ಪಡಿತರ ಅಕ್ಕಿ ಅಕ್ರಮ ಸಾಗಟವನ್ನು ವಶಕ್ಕೆ ಪಡೆದ ಪಟ್ಟಣದ ಪೊಲೀಸರು

ಮರಿಯಮ್ಮನಹಳ್ಳಿ,,ಮಾ.19 :  ಸರ್ಕಾರ ಬಡವರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 16 ಸಾವಿರದ 800 ನೂರು ರೂ ಮೌಲ್ಯದ 11.20 ಕ್ವಿಂಟಾಲ್ ಪಡಿತರ ಅಕ್ಕಿ ಮತ್ತು ಸಾಗಾಟ ಮಾಡಲು ಬಳಸಿದ ಬುಲೆರೋ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ ಪಟ್ಟಣದ ಹೊರ ವಲಯದ ದೇವಲಾಪುರ ಕ್ರಾಸ್  ಸಮೀಪ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆಯಲ್ಲಿ  ಪಟ್ಟಣದ ಪಿ.ಎಸ್.ಐ.ಹನುಮಂತಪ್ಪ ತಳವಾರ್ ರವರು ವಾಹನವನ್ನು ವಶಕ್ಕೆ  ಪಡೆದುಕೊಂಡರು.

ಅಕ್ರಮವಾಗಿ ಬುಲೆರೋ ಪಿಕಪ್ ನಲ್ಲಿ  ಪಡಿತರ ಅಕ್ಕಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ,ಪಟ್ಟಣದ ಪಿ.ಎಸ್.ಐ.ಹನುಮಂತಪ್ಪ ತಳವಾರ್ ಮತ್ತು ಸಿಬ್ಬಂದಿ  ತಂಡ ದಾಳಿ ಮಾಡಿದ್ದದಾರೆ. ಈ ಸಂಬಂಧ ಮೂವರು ಆರೋಪಿತರನ್ನು ಬಂಧಿಸಲಾಗಿದೆ. ಕೂಡ್ಲಿಗಿ ಡಿ.ಎಸ್.ಪಿ, ಹಗರಿಬೊಮ್ಮನಹಳ್ಳಿ ಸಿಪಿಐ ಇವರ ಮಾರ್ಗದರ್ಶನದಲ್ಲಿ  ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯನ್ನುಭೇದಿಸಿದ ಪಿ.ಎಸ್.ಐ.ಹನುಮಂಪ್ಪ ತಳವಾರ್, ಪೇದೆಗಳಾದ ಹೆಗ್ಗಪ್ಪ, ಪ್ರವೀಣ್ ಕುಮಾರ್, ಗುರುಬಸವರಾಜ, ಶಿವರಾಜ್, ಈ ತಂಡಕ್ಕೆ ವಿಜಯನಗರದ ಎಸ್ಪಿ  ಡಾ.ಅರುಣ್‌ ಕೆ. ರವರು ಶ್ಲಾಘಿಸಿದರು.  ಈ ಸಂದರ್ಭದಲ್ಲಿ ನಾಗರಾಜ್. ಹೆಚ್. ಆಹಾರ ಶಿರಸ್ತೇದಾರರು ಮತ್ತು ಕಂದಾಯ ಇಲಾಖೆ ಇದ್ದರು.

Leave a Comment

Your email address will not be published. Required fields are marked *

Translate »
Scroll to Top