LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News

ಬಳ್ಳಾರಿ ನಗರದ ಪ್ರಮುಖ ಸರ್ಕಲ್‍ಗಳಲ್ಲಿ `ಗ್ರೀನ್‍ಮ್ಯಾಟ್’ ಅಳವಡಿಕೆ

ಬಳ್ಳಾರಿ : ಬಿಸಿಲಿನ ಪ್ರಖರತೆಗೆ ಪ್ರಖ್ಯಾತಿ ಪಡೆದಿರುವ `ಬಿಸಿಲ ನಾಡು’ ಬಳ್ಳಾರಿಯಲ್ಲಿ ಈಗಾಗಲೇ ಬೇಸಿಗೆಯ ಕಾಲ ಆರಂಭವಾಗಿದ್ದು, ಬಿಸಿಲಿನ ಝಳಕ್ಕೆ ಸಾರ್ವಜನಿಕರು ತತ್ತರಿಸಿದ್ದಾರೆ. ಈಗಾಗಲೇ ತಾಪಮಾನವು 38 ಡಿಗ್ರಿಗಳಿಗೆ ತಲುಪಿರುವುದರಿಂದ ಮುಂಬರುವ ಬಿರು ಬೇಸಿಗೆಯ ದಿನಗಳಲ್ಲಿ 42 ಡಿಗ್ರಿಗಳಿಗೂ ಅಧಿಕ ಉಷ್ಣಾಂಶ ಇರುವುದರಿಂದ, ಬಿಸಿಲಿನಲ್ಲಿ ಪ್ರಯಾಣಿಸುವ ವಾಹನಗಳ ಸವಾರರಿಗೆ ತಾತ್ಕಾಲಿಕವಾಗಿಯಾದರೂ, ಕೊಂಚಮಟ್ಟಿಗಾದರೂ `ರಿಲೀಫ್’ ಸಿಕ್ಕಲಿ ಎಂದು ನಗರಪಾಲಿಕೆ ಅಧಿಕಾರಿಗಳು ತಾತ್ಕಾಲಿಕವಾಗಿ `ಗ್ರೀನ್ ಮ್ಯಾಟ್’ ಹಾಕುವ ಮೂಲಕ, ನೆರವಾಗಲಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ, ಜನ ನಿಬಿಡ ಪ್ರದೇಶಗಳಲ್ಲಿನ `ಸಿಗ್ನಲ್ ಲೈಟ್’ಗಳು ಇರುವ ಸರ್ಕಲ್‍ಗಳಲ್ಲಿ, `ಗ್ರೀನ್ ಮ್ಯಾಟ್’ ಅಳವಡಿಸಲು ಪಾಲಿಕೆ ನಿರ್ಧರಿಸಿದೆ. ನಗರದ ಪ್ರಮುಖ ಮತ್ತು ಜನ ನಿಬಿಡ ವೃತ್ತಗಳಲ್ಲಿ ಒಂದಾಗಿರುವ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಬಳಿಯಲ್ಲಿ, ಬಿರು ಬಿಸಿಲಿನಿಂದ ಜನರನ್ನು ರಕ್ಷಿಸಲು `ಗ್ರೀನ್ ಮ್ಯಾಟ್’ ಅನ್ನು ಹಾಕಲಾಗಿದೆ.
ಟ್ರಾಫಿಕ್ ಸಿಗ್ನಲ್ ಲೈಟ್‍ಗಳಿಂದಾಗಿ, ರಸ್ತೆಯ ನಾಲ್ಕು ಬದಿಗಳಲ್ಲಿ ವಾಹನಗಳ ಸವಾರರು, ಪಾದಚಾರಿಗಳು `ಸಿಗ್ನಲ್’ಗಾಗಿ ಕಾಯುವ ಸಮಯದಲ್ಲಿ, ತೀವ್ರ ಬಿಸಿಲಿನ ಝಳದಿಂದ ಜನರಿಗೆ ತೊಂದರೆಯಾಗದಂತೆ, ಪ್ರಖರ ಬಿಸಿಲಿನ ಪ್ರತಾಪ ಕೊಂಚವಾದರೂ ಕಮ್ಮಿಯಾಗಲಿ ಎಂದು ಈ ಬಗೆಯ `ಗೀನ್ ಮ್ಯಾಟ್’ ಗಳನ್ನು ಅಳವಡಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.ಬಳ್ಳಾರಿ ನಗರದ ಕೆಲವೊಂದು ಪ್ರಮುಖ ಸರ್ಕಲ್‍ಗಳಲ್ಲಿ `ಗ್ರೀನ್ ಮ್ಯಾಟ್’ಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳಲಾಗಿದೆ. ಗ್ರೀನ್ ಮ್ಯಾಟ್‍ಗಳ ಅಳವಡಿಕೆಗೆ ಲಕ್ಷಾಂತರ ರೂ.ಗಳ ವೆಚ್ಚವಾಗುವುದರಿಂದ, ಪಾಲಿಕೆಯ ಅಧಿಕಾರಿಗಳು ಸಂಘ-ಸಂಸ್ಥೆಗಳ ನೆರವು ಹಾಗೂ ಕೆಲವು ದಾನಿಗಳ ನೆರವು ಪಡೆಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿz

 

 

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ