LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Entertainment News

ಐ ಸ್ಟಾಂಡ್ ವಿಥ್ ದರ್ಶನ ಸರ್ : ನಟ ದ್ರುವ ಸರ್ಜಾ !

ಸ್ಯಾಂಡಲ್ ವುಡ್ ಹೊಸ ಬದಲಾವಣೆಗೆ ಸಾಕ್ಷಿಯಾಗಿದೆ. ಇಬ್ಬರು ಸ್ಟಾರ್ ನಟರ ನಡುವಿನ ವೈಮನಸ್ಸು ಶಮನ ಆಗಿರುವ ಸೂಚನೆ ಕಂಡುಬಂದಿದೆ. I stand with Darshan sir ಎಂದು ಹೇಳುವ ಮೂಲಕ ದರ್ಶನ್ ಬೆಂಬಲಕ್ಕೆ ಧ್ರುವ ಸರ್ಜಾ (Dhruva Sarja) ನಿಂತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತೆ ದರ್ಶನ್, ಧ್ರುವ ಒಂದಾಗುವ ಘಾಟು ಬಂದಿದೆ.

ತಮ್ಮದೇ ಬಣದಲ್ಲಿ ಗುರುತಿಸಿಕೊಂಡಿದ್ದ ಪ್ರಥಮ್ ವಿರುದ್ಧವೇ ಧ್ರುವ ಮಾತನಾಡಿದ್ದಾರೆ. ಈ ಮೂಲಕ‌ ದರ್ಶನ್ ಪರ ಧ್ರುವ ಸರ್ಜಾ ಬ್ಯಾಟಿಂಗ್ ಮಾಡಿದ್ದಾರೆ. ದರ್ಶನ್ ಫ್ಯಾನ್ಸ್ ಎನ್ನಲಾದ ವ್ಯಕ್ತಿಗಳಿಂದ ಜೀವಬೆದರಿಕೆ ಇದೆ ಎಂದು ದೂರು ದಾಖಲಿಸಿರುವ ಪ್ರಥಮ್ ದರ್ಶನ್ ವಿರುದ್ಧ ಹರಿಹಾಯ್ದಿದ್ದರು. ಇದೀಗ ಪ್ರಥಮ್ ಹೇಳಿಕೆ ತಪ್ಪೆಂದು ಖಡಕ್ಕಾಗಿ ಹೇಳಿದ್ದಾರೆ ಧ್ರುವ ಸರ್ಜಾ.

Dhruva Sarja has 'couple of questions' for Darshan: I cannot pretend -  India Today

ಈ ಮೊದಲು ಆಪ್ತರಾಗಿದ್ದ ದರ್ಶನ್, ಧ್ರುವ ನಡುವೆ ವೈಯಕ್ತಿಕ ವಿಚಾರಕ್ಕೆ ಮುನಿಸು ಉಂಟಾಗಿತ್ತು. ಈ ವಿಚಾರ ಅಧಿಕೃತವಾಗಿ ಗೋಚರಿಸಿತ್ತು. ಇದೇ ದರ್ಶನ್ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದಾಗ ಧ್ರುವ ಕಟುವಾಗಿ ಮಾತನಾಡಿದ್ದರು. ಅದಕ್ಕೂ‌ ಮುನ್ನವೇ ದರ್ಶನ್ ವಿಚಾರವಾಗಿ ತಮ್ಮದೇ ಹುಟ್ಟುಹಬ್ಬದ ದಿನ‌ ನೇರವಾಗೇ ಆಕ್ರೋಶ ಹೊರಹಾಕಿದ್ದರು ಧ್ರುವ. ಇದೀಗ ದಿಢೀರ್ ಬದಲಾವಣೆ ಎನ್ನುವಂತೆ ಧ್ರುವ I stand with Darshan sir ಎಂದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಅಸಲಿಗೆ ಹಿಂದೆ ಈ ಇಬ್ಬರು ಸ್ಟಾರ್ ನಟರ ನಡುವಿನ ಮುನಿಸು ಕಾವೇರಿ ನೀರಿಗಾಗಿ ಹೋರಾಟದ ವೇದಿಕೆಯಲ್ಲಿ ಜಗಜ್ಜಾಹೀರಾಗಿತ್ತು, ಬಳಿಕ ಅದೇ ನಿಜವಾಗಿತ್ತು. ಇದೀಗ ದರ್ಶನ್ ಫ್ಯಾನ್ಸ್ ವಿರುದ್ಧದ ಹೋರಾಟದಲ್ಲಿ ಧ್ರುವ ಸರ್ಜಾ ಮಾತು ಸಾಫ್ಟ್ ಕಾರ್ನರ್ ಆಗಿದ್ದು ಇದು ಬೇರೆಯದ್ದೇ ಅರ್ಥ ಕಲ್ಪಿಸುತ್ತಿದೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ