ನವದೆಹಲಿ: ಪಂಜಾಬ್‍ನ ಲುಧಿಯಾನದಲ್ಲಿ ಕಳೆದ ಐದು ದಿನಗಳ ಹಿಂದೆ ಗನ್ ಪಾಯಿಂಟ್‍ನಲ್ಲಿ ಅಪಹರಣಕ್ಕೊಳಗಾಗಿದ್ದ ಪ್ರಖ್ಯಾತ 23 ವರ್ಷದ ಪಂಜಾಬಿ ಗಾಯಕಿ ಯಶಿಂದರ್ ಕೌರ್ (ಇಂದರ್ ಕೌರ್) ಅವರ ಶವ ನದಿಯಲ್ಲಿ ಪತ್ತೆಯಾಗಿದೆ.
ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಆಕೆಯ ಮಾಜಿ ಪ್ರೇಮಿ ಕೆನಡಾದಿಂದ ರಹಸ್ಯವಾಗಿ ಭಾರತಕ್ಕೆ ಬಂದು, ಆಕೆಯನ್ನು ಕಾರಿನಲ್ಲೇ ಕೊಲೆ ಮಾಡಿ ಶವವನ್ನು ನಾಲೆಯೊಂದಕ್ಕೆ ಎಸೆದು ಪರಾರಿಯಾಗಿರುವ ಕೃತ್ಯ ಬೆಳಕಿಗೆ ಬಂದಿದೆ.
ಕೆನಡಾದಿಂದ ನೇಪಾಳ ಮಾರ್ಗವಾಗಿ ಬಂದಿದ್ದ ಹಂತಕ:
ಕುಬಾ ಗ್ರಾಮದ ಸಮೀಪವಿರುವ ನೀಲೋನ್ ನಾಲೆಯಲ್ಲಿ ಗಾಯಕಿಯ ಮೃತದೇಹ ಪತ್ತೆಯಾಗಿದ್ದು, ಇಡೀ ಪಂಜಾಬ್ ಚಿತ್ರರಂಗ ಹಾಗೂ ಸಾರ್ವಜನಿಕ ವಲಯವನ್ನು ಈ ಘಟನೆ ಬೆಚ್ಚಿಬೀಳಿಸಿದೆ. ಜಮಾಲ್‍ಪುರ ಪೆÇಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ದಲ್ವೀರ್ ಸಿಂಗ್ ನೀಡಿರುವ ಮಾಹಿತಿಯ ಪ್ರಕಾರ, ಕೊಲೆ ಆರೋಪಿ ಸುಖ್ವಿಂದರ್ ಸಿಂಗ್ ಅಲಿಯಾಸ್ ಸುಖಾ ಪ್ರಸ್ತುತ ಕೆನಡಾದಲ್ಲಿ ವಾಸಿಸುತ್ತಿದ್ದ. ಈತ ಯಶಿಂದರ್ ಕೌರ್ ಅವರನ್ನು ಮದುವೆಯಾಗಲು ಬಯಸಿದ್ದ, ಆದರೆ ಯಶಿಂದರ್ ನಿರಾಕರಿಸಿದ್ದರು. ಇದೇ ದ್ವೇಷದಲ್ಲಿ ಸುಖ್ವಿಂದರ್ ಏಪ್ರಿಲ್ 29ರಂದು ನೇಪಾಳದ ಕಠ್ಮಂಡು ಮಾರ್ಗವಾಗಿ ರಹಸ್ಯವಾಗಿ ಭಾರತಕ್ಕೆ ಬಂದಿದ್ದ. ಗಾಯಕಿಯನ್ನು ಕಿಡ್ನಾಪ್ ಮಾಡಿ ಹತ್ಯೆ ಮಾಡಿದ ಅದೇ ದಿನ, ಅಂದರೆ ಮೇ 13ರಂದು ಮತ್ತೆ ಅದೇ ನೇಪಾಳ ಮಾರ್ಗವಾಗಿ ಕೆನಡಾಗೆ ಪರಾರಿಯಾಗಿದ್ದಾನೆ ಎಂದಿದ್ದಾರೆ.
ತರಕಾರಿ ತರಲು ಹೋಗಿ ಹೆಣವಾದಳು
ಮೇ 13ರ ರಾತ್ರಿ ಸುಮಾರು 8:30ರ ಸುಮಾರಿಗೆ ಯಶಿಂದರ್ ಕೌರ್ ಅವರು ತಮ್ಮ ಫೆÇೀರ್ಡ್ ಫಿಗೋ ಕಾರಿನಲ್ಲಿ ದಿನಸಿ ಮತ್ತು ತರಕಾರಿ ತರಲು ಮನೆಯಿಂದ ಹೊರಗಡೆ ಹೋಗಿದ್ದರು. ಆದರೆ ತಡರಾತ್ರಿಯಾದರೂ ಅವರು ಮನೆಗೆ ಮರಳದಿದ್ದಾಗ ಕುಟುಂಬಸ್ಥರು ಫೆÇೀನ್ ಮಾಡಲು ಯತ್ನಿಸಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕುಟುಂಬಸ್ಥರು ಹುಡುಕಾಟ ನಡೆಸಿದಾಗ, ಮುಂಡಿಯನ್ ಕಲನ್ ಪ್ರದೇಶದ ಜಿಟಿಬಿ ನಗರದಲ್ಲಿ ಆರೋಪಿ ಸುಖ್ವಿಂದರ್ ಮತ್ತು ಆತನ ಸಹಚರರು ಗಾಯಕಿ ಯಶಿಂದರ್ ಅವರನ್ನು ಗನ್ ಪಾಯಿಂಟ್‍ನಲ್ಲಿ ಅಪಹರಿಸಿರುವುದು ಸಿಸಿಟಿವಿ ಮತ್ತು ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ.