ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ನವೀನ್‍ಕುಮಾರ್ ಅವರು ಈ ಬಾರಿಯ `ಗಣರಾಜ್ಯೋತ್ಸವ’ದ ಪ್ರಯುಕ್ತ ಕೇಂದ್ರ ಸರ್ಕಾರವು ಕೊಡ ಮಾಡುವ `ರಾಷ್ಟ್ರಪತಿ ಪದಕ’ಕ್ಕೆ ಭಾಜನರಾಗಿದ್ದಾರೆ.
`ರಿಪಬ್ಲಿಕ್ ಡೇ’ ಪ್ರಯುಕ್ತ ನೀಡಲಾಗುವ `ರಾಷ್ಟ್ರಪತಿ’ಗಳ ಪದಕಕ್ಕೆ ಜಿಲ್ಲೆಯ ಎಎಸ್‍ಪಿ ನವೀನ್‍ಕುಮಾರ್ ಆಯ್ಕೆಯಾಗಿದ್ದು, ಅವರಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರಪತಿ ಪದಕ ನೀಡಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಇಲಾಖೆಯಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿರುವ ನವೀನ್‍ಕುಮಾರ್ ಅವರನ್ನು `ರಾಷ್ಟ್ರಪತಿ ಪದಕ’ಕ್ಕೆ ಆಯ್ಕೆ ಮಾಡಲಾಗಿದೆ. ಎಎಸ್‍ಪಿ ನವೀನ್‍ಕುಮಾರ್ ಅವರನ್ನು ಪೊಲೀಸ್ ಅಧಿಕಾರಿಗಳು ಅಭಿನಂದಿಸಿ, ಶುಭ ಹಾರೈಸಿದ್ದಾರೆ.