LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News

ಸಂಕಷ್ಟಕ್ಕೆ ಸಿಲುಕಿದ ಬಳ್ಳಾರಿ ಜೀನ್ಸ್ ಉದ್ಯಮ

ಬಳ್ಳಾರಿ : ಅಮೆರಿಕಾ, ಇಸ್ರೇಲ್ - ಇರಾನ್ ನಡುವಿನ ಸಂಘರ್ಷದ ಪರಿಣಾಮ ಒಟ್ಟಾರೆ ಜಾಗತಿಕ ಮಟ್ಟದಲ್ಲಿ ಬೀರುತ್ತಿರುವದರ ಜೊತೆಗೆ ಬಳ್ಳಾರಿಯ ಜೀನ್ಸ್ ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಈ ಸಂಘರ್ಷದ ಪರಿಣಾಮವಾಗಿ ಬಳ್ಳಾರಿಯ ಜೀನ್ಸ್ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಲ್ಲಿನ ಜೀನ್ಸ್ ರಫ್ತು ಸ್ಥಗಿತಗೊಂಡಿರುವ ಜೊತೆಗೆ ಉತ್ಪಾದನೆ ಕೂಡಾ ಕುಸಿದಿರುವುದರಿಂದ ಉದ್ಯಮಿಗಳು ಮತ್ತು ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ.
ಜೀನ್ಸ್ ಉದ್ಯಮಕ್ಕೆ ರಾಜ್ಯದಲ್ಲಿಯೇ ಹೆಸರುವಾಸಿಯಾದ ಬಳ್ಳಾರಿಯಲ್ಲಿ ಸುಮಾರು 500ಕ್ಕೂ ಅಧಿಕ ಜೀನ್ಸ್ ಘಟಕಗಳಿವೆ. ಈ ಉದ್ಯಮವನ್ನೇ ನಂಬಿಕೊಂಡು ಸುಮಾರು 10 ಸಾವಿರ ಕುಟುಂಬಗಳು ಜೀವನೋಪಾಯ ಮಾಡುತ್ತಿವೆ. ಇಂತಹ ಉದ್ಯಮಕ್ಕೆ ಇದೀಗ ಸವಾಲು ಎದುರಾಗಿದೆ. ಇದೀಗ ಯುಗಾದಿ ಮತ್ತು ರಂಜಾನ್ ಹಬ್ಬದ ಸೀಸನ್‍ನಲ್ಲಿ ಸಾಮಾನ್ಯವಾಗಿ ರಫ್ತಿಗೆ ಬೇಡಿಕೆ ಉಂಟಾಗಿ ಜೀನ್ಸ್ ಉದ್ಯಮವು ಲಾಭದ ನಿರೀಕ್ಷೆ ಇಟ್ಟುಕೊಳ್ಳುತ್ತದೆ. ಆದರೇ ಇರಾನ್ ಯುದ್ಧದ ಕಾರಣ ಉದ್ಯಮಕ್ಕೆ ಬೇಕಾದ ಕಚ್ಛಾ ಪದಾರ್ಥಗಳ ಪೂರೈಕೆಯಲ್ಲಿ ನ ವ್ಯತ್ಯಯದಿಂದಾಗಿ ಉತ್ಪಾದನೆ ಕುಸಿತ ಕಂಡಿದೆ. ಅಲ್ಲದೇ ರಫ್ತು ವಹಿವಾಟಿಗೆ ಸುಗಮ ಸಂಚಾರವಿಲ್ಲದ ಕಾರಣ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಕೆಮಿಕಲ್ ಕೊರತೆ ಉತ್ಪಾದನೆ ಕುಸಿತ
ಜೀನ್ಸ್ ಉತ್ಪಾದನೆಗೆ ಅಗತ್ಯವಾದ ರಾಸಾಯನಿಕಗಳ ಸರಬರಾಜು ಕೊಲ್ಲಿ ರಾಷ್ಟ್ರಗಳಿಂದ ನಡೆಯುತ್ತಿತ್ತು. ಆದರೆ ಯುದ್ಧ ಪರಿಸ್ಥಿತಿಯಿಂದ ಹಡಗು ಸಂಚಾರ ವ್ಯತ್ಯಯಗೊಂಡಿದ್ದು, ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಜೀನ್ಸ್ ಉದ್ಯಮಗಳಲ್ಲಿ ಬಳಸಲಾಗುವ ಹೈಡ್ರೋಜನ್ ಪೆರಾಕ್ಸೈಡ್, ಸೋಡಿಯಂ ಹೈಪೆÇೀಕ್ಲೋರೈಟ್ ಮತ್ತು ಪೆÇಟ್ಯಾಸಿಯಮ್ ಪಮಾರ್ಂಗನೇಟ್ ಮುಂತಾದ ಪ್ರಮುಖ ರಾಸಾಯನಿಕಗಳ ಕೊರತೆಯಿಂದ ಜೀನ್ಸ್ ಬಟ್ಟೆಯ ವರ್ಣಗೊಳಿಸುವ ಪ್ರಕ್ರಿಯೆ ಅಸ್ತವ್ಯಸ್ತವಾಗಿದೆ.
ಪೂರೈಕೆಯಲ್ಲಿ ವ್ಯತ್ಯಯ, ಗಗನಕ್ಕೇರಿದ ದರ
ಯುದ್ದಕ್ಕೂ ಮೊದಲು ಕೆಜಿಗೆ ಸುಮಾರು ರೂ.40 ಇದ್ದ ಕೆಮಿಕಲ್ ದರ ಈಗ ರೂ.150 ಗಡಿಯನ್ನು ದಾಟಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಟಾಕ್‍ಗಳನ್ನು ಹೆಚ್ಚುವರಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಉತ್ಪಾದನಾ ವೆಚ್ಚ ತೀವ್ರ ಏರಿಕೆಯಾಗಿದೆ.
ರಫ್ತು ಸ್ಥಗಿತ-ಕೋಟ್ಯಂತರ ನಷ್ಟ
ಸಾಮಾನ್ಯವಾಗಿ ಯುಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಬಳ್ಳಾರಿ ಜೀನ್ಸ್‍ಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇರುತ್ತದೆ. ಈ ಬಾರಿ ಸುಮಾರು 20 ಲಕ್ಷ ಜೀನ್ಸ್ ಪ್ಯಾಂಟ್‍ಗಳನ್ನು ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಿಗೆ ರಫ್ತು ಮಾಡುವ ಯೋಜನೆ ಇತ್ತು.
ಆದರೆ ರಾಸಾಯನಿಕ ಕೊರತೆಯಿಂದ ಉತ್ಪಾದನೆ ಶೇ.50ರಷ್ಟು ಕುಸಿದಿದ್ದು, ರಫ್ತು ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಕೋಟ್ಯಂತರ ರೂಪಾಯಿ ವ್ಯವಹಾರಕ್ಕೆ ನಷ್ಟ ಉಂಟಾಗಿದೆ.
ಕಾರ್ಮಿಕರ ಮೇಲೂ ಪರಿಣಾಮ
ಈಗಾಗಲೇ ಕಾರ್ಮಿಕರ ಕೊರತೆಯಿಂದ ಬಳಲುತ್ತಿದ್ದ ಉದ್ಯಮಕ್ಕೆ ಇತ್ತೀಚಿನ ಪರಿಸ್ಥಿತಿ ಮತ್ತಷ್ಟು ಹೊಡೆತ ನೀಡಿದೆ. ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಕಾರ್ಮಿಕರ ಉದ್ಯೋಗ ಭದ್ರತೆ ಬಗ್ಗೆ ಆತಂಕ ಹೆಚ್ಚಾಗಿದೆ.
ಮುಚ್ಚುವ ಭೀತಿ
ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಬಳ್ಳಾರಿಯ ಅನೇಕ ಜೀನ್ಸ್ ಫ್ಯಾಕ್ಟರಿಗಳು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಮುಚ್ಚುವ ಸಾಧ್ಯತೆ ಇದೆ. ಇದು ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ಗಂಭೀರ ಹೊಡೆತ ನೀಡಲಿದೆ.
ಒಟ್ಟಾರೆ, ಅಂತರಾಷ್ಟ್ರೀಯ ಸಂಘರ್ಷದ ಪರಿಣಾಮ ಸ್ಥಳೀಯ ಕೈಗಾರಿಕೆಗಳ ಮೇಲೆ ಹೇಗೆ ನೇರ ಪರಿಣಾಮ ಬೀರುತ್ತದೆ ಎಂಬುದಕ್ಕೆ ಬಳ್ಳಾರಿ ಜೀನ್ಸ್ ಉದ್ಯಮವೇ ಸ್ಪಷ್ಟ ಉದಾಹರಣೆಯಾಗಿದೆ.

 

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ