LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
National News

ಸ್ವದೇಶಿ ನಿರ್ಮಿತ ಧ್ರುವ ಹೆಲಿಕಾಪ್ಟರ್ ಉದ್ಘಾಟನಾ ಹಾರಾಟ ಯಶಸ್ವಿ

ಬೆಂಗಳೂರು: ಧ್ರುವ-ಎನ್‍ಜಿ ಕೇವಲ ಒಂದು ಯಂತ್ರವಲ್ಲ, ಆದರೆ ಆತ್ಮನಿರ್ಭರ ಭಾರತಕ್ಕೆ ಭಾರತದ ಸಾಮಥ್ರ್ಯ, ವಿಶ್ವಾಸ ಮತ್ತು ಬದ್ಧತೆಯ ಸಂಕೇತವಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
ಬೆಂಗಳೂರಿನ ಎಚ್.ಎ.ಎಲ್‍ನಲ್ಲಿ ಮುಂದಿನ ತಲೆಮಾರಿನ ಧೃವ್ - ಎನ್ ಜಿ ಹೆಲಿಕಾಪ್ಟರ್ ಹಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ನಾಗರಿಕ ವಿಮಾನಯಾನ ಸಚಿವನಾಗಿ ಇದು ನನಗೆ ವಿಶೇಷವಾಗಿ ಹೆಮ್ಮೆಯ ಕ್ಷಣವಾಗಿದೆ. ಈ ಅಭಿವೃದ್ಧಿಯು ದೇಶೀಯ ಬಾಹ್ಯಾಕಾಶ ಉತ್ಪಾದನೆಯಲ್ಲಿ ಭಾರತದ ಬೆಳೆಯುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಎಂದು ಹೇಳಿದರು
2025ರ ಏರೋ ಇಂಡಿಯಾ ಪ್ರದರ್ಶನದಲ್ಲಿ ಎಚ್.ಎ.ಎಲ್ ಪ್ರದರ್ಶಿಸಿದ್ದ ಸ್ಥಳೀಯ ಹೆಲಿಕಾಪ್ಟರ್ ನ ನಾಗರಿಕ ಬಳಕೆಯ ಅಡ್ವಾನ್ಸ್ ಲೈಟ್ ಹೆಲಿಕಾಪ್ಟರ್ ಧೃವ್ ಎನ್ ಜಿಯ ಉದ್ಘಾಟನಾ ಹಾರಾಟ ನಡೆಸಿದರು. ಧೃವ್ ಎನ್ ಜಿ ಹೆಲಿಕಾಪ್ಟರ್ 5.5 ಟನ್ ತೂಕದ ಹಗುರವಾದ ಅವಳಿ ಎಂಜಿನ್ ಹೊಂದಿರುವ ಬಹು ಪಾತ್ರ ನಿರ್ವಹಣೆಯ ಹೆಲಿಕಾಪ್ಟರ್ ಆಗಿದ್ದು, ಭಾರತೀಯ ಭೂ ಪ್ರದೇಶದ ವೈವಿಧ್ಯಮಯ ಹವಾಮಾನ ಹಾಗೂ ಬೇಡಿಕೆಯ ಅವಶ್ಯಕತೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಜಾಗತಿಕ ನಾಗರಿಕ ವಿಮಾನಯಾನ ಮಾರುಕಟ್ಟೆಯ ಕಠಿಣ ಬೇಡಿಕೆಗಳನ್ನು ಪೂರೈಸಲು ನಿರ್ಧಿಷ್ಟವಾಗಿ ನವೀಕರಿಸಲಾಗಿದೆ.
ಶಕ್ತಿ ಎಂಜಿನ್‍ಗೆ ಪ್ರಮಾಣಪತ್ರ
ಇದೇ ವೇಳೆ ದೇಶಿಯವಾಗಿ ಎಚ್‍ಎಎಲ್‍ನಿಂದ ಉತ್ಪಾದಿಸಲಾಗುತ್ತಿರುವ ‘ಶಕ್ತಿ ಸಿವಿಲ್ ಎಂಜಿನ್’ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಪ್ರಮಾಣಪತ್ರ ವಿತರಿಸಲಾಯಿತು.
ದೇಶದಲ್ಲಿ ಉತ್ಪಾದನೆಯಾಗಿರುವ ಏರೋ ಎಂಜಿನ್‍ಗೆ ಇದೇ ಮೊದಲ ಬಾರಿಗೆ ಡಿಜಿಸಿಎದಿಂದ ಪ್ರಮಾಣಪತ್ರ ದೊರಕಿದೆ. ಈ ಮೂಲಕ ಹೆಲಿಕಾಪ್ಟರ್ ಎಂಜಿನ್ ನಿರ್ಮಾಣದಲ್ಲಿ ಪ್ರಮುಖವಾಗಿರುವ ತಂತ್ರಜ್ಞಾನ ಅಭಿವೃದ್ಧಿ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಭಾರತದ ಪಾಲಿಗಿದು ಮಹತ್ವದ ಹೆಜ್ಜೆಯಾಗಿದೆ. ಈ ಮಹತ್ವದ ಸಾಧನೆ ಸ್ಯಾಫ್ರನ್ ಎಂಜಿನ್ ಮತ್ತು ಡಿಜಿಸಿಎ ಜೊತೆಗಿನ ಸಹಕಾರದಿಂದ ಸಾಧ್ಯವಾಗಿದೆ ಎಂದು ಎಚ್‍ಎಎಲ್ ತಿಳಿಸಿದೆ.
ಧ್ರುವ ಎನ್‍ಜಿ ವಿಶೇಷ
ಭಾರತದ ಭೂಪ್ರದೇಶಕ್ಕೆ ಸೂಕ್ತವಾಗಿರುವ 5.5 ಟನ್ ಗಾತ್ರದ ಈ ಹೆಲಿಕಾಪ್ಟರ್ ಎರಡು ಲಘು ಎಂಜಿನ್ ಹೊಂದಿದೆ. ವಿಶ್ವದರ್ಜೆಯ ‘ಗ್ಲಾಸ್ ಕಾಕ್‍ಪಿಟ್’ ಮತ್ತು ಆಧುನಿಕ ಏವಿಯಾನಿಕ್ಸ್ ವ್ಯವಸ್ಥೆ ಸೇರಿ ಜಾಗತಿಕ ಗುಣಮಟ್ಟದ ತಂತ್ರಜ್ಞಾನಗಳನ್ನು ಹೊಂದಿದೆ. ವಿಐಪಿ ಪ್ರಯಾಣ ಮತ್ತು ವೈದ್ಯಕೀಯ ತುರ್ತು ಸಾರಿಗೆಗೆ ಅತ್ಯಂತ ಸೂಕ್ತವಾಗಿದೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ