ಬೇಸಿಗೆಗೂ ಮುನ್ನವೇ ಬೆಂಗಳೂರುನಲ್ಲಿ ಕಂಡ ಕಲ್ಲಂಗಡಿ ಹಣ್ಣು!

ವರದಿ: ಡಾ.ವರ ಪ್ರಸಾದ್ ರಾವ್ ಪಿ ವಿ.
ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಚಳಿ ಕಡಿಮೆಯಾಗಿ ಬಿಸಿಲಿನ ತಾಪ ದಿನೇ ದಿನೇ ಏರುತ್ತಿದೆ. ಬಿಸಿಲಿನ ಝಳದಿಂದ ಪಾರಾಗಲು ಜನರು ಕಲ್ಲಂಗಡಿ ಹಣ್ಣುಗಳತ್ತ ಮುಖ ಮಾಡಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಕಲ್ಲಂಗಡಿ ಹಣ್ಣುಗಳ ರಾಶಿ ದಾರಿ ಹೋಕರ ದಾಹ ತಣಿಸಲು ಕೈಬೀಸಿ ಕರೆಯುತ್ತಿದೆ. ಈ ಬಗ್ಗೆ ಒಂದು ವರದಿ. ಬೆಂಗಳೂರು ಬೇಸಿಗೆಯ ಬಿಸಿ ಇಷ್ಟಿಷ್ಟೇ ಕಾಲಿಡುವ ಹೊತ್ತಿಗೆ ‘ನಾಮಧಾರಿ, ಸುಪ್ರೀತ್ ಎಂಬ ಎರಡು ತಳಿಗಳ ಕಲ್ಲಂಗಡಿ ಹಣ್ಣಗಳು ಆಂಧ್ರ ಪ್ರದೇಶ , ತೆಲಂಗಾಣದ ಮತ್ತು ತುಮಕೂರಿನ ಮಡಕಶಿರಸುತ್ತ ಮುತ್ತಲಿನಿಂದ ಬೆಂಗಳೂರಿಗೆ ಕಾಲಿಟ್ಟಿದೆ. ಪೌಷ್ಠಿಕ ಹಸಿಕಡಲೆ ಕಂತೆಯೂ ಗಮನ ಸೆಳೆಯುತ್ತಿದೆ. ನೀರುಹಣ್ಣು ಎಂದೇ ಖ್ಯಾತವಾಗಿರುವ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಬಾಯಾರಿಕೆ ತಣಿಸುವ, ಶಕ್ತಿ ವರ್ಧಕ ಹಣ್ಣು. ಚೇತೋಹಾರಿ ಪಾನೀಯವಾಗಿಯೂ ಕಲ್ಲಂಗಡಿ ರಸಕ್ಕೆ ಬೇಡಿಕೆ ಕುದುರುತ್ತಿದ್ದು, ನಗರದೆಲ್ಲೆಡೆ ಕಲ್ಲಂಗಡಿ ರಾಶಿ ನೋಡುವ ಜನ ಅಲ್ಲಿ ವಾಹನ ನಿಲ್ಲಿಸಿ ಹಣ್ಣು ಸೇವನೆ ಮಾಡಿ, ಖರೀದಿಸದೇ ಮುಂದೆ ಹೋಗುತ್ತಿಲ್ಲ.

ಹೀಗಾಗಿ ಬೇಸಿಗೆ ಆರಂಭಕ್ಕೂ ಮುನ್ನವೇ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಬಿಸಿಲಿನ ತಾಪದ ದಾಹ ತಣಿಸಲು ಜನರು ಕಲ್ಲಂಗಡಿಗೆ ಮೊರೆಯಿಟ್ಟಿದ್ದಾರೆ. ಈ ಬಾರಿ ಬೇಸಿಗೆ ಇನ್ನು ಒಂದು ತಿಂಗಳು ಮುಂಚೆ ಇರುವಾಗಲೇ ನಗರದ ಪ್ರಮುಖ ಬೀದಿಗಳಲ್ಲಿ ತಂಪು ಪಾನೀಯ ಮತ್ತು ಕಲ್ಲಂಗಡಿ ವ್ಯಾಪಾರ ಜೋರಾಗಿ ಸಾಗುತ್ತಿದೆ. ಜನವರಿ ಕೊನೆಯ ವಾರದಿಂದಲೇ ಮಧ್ಯಾಹ್ನದ ವೇಳೆಯಲ್ಲಿಉರಿಬಿಸಿಲು ಆರಂಭಗೊಂಡಿರುವುದರಿಂದ ತಂಪು ಪಾನೀಯ ಮತ್ತು ಕಲ್ಲಂಗಡಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಬೇಸಿಗೆ ಬಂದಿದೆ ಎಲ್ಲಿ ನೋಡಿದರೂ ಕಲ್ಲಂಗಡಿ ಹಣ್ಣು. ನೋಡಲು ಎಷ್ಟು ಚಂದವೊ ಅಷ್ಟೇ ಆರೋಗ್ಯಕರವಾದ ಹಣ್ಣು. ಬೇಸಿಗೆಯ ಕಾಲದಲ್ಲಿ ಹೆಚ್ಚಾಗಿ ಸಿಗುವ ನಮ್ಮ ಬಾಯಾರಿಕೆಯನ್ನು ನೀಗಿಸುವ ಈ ಕಲ್ಲಂಗಡಿ ಹಣ್ಣಿನಿಂದ ಹಲವು ಉಪಯೋಗಗಳಿವೆ. ಬೆಂಗಳೂರು ಬೇಸಿಗೆ ಪ್ರಾರಂಭದ ದಿನಗಳಲ್ಲಿಯೇ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಅಲ್ಲಲ್ಲಿ ಬಾಯಾರಿಕೆ ನೀಗಿಸುವ ಕಲ್ಲಂಗಡಿ ಹಣ್ಣುಗಳ ರಾಶಿ ದಾರಿ ಹೋಕರನ್ನು ಕೈ ಬೀಸಿ ಕರೆಯುತ್ತಿದೆ. ಬಿಸಿಲಿಗೆ ಬಸವಳಿದವರು ಹಣ್ಣು ತಿಂದು ಬಾಯಾರಿಸಿಕೊಳ್ಳುತ್ತಿದ್ದಾರೆ. ಪರಿಣಾಮ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಬಿಸಿಲು ತಣಿಸಲೆಂದು ನಗರದ ಪ್ರಮುಖ ಬೀದಿಗಳಲ್ಲಿ ಕಲ್ಲಂಗಡಿ ಹಣ್ಣುಗಳ ವ್ಯಾಪಾರ ಭರ್ಜರಿಯಾಗಿದೆ. ಖಾಲಿ ಜಾಗಗಳಲ್ಲಿಹಣ್ಣಿನ ರಾಶಿ ಹಾಕಿಕೊಳ್ಳುವ ವ್ಯಾಪಾರಿಗಳು ತಿಂಗಳುಗಟ್ಟಲೇ ಬಿಡಾರ ಹೂಡಿ, ವ್ಯಾಪಾರಕ್ಕೆ ಮುಂದಾಗಿದ್ದಾರೆ.

3 ಕೆಜಿ ಹಣ್ಣಿನಿಂದ 17 ಕೆಜಿ ಗಾತ್ರದ ಹಣ್ಣಿನವರೆಗೆ ಅಂದರೆ ಗಾತ್ರಕ್ಕೆ ತಕ್ಕಂತೆ 70 ರಿಂದ 350 ರವರೆಗೆ ದರ ಇದೆ. ವರ್ಷದ 12 ತಿಂಗಳೂ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣು ಇರುತ್ತದೆ. ಬೇಸಿಗೆ ಕಾಲದಲ್ಲಿ 3 ರಿಂದ 4 ಕ್ವಿಂಟಾಲ್‌ ಕಲ್ಲಂಗಡಿ ಮಾರಾಟ ಆಗುತ್ತದೆ. ಸಾಮಾನ್ಯ ದಿನಗಳಲ್ಲಿ1 ರಿಂದ 2 ಕ್ವಿಂಟಾಲ್‌ ಮಾರಾಟ ಆಗುತ್ತದೆ. ಬಹುತೇಕ ಜನರು ಬೇಸಿಗೆಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಾರೆ.

ಹಣ್ಣಿನ ಉಪಯೋಗ :
ಕಲ್ಲಂಗಡಿ ಹಣ್ಣಿನಲ್ಲಿಶೇ.90 ರಷ್ಟು ನೀರಿನಾಂಶ ಇರುವುದರಿಂದ ದೇಹಕ್ಕೆ ಉತ್ತಮ ಪೌಷ್ಟಿಕಾಂಶ ಲಭಿಸುತ್ತದೆ. ದೇಹದ ತೂಕ ಇಳಿಕೆಯಾಗಲು ಪೂರಕವಾಗುತ್ತದೆ. ರಕ್ತ ಶುದ್ಧಿಯಾಗುವುದರೊಂದಿಗೆ ಅಸಿಡಿಟಿ ಕಡಿಮೆ ಆಗುತ್ತದೆ. ಜತೆಗೆ ಕೆಂಪು ರಕ್ತಕಣಗಳು ವೃದ್ಧಿಯಾಗುತ್ತವೆ. ಉರಿ ಮೂತ್ರ ಕಡಿಮೆಯಾಗುತ್ತದೆ.
• ಕಲ್ಲಂಗಡಿಯಲ್ಲಿ ಪ್ರತ್ಯಾಮ್ಲಗಳು ಅಧಿಕವಿರುತ್ತದೆ. ಇದು ದೇಹಕ್ಕೆ ಹಾನಿಯುಂಟು ಮಾಡುವ ಬೇಡದ ರಾಸಾಯನಿಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
• ಕಲ್ಲಂಗಡಿ ಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಹೃದಯವನ್ನು ರಕ್ಷಣೆ ಮಾಡುತ್ತದೆ.
• ಕಲ್ಲಂಗಡಿಯಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್ ಅಸ್ತಮಾ ಕಾಯಿಲೆಯನ್ನು ಕಡಿಮೆ ಮಾಡುತ್ತದೆ.
• ಬೇಸಿಗೆಯಲ್ಲಿ ನಮ್ಮ ಚರ್ಮದಲ್ಲಿ ಹಾಗೂ ಇಡೀ ದೇಹದಲ್ಲಿ ನೀರು ಕಡಿಮೆ ಆಗುತ್ತದೆ. ಕಲ್ಲಂಗಡಿ ಸೇವನೆಯಿಂದ ಅದು ಸಮತೋಲನದಲ್ಲಿ ಇರುತ್ತದೆ.
• ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರುಲೈನ್ ಅಧಿಕವಿದ್ದು ಇದು ದೇಹದಲ್ಲಿ ನಿಟ್ರಿಕ್ ಆಕ್ಸೈಡ್ ಉತ್ಪತ್ತಿಗೆ ಸಹಾಯಮಾಡುತ್ತದೆ. ನಿಟ್ರಿಕ್ ಆಕ್ಸೈಡ್ ರಕ್ತ ನಾಳಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ ಹಾಗೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
• ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರೊಲೈನ್ ಇದ್ದು, ಇದು ದೇಹವನ್ನು ಸೇರಿದಾಗ ಅಮೈನೋ ಆಸಿಡ್ ಆಗಿ ಪರಿವರ್ತನೆಯಾಗುತ್ತದೆ. ಅಮೈನೋ ಆಸಿಡ್ ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ಕಾಪಾಡುತ್ತದೆ.
• ಕಲ್ಲಂಗಡಿಯಲ್ಲಿ ವಿಟಮಿನ್ ಬಿ6 ಇರುವುದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಬೇಗನೆ ಉದ್ವೇಗಕ್ಕೆ ಒಳಗಾಗುವುದನ್ನು ತಡೆಯುತ್ತದೆ.
• ಕಲ್ಲಂಗಡಿಯಲ್ಲಿ ಕಬ್ಬಿಣದಂಶ, ಮ್ಯಾಗ್ನಿಷ್ಯಿಯಂ, ಕ್ಯಾಲ್ಸಿಯಂ, ಸತು, ಪೊಟಾಷ್ಯಿಯಂ, ಐಯೋಡಿನ್ ಇರುವುದರಿಂದ ಮೂಳೆಗಳನ್ನು ಬಲವಾಗಿಸುತ್ತದೆ. ಇದರಿಂದ ಸಂಧಿ ನೋವು ಉಂಟಾಗುವುದಿಲ್ಲ.
• ಕಲ್ಲಂಗಡಿಯಲ್ಲಿ ಫಾಲಿಕ್ ಆಸಿಡ್ ಅಧಿಕವಿರುವುದರಿಂದ ಗರ್ಭಿಣಿಯರಿಗೆ ಸೂಕ್ತವಾದ ಆಹಾರವಾಗಿದೆ. ಅಲ್ಲದೆ ಇದರಲ್ಲಿ ಖನಿಜಾಂಶಗಳು ಇರುವುದರಿಂದ ಪೋಷಕಾಂಶಾದ ಕೊರತೆ ಉಂಟಾಗುವುದಿಲ್ಲ.
• ಕಾಲು ಊದುವ ಸಮಸ್ಯೆ ಇರುವವರಿಗೆ ಪ್ರತೀದಿನ ಒಂದು ಕಲ್ಲಂಗಡಿ ಹಣ್ಣನ್ನು ತಿಂದರೆ ಸಾಕು ಈ ಸಮಸ್ಯೆ ಕಡಿಮೆಯಾಗುವುದು.
• ದೇಹದ ತೂಕ ಹೆಚ್ಚಾಗಿದೆ ಎಂಬುವರು ಇದನ್ನು ಸೇವಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು.
• ಮಧುಮೇಹ ರೋಗಿಗಳಿಗೆ ಇದು ತುಂಬ ಉಪಯುಕ್ತ ಹಣ್ಣು.
• ಕಲ್ಲಂಗಡಿ ಬೀಜಗಳಿಂದ ವಸಡಿನಲ್ಲಿ ಬರುವ ರಕ್ತದ ಸಮಸ್ಯೆಗೆ ಪರಿಹಾರ ಕಾಣಬಹುದು. ಕೂದಲು ಉದುರುವುದು, ತಲೆಹೂಟ್ಟಿನ ಸಮಸ್ಯೆಗೂ ಪರಿಹಾರ ಸಿಗುತ್ತದೆ.
• ಕಲ್ಲಂಗಡಿಯಲ್ಲಿ ಹೆಚ್ಚಾಗಿ ನೀರು ಹಾಗೂ ಫೈಬರ್ ಅಂಶ ಇರುವ ಕಾರಣ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
• ಕಲ್ಲಂಗಡಿ ರಸ ಮತ್ತು ಮಜ್ಜಿಗೆ ಸೇರಿಸಿ ಸೇವಿಸುವುದರಿಂದ ಉರಿಮೂತ್ರ ಕಡಿಮೆ ಆಗುತ್ತದೆ

Leave a Comment

Your email address will not be published. Required fields are marked *

Translate »
Scroll to Top