ದೇವಾಲಯದಲ್ಲಿ ನಿತ್ಯ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾದ ಶಿಕ್ಷಕರು

ಕುಷ್ಟಗಿ: ಶಿಕ್ಷಣದಿಂದ ವಂಚಿತರಾದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಇಬ್ಬರು ಅತಿಥಿ ಶಿಕ್ಷಕರು ಮುಂದಾಗಿದ್ದಾರೆ.
ಹೌದು ಇದು ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ೧೦ನೇ ವಾರ್ಡ್‌ನಲ್ಲಿರುವ ಹೊನ್ನಕೇರಿ ಮಲ್ಲಯ್ಯ ದೇವಸ್ಥಾನದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಕಥೆಯಾಗಿದೆ.
ರಮೇಶ ಸಂಗಟಿ ಮತ್ತು ಯಮನೂರ ಸಂಗಟಿ ಎಂಬ ಇಬ್ಬರು ಅತಿಥಿ ಶಿಕ್ಷಕರು, ಶಿಕ್ಷಣದಿಂದ ವಂಚಿತರಾದ ಬಡ ಕುಟುಂಬದ ಮಕ್ಕಳನ್ನು ಗುರುತಿಸಿ ಸುಮಾರು ೨೦ ದಿನಗಳಿಂದ ಉಚಿತ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದ್ದಾರೆ.

ಕೊರೋನಾ ವೈರಸ್ ಎಂಬ ಮಹಮ್ಮಾರಿ ಬಂದು ಕಳೆದ ಎರಡು ವರ್ಷಗಳಿಂದ ಮಕ್ಕಳ ಶಿಕ್ಷಣಕ್ಕೆ ಕೊಕ್ಕೆ ಇಟ್ಟಿದೆ. ಆದರೆ ಇದರ ಭಾಗವಾಗಿ ಸರಕಾರ ಆನ್ ಲೈನ್ ಕ್ಲಾಸ್ ಪ್ರಾರಂಭ ಮಾಡಿದೆ. ಆದರೆ ಬಡ ಕುಟುಂಬದ ಮಕ್ಕಳಲ್ಲಿ ಸ್ಕ್ರೀನ್ ಟಚ್ ಮೊಬೈಲ್ ಇಲ್ಲದ ಕಾರಣ ಅಂತಹ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ೫ರಿಂದ ೧೦ ನೇ ತರಗತಿಯ ವರಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ.

ಸರಕಾರ ಮಾಡದಂತಹ ಕೆಲಸವನ್ನು ಈ ಇಬ್ಬರು ಅತಿಥಿ ಶಿಕ್ಷಕರು ಮಾಡುತ್ತಿದ್ದು ಕೊವೀಡ್ ನಿಯಮ ಪಾಲನೆ ಮಾಡುವ ಮೂಲಕ ಮತ್ತು ಮಾಸ್ಕ್ ಸಾನಿಟೈಜರ್, ಸಮಾಜಿಕ ಹಂತರ ಕಾಪಾಡುವ ಮೂಲಕ ಸಾರ್ವಜನಿಕರ ಮೆಚ್ವಿಗೆಯನ್ನು ಪಡೆಯುತ್ತಿದ್ದಾರೆ.

Leave a Reply