LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News

ಕ್ರೂಸರ್ ಪಲ್ಟಿ: ಬಳ್ಳಾರಿಯ ಯುವಕ ಸೇರಿದಂತೆ ನಾಲ್ವರ ಸಾವು

ರಾಯಚೂರು: ಸಿಂಧನೂರು–ರಾಯಚೂರು ಮುಖ್ಯ ರಸ್ಥೆಯಲ್ಲಿ ವೈಷ್ಣವಿದೇವಿ ದೇವಸ್ಥಾನದ ಸಮೀಪ ಮಂಗಳವಾರ ರಾತ್ರಿ ಕ್ರೂಸರ್ ಪಲ್ಪಿಯಾಗಿ ಚಾಲಕ ಹಾಗೂ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳಾದ ಸುಜಯೇಂದ್ರ ಕೃಷ್ಣಮೂರ್ತಿ(22), ಬಳ್ಳಾರಿಯ ಹಯವದನ ಪ್ರಹ್ಲಾದಚಾರಿ(18), ಕೊಪ್ಪಳದ ಅಭಿಲಾಷ ಅಶ್ವತ್ ಓಲಿ (20) ಹಾಗೂ ಚಾಲಕ ಕಂಸಾಲಿಶಿವಾ ಸೋಮಣ್ಣ(20) ಮೃತಪಟ್ಟಿದ್ದಾರೆ.

ಬಳ್ಳಾರಿಯ ಶ್ರೀಹರಿ ರಾಘವೇಂದ್ರ, ಗಂಗಾವತಿಯ ವಿಜಯೇಂದ್ರ ಸುಶಿಲೇಂದ್ರ, ತಾಳಿಕೋಟೆಯ ಭರತ ರವಿ ಜೋಷಿ, ದೇವದುರ್ಗ ತಾಲ್ಲೂಕಿನ ಗಬ್ಬೂರಿನ ರಾಘವೇಂದ್ರ ರಾಜೇಂದ್ರರಾವ್, ಯಾದಗಿರಿಯ ತನಿಶ್ ಉಲ್ಲಾಸ, ಕುಷ್ಟಗಿಯ ಶ್ರೀಕರ ರಾಘವೇಂಧ್ರ ಆಚಾರಿ, ನಾರಾಯಣಪೇಟೆಯ ವಾಸುದೇವ ಮಂಜುನಾಥ, ರಾಘವೇಂದ್ರ ಸುಧೀಂದ್ರ, ತಿರುಪತಿಯ ಬಸಂತ ಜಗಧೀಶ ಶರ್ಮಾ, ಬಳ್ಳಾರಿಯ ಜಯಸಿಂಹ ರಾಘವೇಂದ್ರ ಗಾಯಗೊಂಡಿದ್ದಾರೆ.ಕೊಪ್ಪಳ ಜಿಲ್ಲೆಯ ಆನೆಗುಂದಿ ಸಮೀಪದ ನರಹತಿ ತೀರ್ಥರ ಮೂರು ದಿನಗಳ ಆರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾತ್ರಿ ಮಂತ್ರಾಲಯದಿAದ ನಾಲ್ಕು ಕ್ರೂಸರ್‌ಗಳಲ್ಲಿ ಹೊರಟಿದ್ದರು. ವೇಗವಾಗಿ ಚಲಿಸುತ್ತಿದ್ದ ಕ್ರೂಸರ್ ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡವರಿಗೆ ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ