LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Business News

ಗ್ರಾಹಕನ ಜೇಬಿಗೆ ಹೊರೆಯಾಗಲಿರುವ ವಾಹನ ಖರೀದಿ

ಬೆಂಗಳೂರು : ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಇದೀಗ ಹೊಸ ಆರ್ಥಿಕ ವರ್ಷ ಏಪ್ರಿಲ್ ನಿಂದ ವಾಹನಗಳ ಬೆಲೆ ಕೂಡ ಏರಿಕೆಯಾಗಲಿದೆ.
ಏಪ್ರಿಲ್ ನಿಂದ ಹೊಸ ವಾಹನಗಳ ದರದಲ್ಲಿ ಏರಿಕೆ ಅನಿವಾರ್ಯವಾಗಿದ್ದು, ಗ್ರಾಹಕರಿಗೆ ಹೆಚ್ಚು ಭಾರವಾಗಲಿದೆ. ವಾಹನ ತಯಾರಿಕಾ ಕಂಪನಿಗಳು ನೀಡಿರುವ ಮಾಹಿತಿಯ ಪ್ರಕಾರ, ಕಾರುಗಳ ದರದಲ್ಲಿ ಸುಮಾರು ಶೇ. 4ರವರೆಗೆ, ದ್ವಿಚಕ್ರ ವಾಹನಗಳಲ್ಲಿ ಶೇ. 2 ರವರೆಗೆ ಏರಿಕೆ ಆಗುವ ಸಾಧ್ಯತೆ ಇದೆ.
ಉಕ್ಕಿನ ದರದಲ್ಲಿ ಏರಿಕೆ, ವಿದೇಶಿ ಆಮದು ವೆಚ್ಚ ಹೆಚ್ಚಳ, ತಯಾರಿಕಾ ವೆಚ್ಚದ ಭಾರೀ ಏರಿಕೆಯೇ ವಾಹನ ದರ ಏರಿಕೆಗೆ ಪ್ರಮುಖ ಕಾರಣಗಳಿಂದ ಕಂಪನಿಗಳು ದರ ಏರಿಕೆ ಮಾಡಲು ತೀರ್ಮಾನಿಸಿವೆ.
ದರ ಏರಿಕೆಯ ಪರಿಣಾಮವಾಗಿ ಗ್ರಾಹಕರು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. 1 ಲಕ್ಷದ ಬೈಕ್ ಖರೀದಿಸಿದರೆ 2 ರಿಂದ 3 ಸಾವಿರ ರೂ, 2 ಲಕ್ಷದ ವಾಹನ ವಾಹನ ಖರೀದಿಸಿದರೆ 5 ರಿಂದ 6 ಸಾವಿರ ರೂ, 5 ಲಕ್ಷದ ಕಾರು 15 ಲಕ್ಷ ದಿಂದ 20 ಸಾವಿರ ರೂ, 10 ಲಕ್ಷದ ಕಾರು ಖರೀದಿಸಿದರೆ 30ರಿಂದ 40 ಸಾವಿರ ರೂ ಹೆಚ್ಚಳವಾಗಲಿದೆ.ಇದು ಕೇವಲ ಕೆಲವೇ ವಾಹನಗಳಿಗೆ ಸೀಮಿತವಾಗಿಲ್ಲ. ಸಾಮಾನ್ಯ ಕಾರುಗಳಿಂದ ಹಿಡಿದು ಲಕ್ಸುರಿ ವಾಹನಗಳವರೆಗೂ ದರ ಏರಿಕೆ ಅನ್ವಯವಾಗಲಿದೆ.ಈ ದರ ಏರಿಕೆಯಿಂದ ಆಟೋ, ಕ್ಯಾಬ್ ಚಾಲಕರು, ವಾಹನ ಆಧಾರಿತ ಜೀವನ ಸಾಗಿಸುವವರು, ಮಧ್ಯಮ ವರ್ಗದ ಕುಟುಂಬಗಳು ಇವರಿಗೆ ಹೆಚ್ಚು ಹೊರೆ ಬೀಳುವ ಸಾಧ್ಯತೆ ಇದೆ.
ಮಧ್ಯಮ ವರ್ಗದ ಜನರ ಸ್ವಂತ ಕಾರು ಕನಸು ಇದೀಗ ಮತ್ತಷ್ಟು ದೂರ ಸರಿಯುವ ಸಾಧ್ಯತೆ ಇದೆ. ಈಗಾಗಲೇ , ಇಂಧನ ವೆಚ್ಚ ಹೆಚ್ಚಿರುವ ಸಂದರ್ಭದಲ್ಲಿ ಹೊಸ ದರ ಏರಿಕೆ ಗ್ರಾಹಕರಿಗೆ ದೊಡ್ಡ ಸವಾಲಾಗಲಿದೆ.
ಏಪ್ರಿಲ್‍ನಿಂದ ವಾಹನ ಖರೀದಿ ದುಬಾರಿಯಾಗುವುದು ಖಚಿತ. ಹೀಗಾಗಿ, ವಾಹನ ಖರೀದಿ ಯೋಚನೆ ಇರುವವರು ಈಗಲೇ ನಿರ್ಧಾರ ಕೈಗೊಳ್ಳುವುದೇ ಒಳಿತು ಎನ್ನುತ್ತಾರೆ ತಜ್ಞರು.

 

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುದ್ಧ ಆರಂಭವಾಗಿದೆ, ರಣರಂಗದಲ್ಲಿ ಗೆಲುವು ನಮ್ಮದೇ : ಬಿ.ವೈ.ವಿಜಯೇಂದ್ರಭಾರತದ್ದು ಆಕ್ರಮಣದ ಇತಿಹಾಸವಲ್ಲ, ಜ್ಞಾನ ಹಂಚಿದ ಪರಂಪರೆ: ಮೋಹನ್ ಭಾಗವತ್ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವಕ್ಕೆ ಶ್ರೀಗಳಿಂದ ಅದ್ದೂರಿ ಚಾಲನೆದಿಢೀರ್ ದೆಹಲಿಗೆ ತೆರಳಿದ ನಾಗೇಂದ್ರ; ಹೈಕಮಾಂಡ್ ಅಂಗಳದಲ್ಲಿ ರಾಜೀನಾಮೆ ಭವಿಷ್ಯ!ಹಂಪಿ ಬಳಿ ಐದು ದಶಕಗಳ ಬಳಿಕ ಹುಲಿ ಪ್ರತ್ಯಕ್ಷ!43.80 ಲಕ್ಷ ಮತದಾರರಿಗೆ ಶೀಘ್ರದಲ್ಲೇ ಚುನಾವಣಾ ಆಯೋಗದ ನೋಟಿಸ್! ಅರ್ಧದಷ್ಟು ಭರ್ತಿಯಾದ ತುಂಗಭದ್ರಾ ಜಲಾಶಯ! 1 ಲಕ್ಷ ಕ್ಯುಸೆಕ್‌ಗೂ ಅಧಿಕ ಒಳಹರಿವುತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!