ಬೆಂಗಳೂರುಮನೋರಂಜನೆರಾಜ್ಯಸಿನಿಮಾ

ತೆಲುಗು ನಟ ನಂದಮೂರಿ ತಾರಕರತ್ನ ನಿಧನ

ಬೆಂಗಳೂರು: ಹೃದಯ ಸಂಬಂಧಿತ ಚಿಕಿತ್ಸೆಗೊಳಪಟ್ಟಿದ್ದ ಖ್ಯಾತ ತೆಲುಗು ನಟ ನಂದಮೂರಿ ತಾರಕರತ್ನ ಶನಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ

ಜನವರಿ 27ರಂದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಬಳಿ ಟಿಡಿಪಿ ಪಾದಯಾತ್ರೆ ವೇಳೆ ಅವರು ಹೃದಯಾಘಾತದಿಂದ ಕುಸಿದುಬಿದ್ದಿದ್ದರು.

23 ದಿನಗಳಿಂದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾರಕರತ್ನ, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ(ಫೆ.18) ಕೊನೆಯುಸಿರೆಳೆದಿದ್ದಾರೆ.

1983ರ ಫೆಬ್ರವರಿ 22ರಂದು ಜನಿಸಿದ್ದ ತೆಲುಗು ನಟ ತಾರಕರತ್ನ, ಒಕಟೋ ನಂಬರ್ ಕುರ್ರಾಡು, ಭದ್ರಾದಿ ರಾಮುಡು, ಯುವರತ್ನ ಸೇರಿದಂತೆ 20 ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ

Leave a Reply