LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
National News

ಐಪಿಎಲ್ 2025: ಆರ್‌ಸಿಬಿಯ ಪ್ರಶಸ್ತಿಯ ಕನಸು ನನಸಾಗುವುದೇ?

ಬೆಂಗಳೂರು : ಅಹಮದಾಬಾದಿನಲ್ಲಿ ಐಪಿಎಲ್‌ನ 18ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹೈ ವೊಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. 18 ವರ್ಷಗಳಿಂದ ಚೊಚ್ಚಲ ಪ್ರಶಸ್ತಿಗಾಗಿ ಕಾಯುತ್ತಿರುವ ಸೋಲಿಸಿ ಆರ್‌ಸಿಬಿ ಗೆ ಕಪ್ ಬರ ನೀಗುವುದೇ.. ತಮ್ಮ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ವಿರಾಟ್ ಕೊಹ್ಲಿಯ ಸುಮಾರು ಎರಡು ದಶಕಗಳ ಸುಧೀರ್ಘ ಕಾಯುವಿಕೆಗೆ ಮುಕ್ತಿ ಸಿಗಲಿ ಎಂಬುದು ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳ ನಿರೀಕ್ಷೆ, ಕನಸು ಹಾಗೂ ಹಾರೈಕೆಯಾಗಿದೆ.
ಮುಲ್ಲನ್‌ಪುರದಲ್ಲಿ ಗುರುವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 8 ವಿಕೆಟ್‌ಗಳ ಅಂತರದಿAದ ಜಯ ಸಾಧಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2025ರ ಆವೃತ್ತಿಯ ಐಪಿಎಲ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದೆ. ದೀರ್ಘಕಾಲದಿಂದ ಕಾಯುತ್ತಿದ್ದ ಪ್ರಶಸ್ತಿಯನ್ನು ಎತ್ತಿಹಿಡಿಯುವ ಅದಮ್ಯ ವಿಶ್ವಾಸದಲ್ಲಿದೆ.
ಈ ಗೆಲುವಿನ ಮೂಲಕ ಆರ್‌ಸಿಬಿ ತಂಡವು 4ನೇ ಬಾರಿ ಐಪಿಎಲ್ ಟಿ20 ಟೂರ್ನಿಯಲ್ಲಿ ಫೈನಲ್ ಗೆ ಪ್ರವೇಶಿಸಿದೆ. ಈ ಹಿಂದೆ 2009, 2011 ಹಾಗೂ 2016ರಲ್ಲಿ ಫೈನಲ್ ಗೆ ತಲುಪಿದ್ದಾಗ ರನ್ನರ್ಸ್ ಅಪ್ ಗೆ ತೃಪ್ತಿಪಟ್ಟುಕೊಂಡಿತ್ತು. ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಪ್ರದರ್ಶನ ಹಾಗೂ ರಜತ್ ಪಾಟಿದಾರ್ ಅವರ ದಕ್ಷ ನಾಯಕತ್ವದ ಬಲದಿಂದ ಆರ್‌ಸಿಬಿ ಟೂರ್ನಿಯಲ್ಲಿ ಈ ತನಕ ಅಮೋಘ ಪ್ರದರ್ಶನ ನೀಡಿದೆ. ಫೈನಲ್ ಪಂದ್ಯಕ್ಕಿAತ ಮೊದಲಿನ ಸಾಕಷ್ಟು ವಿರಾಮವು ಆರ್‌ಸಿಬಿಗೆ ರಣತಂತ್ರವನ್ನು ಹೆಣೆದು, ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಎಲ್ಲ ತಯಾರಿಗೆ ಪೂರಕವಾಗಿದೆ.
ಟ್ರೆಂಡ್ ಆರ್‌ಸಿಬಿ ಪರ:
ಐಪಿಎಲ್ ನ ಪ್ರಸಕ್ತ ಪ್ಲೇ ಆಫ್ ಮಾದರಿಯನ್ನು 2011ರಲ್ಲಿ ಪರಿಚಯಿಸಲಾಗಿದೆ. ಲೀಗ್ ಹಂತದ ನಂತರ ಅಗ್ರ-2ರಲ್ಲಿ ಸ್ಥಾನ ಪಡೆಯುವ ತಂಡಗಳು ಫೈನಲ್ ಗೆ ತಲುಪಲು ಎರಡು ಅವಕಾಶ ಪಡೆಯುತ್ತವೆ. 2011ರ ನಂತರ 14 ಪ್ರಶಸ್ತಿಗಳ ಪೈಕಿ 11 ಪ್ರಶಸ್ತಿಗಳನ್ನು ಮೊದಲ ಕ್ವಾಲಿಫೈಯರ್ ನಲ್ಲಿ ಜಯ ಸಾಧಿಸಿ ನೇರವಾಗಿ ಫೈನಲ್ ಗೆ ಪ್ರವೇಶಿಸಿರುವ ತಂಡಗಳೇ ಗೆದ್ದಿವೆ. ಈ ಐತಿಹಾಸಿಕ ಟ್ರೆಂಡ್ ಆರ್‌ಸಿಬಿ ತಂಡದ ಪರವಾಗಿದೆ. 2018ರಿಂದ 2024ರ ತನಕ ಎಲ್ಲ 7 ಚಾಂಪಿಯನ್ಸ್ಗಳಾದ ಸಿಎಸ್‌ಕೆ(2018, 2021, 2023), ಮುಂಬೈ ಇಂಡಿಯನ್ಸ್(2019,2020), ಗುಜರಾತ್ ಟೈಟಾನ್ಸ್(2022) ಹಾಗೂ ಕೋಲ್ಕತಾ ನೈಟ್ ರೈಡರ್ಸ್(2024)ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಜಯ ಸಾಧಿಸಿದ್ದವು. ಈ ಟ್ರೆಂಡ್ ಜೂನ್ 3ರಂದು ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವನ್ನಾಗಿಸಿದೆ.
ತAಡವಾಗಿ ಆರ್‌ಸಿಬಿ ಮಿಂಚಿAಗ್:
ಕೊಹ್ಲಿಯು ಪ್ರತಿ ವರ್ಷದಂತೆ ಈ ವರ್ಷವೂ 614 ರನ್ ಗಳಿಸಿದ್ದಾರೆ. ಆದರೆ ಈ ಬಾರಿ ತಂಡ ಇವರನ್ನೇ ನೆಚ್ಚಿಕೊಂಡಿಲ್ಲ. ಸಮತೂಕದ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಯನ್ನು ಹೊಂದಿದೆ. ಈ ಬಾರಿ ಕೊಹ್ಲಿ ಬ್ಯಾಟಿಂಗ್ ಮಾತ್ರ ಗಮನ ಹರಿಸಲಿಲ್ಲ. ಆರ್ ಸಿಬಿಯನ್ನು ಒಂದು ಉತ್ತಮ ತಂಡವಾಗಿ ಕಟ್ಟುವಲ್ಲಿ ಶ್ರಮಿಸಿದ್ದಾರೆ. ಫಿಲ್ ಸಾಲ್ಟ್ ಭಾರತದ ನೆಲಕ್ಕೆ ಹೊಂದಿಕೊಳ್ಳುವ ಮೂಲಕ ಆರ್ ಸಿಬಿ ಪಡೆಯ ಪ್ರಮುಖ ಬ್ಯಾಟರ್ ಆಗಿದ್ದರೆ, ಮಯಾಂಕ್ ಅಗರ್ ವಾಲ್, ನಾಯಕ ರಜತ್ ಪಾಟಿದಾರ್ ಮತ್ತು ಜಿತೇಶ್ ಶರ್ಮಾ, ನಂಬಿಕೆಯುಳ್ಳ ಬ್ಯಾಟ್ಸ್ ಮನ್ ಆಗಿ ಅಭಿಮಾನಿಗಳ ಮನಗೆದ್ದಿದ್ದಾರೆ.
ಬ್ಯಾಟಿಂಗ್ ನಲ್ಲಿ ಕೊಹ್ಲಿಯಂತೆ ಜೋಶ್ ಹ್ಯಾಜಲ್ ವುಡ್ ಬೌಲಿಂಗ್ ನಲ್ಲಿ 21 ವಿಕೆಟ್ ಕಬಳಿಸುವ ಮೂಲಕ ಪರಾಕ್ರಮ ಮೆರೆದಿದ್ದಾರೆ. ಅಲ್ಲದೇ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಬೌಲರ್ ಆಗಿದ್ದಾರೆ. ಇವರು ಆಡಿರುವ ಫೈನಲ್ ನಲ್ಲಿ ಯಾವುದೇ ಪಂದ್ಯವೂ ಸೋತಿಲ್ಲ ಎಂಬುದು ಆರ್ ಸಿಬಿ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಮುಲ್ಲಾನಾಪುರದಲ್ಲಿ ನಡೆದ ಕ್ವಾಲಿಫೈಯರ್-1ರಲ್ಲಿ ಪಂಜಾಬ್ ಕಿಂಗ್ಸ್ ನ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಪಡೆಯುವ ಮೂಲಕ ಸುಲಭವಾಗಿ ಆರ್ ಸಿಬಿ ಫೈನಲ್ ಗೆ ಲಗ್ಗೆ ಇಡುವಲ್ಲಿ ಹ್ಯಾಜಲ್ ವುಡ್ ಪ್ರಮುಖ ಪಾತ್ರ ವಹಿಸಿದ್ದರು.
ಕಳೆದ ಎರಡು ಪಂದ್ಯಗಳಿAದ ಹೊರಗೆ ಉಳಿದಿದ್ದ ಟಿಮ್ ಡೇವಿಡ್ ಫಿಟ್ ಆಗ್ತಾರಾ ಎಂಬುದು ಇನ್ನೂ ತಿಳಿದುಬಂದಿಲ್ಲ. ಡೇವಿಡ್ ಅವರ ಫಿಟ್‌ನೆಸ್ ಕುರಿತು ತಂಡದ ಮ್ಯಾನೇಜ್‌ಮೆಂಟ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಅವರು ಸಂಪೂರ್ಣ ಗುಣಮುಖರಾಗಿ ತಂಡಕ್ಕೆ ಸೇರಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಟಿಮ್ ಡೇವಿಡ್ ಅವರ ಉಪಸ್ಥಿತಿ ತಂಡಕ್ಕೆ ಮತ್ತಷ್ಟು ಬಲ ನೀಡಲಿದೆ. ಆದರೆ ಮೂಲಗಳ ಪ್ರಕಾರ ನಾಳೆ ಅವರು ಆಡೋದು ಡೌಟ್ ಅಂತ ಹೇಳಲಾಗ್ತಿದೆ. ಆಲ್ ರೌಂಡರ್ ರೊಮಾರಿಯೊ ಶೆಫರ್ಡ್ ಆರ್ ಸಿಬಿಯ ಉತ್ತಮ ಆಲ್ ರೌಂಡರ್ ಆಗಿದ್ದಾರೆ.
ಪಂಜಾಬ್ ಕಿಂಗ್ಸ್ಗೆ ಶ್ರೇಯಸ್ ಬಲ:
ಕೋಚ್ ರಿಕಿ ಪಾಟಿಂಗ್ ಹಾಗೂ ಶ್ರೇಯಸ್ ಅಯ್ಯರ್ ನಾಯಕರಾಗಿರುವ ಪಂಜಾಬ್ ಕಿಂಗ್ಸ್ 10 ತಂಡಗಳ ಪಾಯಿಂಟ್ ಟೇಬಲ್ಸ್ ನಲ್ಲಿ ಎರಡನೇ ತಂಡವಾಗಿ ಹೊರಹೊಮ್ಮಿದೆ. ಶ್ರೇಯಸ್ ಅಯ್ಯರ್ 603 ರನ್ ಗಳಿಸುವುದರೊಂದಿಗೆ ಅವರ ತಂಡವನ್ನು ಫೈನಲ್ ಗೆ ತಂದಿದ್ದಾರೆ.
ಕಳೆದ ಬಾರಿ ಅವರೇ ನಾಯಕರಾಗಿದ್ದ ಕೆಕೆಆರ್ ಟ್ರೋಫಿ ಗೆದ್ದಿತ್ತು .18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮೂರು ಬೇರೆ ಬೇರೆ ತಂಡಗಳ ನಾಯಕರಾಗಿದ್ದು, ಫೈನಲ್ ಗೆ ತಂದ ಹೆಸರು ಶ್ರೇಯಸ್ ಅವರಿಗೆ ಮಾತ್ರ ಇದೆ. ದೆಹಲಿ ನಾಯಕರಾಗಿದ್ದಾಗಲೂ ಆ ತಂಡ ಫೈನಲ್ ಪ್ರವೇಶಿಸಿತ್ತು. ಈ ಬಾರಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ ಗೆ ತರುವ ಮೂಲಕ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ.
ಪ್ರಭುಸಿಮ್ರಾನ್ ಸಿಂಗ್, ಜೋಶ್ ಇಂಗ್ಲಿಸ್, ಪ್ರಿಯಾಂಶ್ ಆರ್ಯ ಮತ್ತು ಶಶಾಂಕ್ ಸಿಂಗ್, ಶ್ರೇಯಸ್ ಅವರಂತಹ ಅತ್ಯುತ್ತಮ ಬ್ಯಾಟರ್ ಗಳನ್ನು ಹೊಂದಿರುವ ಪಂಜಾಬ್ ಕಿಂಗ್ಸ್, ವಿರೋಧಿ ತಂಡದ ಮೇಲೆ ಆಕ್ರಮಣಕಾರಿ ದಾಳಿ ನಡೆಸಬಲ್ಲಾ ತಂಡವಾಗಿದೆ.
ಇನ್ನೂ ಬೌಲಿಂಗ್ ನಲ್ಲಿ ಮಾರ್ಕಸ್ ಜಾನ್ಸೆನ್ ಇಲ್ಲದೆ, ಸ್ವಲ್ಪ ಸೊರಗಿದಂತೆ ಕಂಡರೂ ಮುಂಬೈ ಇಂಡಿಯನ್ಸ್ ಸೋಲಿಸುವ ಮೂಲಕ ತಂಡದ ಬೌಲಿಂಗ್ ಉತ್ತಮವಾಗಿರುವುದಾಗಿ ತೋರಿಸಿದೆ. ಇನ್ನು ಆರ್ ಸಿಬಿಯ ಮಾಜಿ ಬೌಲರ್ ಯುಜ್ವೇಂದ್ರ ಚಾಹಲ್ ಪಂಜಾಬ್ ಪರ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಆಗಿದ್ದಾರೆ.

ಆರ್‌ಸಿಬಿ ತಂಡ :
ರಜತ್ ಪಾಟಿದಾರ್ (ನಾಯಕ) ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ, ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮನೋಜ್ ಭಾಂಡಗೆ, ಜೇಕಬ್ ಬೆಥೆಲ್, ಜೋಶ್ ಹ್ಯಾಜಲ್‌ವುಡ್, ರಸಿಖ್ ಶರ್ಮಾ ದರ್, ಭುವನೇಶ್ವರ್ ಸಲಾಮ್ ದಾರ್, ಸುಯಶ್ಶ್ವರ್ ಸಲಾಮ್ ದರ್, ಹೀಗೆ. ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ, ಯಶ್ ದಯಾಳ್.

ಪಂಜಾಬ್ ಕಿಂಗ್ಸ್ ತಂಡ:
ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ವಿಷ್ಣು ವಿನೋದ್ , ಜೋಶ್ ಇಂಗ್ಲಿಸ್, ಹರ್ನೂರ್ ಪನ್ನು, ಪೈಲಾ ಅವಿನಾಶ್, ಪ್ರಭಾಸಿಮ್ರಾನ್ ಸಿಂಗ್, ಶಶಾಂಕ್ ಸಿಂಗ್, ಸ್ಟೊಯಿನಿಸ್, ಹಪ್ರೀðತ್ ಬ್ರಾರ್, ಅಜ್ಮತುಲ್ಲಾ ಒಮರ್ಜೈ, ಪ್ರಿಯಾನ್ಶ್ ಖಾನೇಶ್, ಮುಹರ್ಶೇ, ಪ್ರಿಯಾನ್ಶ್ ಅರ್ಜೆ, ಎ. ಮಿಚ್ ಓವನ್, ಅರ್ಶ್ದೀಪ್ ಸಿಂಗ್, ಚಹಾಲ್, ವೈಶಾಕ್ ವಿಜಯ್‌ಕುಮಾರ್, ಯಶ್ ಠಾಕೂರ್, ಕುಲದೀಪ್ ಸೇನ್, ಕ್ಸೇವಿಯರ್ ಬಾರ್ಟ್ಲೆಟ್, ಪ್ರವೀಣ್ ದುಬೆ, ಕೈಲ್ ಜೇಮಿಸನ್.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ