ಕ್ಷಯ ರೋಗಿಗಳ ಬೆಂಬಲಸಭೆ

ಕುಷ್ಟಗಿ :- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಕೊಪ್ಪಳ. ತಾಲೂಕ ಆಸ್ಪತ್ರೆ ಕುಷ್ಟಗಿ ಹಾಗೂ ಕರ್ನಾಟಕ ಆರೋಗ್ಯ ಸಂವಹರ್ಧನ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಕ್ಷಯರೋಗಿಗಳ ಬೆಂಬಲ ಗುಂಪುಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸುಶೀಲ ಮೇಡಂ PHSI ಇವರು ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ಪಾಕೀಟನ್ನು ವಿತರಿಸಿ ಮಾತನಾಡಿದ ಇವರು ಕ್ಷಯರೋಗಿಗಳಿಗೆ ಆತ್ಮಸ್ಥೈರ್ಯ ಹಾಗೂ ಆರೋಗ್ಯದ ಕಾಳಜಿ ಎಲ್ಲಾ ಕ್ಷಯರೋಗಿಗಳಿಗೆ ಕ್ಷಯರೋಗಕ್ಕೆ ಯಾರು ಭಯಪಡುವ ಅಗತ್ಯವಿಲ್ಲ , ಪೌಷ್ಟಿಕಾಂಶಯುಕ್ತ ಆಹಾರ ಮತ್ತು ನಿಯಮಿತ ಮಾತ್ರೆಗಳನ್ನು ತೆಗೆದುಕೊಳ್ಳುವ ಮುಖಾಂತರ ಆರೋಗ್ಯ ಕಾಪಾಡಿಕೊಳ್ಳಬೇಕು ಮತ್ತು ಕ್ಷಯರೋಗ ಸಂಪೂರ್ಣವಾಗಿ ಗುಣಮುಖವಾಗುವಂತಹ ಕಾಯಿಲೆಯಾಗಿದೆ ಎಂದು ತಿಳಿಸಿದರು, ಶೇಕಪ್ಪ ವಡ್ಡರ್ ಟಿಬಿ ಚಾಂಪಿಯನ್ ತಮ್ಮ ಅನುಭವ ಹಂಚಿಕೊಂಡರು.


ನಂತರದಲ್ಲಿ ತಾಲೂಕ ಕ್ಷಯರೋಗದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ವೆಂಕಟೇಶ್ ಸರ್ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕ್ಷಯ ಇರುವವರು ಕೆಮ್ಮುವಾಗ ಸೀನುವಾಗ ಅವರ ಬಾಯಿಂದ ಬರುವ ತುಂತುರುಹನಿಗಳ ಮುಖಾಂತರ ಆರೋಗ್ಯವಂತ ವ್ಯಕ್ತಿಗೆ ಕ್ಷಯ ಹರಡುತ್ತದೆ ,ಚಿಕಿತ್ಸೆ ಕೊಡದಿರುವ ರೋಗಿಯು ಒಂದು ವರ್ಷಕ್ಕೆ 15 ರಿಂದ 18 ಜನರಿಗೆ ಸೋಂಕನ್ನು ಹರಡುತ್ತಾನೆ ಆದ್ದರಿಂದ ಶಿಬಿರಾರ್ಥಿಗಳು ನಿಮ್ಮ ಮನೆಯ ಸುತ್ತಮುತ್ತಲಿನಲ್ಲಿರುವ ಕ್ಷಯ ಲಕ್ಷಣವಿರುವ ಅವರನ್ನು ಗುರುತಿಸಿ ಪರೀಕ್ಷೆ ಮತ್ತು ಚಿಕಿತ್ಸೆಗೆ ಕಳುಹಿಸಿಕೊಡಿ ಹಾಗೂ ಕೆಮ್ಮುವಾಗ ಸೀನುವಾಗ ಕರವಸ್ತ್ರ ಬಳಸಲು ತಿಳಿಸಿದರು, ಕ್ಷಯರೋಗದ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣ ಉಚಿತವಾಗಿ ನೀಡಲಾಗುವುದು,ಜೊತೆಗೆ ಕ್ಷಯರೋಗ ದೃಢಪಟ್ಟವರಿಗೆ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಗಾಗಿ ನಿಕ್ಷೆಯ ಪೋಷಣ ಯೋಜನೆ ಅಡಿಯಲ್ಲಿ ಸರ್ಕಾರದಿಂದ ಪ್ರತಿ ತಿಂಗಳು ಐದುನೂರು ರೂಗಳ ಸಹಾಯಧನ ನೀಡಲಾಗುವುದು, ಹಿಗ್ರ ಟೆಸ್ಟ್ ಬಗ್ಗೆ ಮಾಹಿತಿ ಹೇಳಲಾಯಿತು.ವೀರ್ಭದ್ರಪ್ಪಸರ್ TBHV ಚಿಕಿತ್ಸೆಯ ಅವಧಿಯಲ್ಲಿ ಮಾತ್ರೆಯಿಂದ ಅಡ್ಡಪರಿಣಾಮಗಳಾದರೆ Dr. ಬಸಂತ್ ಕುಮಾರ್ ಸರ್ ಶ್ವಾಸಕೋಶದ ಡಾಕ್ಟರ್ ಇದ್ದಾರೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ 2025ರ ವೇಳೆಗೆ ಕ್ಷಯಮುಕ್ತ ಭಾರತ ಹಾಗೂ ಕ್ಷಯ ಮುಕ್ತ ಕುಷ್ಟಗಿ ನಿರ್ಮಾಣ ಮಾಡಲು ಆರೋಗ್ಯ ಇಲಾಖೆಯೋಂದಿಗೆ ಕಮುನಿಟಿ ಸ್ಟ್ರಕ್ಚರ್ಸ್ ಮತ್ತು ಕ್ಷಯರೋಗಿಗಳು ಕೈಜೋಡಿಸಲು ತಿಳಿಸಿದರು,


ನಂತರ ಶೋಭಾ ಕೆ ಹೆಚ್ ಪಿ ಟಿ ಯ ಸಮುದಾಯ ಸಂಯೋಜಕರು ಮಾತನಾಡಿ ಚಿಕಿತ್ಸೆಯ ಸಮಯದಲ್ಲಿ ಸಹವ್ಯಾಧಿ ಸೋಂಕುಗಳ ಪರೀಕ್ಷೆ ಹಾಗೂ ಚಿಕಿತ್ಸೆ ಕೂಡ ನೀಡಲಾಗುವುದು ಹಾಗೂ ಎಲ್ಲರೂ ಕೋವಿಡ್ ಲಸಿಕೆಯನ್ನು ಪಡೆಯಲು ಹೇಳಲಾಯಿತು. ಕಾರ್ಯಕ್ರಮದಲ್ಲಿ ಶ್ರೀನಿಧಿ ಒಕ್ಕೂಟ ಸದಸ್ಯರಾದ ಸಿದ್ದಮ್ಮ ಮತ್ತು ಶಾರದಾ,,ಆಶಾ ಕಾರ್ಯಕರ್ತೆಯರು, ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

Translate »
Scroll to Top