ಬಳ್ಳಾರಿ: ಕುಡತಿನಿ ಕೈಗಾರಿಕಾ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆ ಮತ್ತು ಗಡಿ ಗುರುತಿಸುವಿಕೆ ವೇಳೆ ಉಂಟಾಗಬಹುದಾದ ಪ್ರತಿಭಟನೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಯ ದೃಷ್ಟಿಯಿಂದ ಕುಡತಿನಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 07 ರಿಂದ 14 ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಪ-ವಿಭಾಗಾಧಿಕಾರಿ ರಾಜೇಶ್ ಹೆಚ್.ಡಿ ಅವರು ಆದೇಶ ಹೊರಡಿಸಿದ್ದಾರೆ.
ಹಿನ್ನೆಲೆ:
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕುಡತಿನಿ ಪ್ರದೇಶದಲ್ಲಿ ಭೂಸ್ವಾಧೀನಪಡಿಸಿಕೊಂಡಿರುವ ಜಮೀ ನಿನ ಮೊಜಣಿ ಹಾಗೂ ಗಡಿ ಗುರುತಿಸಲು ಮುಂದಾಗಿದೆ. ಈ ವೇಳೆ ಸ್ಥಳೀಯ ಭೂ ಸಂತ್ರಸ್ತ ರೈತರು ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎಂಬುದಾಗಿ ಪೆÇಲೀಸರು ವರದಿ ನೀಡಿರುವ ಹಿನ್ನೆಲೆಯಲ್ಲಿ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾದ್ಯತೆಗಳಿದ್ದು, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ನಿμÉೀಧಾಜ್ಞೆ ಜಾರಿಯಲ್ಲಿರುವ ಪ್ರದೇಶಗಳು: ಬಳ್ಳಾರಿ ಉಪ-ವಿಭಾಗಾಧಿಕಾರಿ ರಾಜೇಶ ಹೆಚ್.ಡಿ. ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರ ಅಡಿ ಈ ಕೆಳಗಿನ ಪ್ರದೇಶಗಳಲ್ಲಿ ನಿಬರ್ಂಧ ವಿಧಿಸಿದ್ದಾರೆ. ಸಂಪೂರ್ಣ ಕುಡತಿನಿ ಕೆ.ಐ.ಎ.ಡಿ.ಬಿ ಪ್ರದೇಶ, ಬಳ್ಳಾರಿ ಬೈಪಾಸ್ ರಸ್ತೆಯಿಂದ ಸುಲ್ತಾನಪುರ ಕ್ರಾಸ್ ಬಳಿಯ ಬೂದಿ ಕಣಿವೆವರೆಗೆ, ಸುಲ್ತಾನಪುರ ಕ್ರಾಸ್‍ನಿಂದ ಸುಲ್ತಾನಪುರ ಗ್ರಾಮದವರೆಗೆ, ಕುಡತಿನಿ ಪಟ್ಟಣದಿಂದ ಹರಗಿನದೊಣಿ ರಸ್ತೆಯ ವರೆಗೆ, ಕುಡತಿನಿ ಪಟ್ಟಣದಿಂದ ತಿಮ್ಮಲಾಪುರ ಗ್ರಾಮದವರೆಗೆ, ಕುಡತಿನಿ ಪಟ್ಟಣದಿಂದ ಏಳುಬೆಂಚಿ ರಸ್ತೆಯ ರೈಲ್ವೇ ಗೇಟ್ ವರೆಗಿನ ಪ್ರದೇಶ. ನಿಗದಿಪಡಿಸಿದ ಪ್ರದೇಶಗಳಲ್ಲಿ 4ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿμÉೀಧಿಸಲಾಗಿದೆ. ಯಾವುದೇ ರೀತಿಯ ಮಾರಕಾಸ್ತ್ರಗಳು, ಪೆಟ್ರೋಲ್, ಡೀಸೆಲ್, ವಿಷದ ಬಾಟಲಿಗಳು, ಕಲ್ಲು, ಸೌದೆ ಅಥವಾ ಚಾಕುಗಳಂತಹ ಹರಿತವಾದ ಆಯುಧಗಳನ್ನು ಹಿಡಿದು ಓಡಾಡುವುದನ್ನು ಕಟ್ಟುನಿಟ್ಟಾಗಿ ನಿಬರ್ಂಧಿಸಲಾಗಿದೆ. ಈ ಆದೇಶವು ಮೇ 7ರ ಸಂಜೆ 06 ಗಂಟೆಯಿಂದ ಮೇ 14ರ ಸಂಜೆ 06 ಗಂಟೆಯವರೆಗೆ ಜಾರಿಯಲ್ಲಿರಲಿದೆ ಎಂದು ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.