LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
International News

ಮೆಕ್ಸಿಕೋ ಡ್ರಗ್ ದೊರೆ ಎಲ್ ಮೆಂಚೋ ಹತ್ಯೆ

ಮೆಕ್ಸಿಕೋ: ಮೆಕ್ಸಿಕೋದ ಡ್ರಗ್ ದೊರೆ ಎನಿಸಿಕೊಂಡಿದ್ದ ನೆಮೆಸಿಯೋ ಒಸೆಗ್ವೆರಾ ಅಲಿಯಾಸ್ ಎಲ್ ಮೆಂಚೋ (ಇಟ ಒeಟಿಛಿho) ಸೈನಿಕ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದಾಗಿ ಮೆಕ್ಸಿಕೋ ಮಾಧ್ಯಮಗಳು ವರದಿ ಮಾಡಿವೆ.
ಈ ಸುದ್ದಿಯ ಬೆನ್ನಲ್ಲೇ ಜಾಲಿಸ್ಕೋ ರಾಜ್ಯದ ಹಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮೆಕ್ಸಿಕೋದ ಅತಿ ಪ್ರಭಾವಿ ಡ್ರಗ್ ಕಾರ್ಟೆಲ್ ನಾಯಕನಾಗಿ ಗುರುತಿಸಿಕೊಂಡಿದ್ದ ನೆಮೆಸಿಯೋ ರುಬೇನ್ ಒಸೆಗ್ವೆರಾ ಸವಾರ್ಂಟೆಸ್ ಅಲಿಯಾಸ್ 'ಎಲ್ ಮೆಂಚೋ' ಮೃತಪಟ್ಟಿದ್ದಾರೆ.
ಸೈನಿಕ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಮೆಕ್ಸಿಕೋ ನಗರಕ್ಕೆ ವಾಯು ಮಾರ್ಗವಾಗಿ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪಶ್ಚಿಮ ಮೆಕ್ಸಿಕೋದ ಜಲಿಸ್ಕೋ ರಾಜ್ಯದಲ್ಲಿ ಸೈನಿಕ ದಾಳಿಯ ವೇಳೆ ಎಲ್ ಮೆಂಚೋ ಸಂಭವಿಸಿದ್ದರು. ಅವರು ನೇತೃತ್ವ ವಹಿಸಿದ್ದ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ (ಸಿಜೆಎನ್‍ಜಿ) ಇತ್ತೀಚೆಗೆ ಮೆಕ್ಸಿಕೋದ ಅತಿ ಬಲಿಷ್ಠ ಸಂಘಟಿತ ಅಪರಾಧ ಜಾಲವಾಗಿ ಬೆಳೆದಿತ್ತು.
ಅಮೆರಿಕಾಗೆ ಅಕ್ರಮ ಮದ್ದು ಸಾಗಾಣಿಕೆಯಲ್ಲಿ ಈ ಸಂಘಟನೆ ಪ್ರಮುಖ ಪಾತ್ರವಹಿಸಿತ್ತು. ಮೆಕ್ಸಿಕೋದ ರಾಜ್ಯಗಳಲ್ಲಿ ಹಿಂಸಾಚಾರ ಎಲ್ ಮೆಂಚೋ ಸಾವಿನ ಸುದ್ದಿ ಹೊರಬಿದ್ದ ತಕ್ಷಣ ಮೆಕ್ಸಿಕೋದ ರಾಜ್ಯಗಳಲ್ಲಿ ಹಿಂಸಾಚಾರ ಉಂಟಾಯಿತು. ಕಾರುಗಳಿಗೆ ಬೆಂಕಿ ಹಚ್ಚಿ, ಹೆದ್ದಾರಿಗಳನ್ನು ಶಸ್ತ್ರಸಜ್ಜಿತವಾಗಿ ಬಂದ್ ಮಾಡಿರುವ ಘಟನೆಗಳು ವರದಿಯಾಗಿವೆ. ಪ್ರಮುಖ ಪ್ರವಾಸಿ ನಗರವಾದ ಪೆÇೀರ್ಟೊ ವಲ್ಲರ್ಟಾದಲ್ಲಿ ದಟ್ಟ ಹೊಗೆ ಆವರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ರಾಜ್ಯ ರಾಜಧಾನಿ ಗ್ವಾಡಲಜರಾದಲ್ಲಿ ಸುಟ್ಟ ವಾಹನಗಳು ರಸ್ತೆ ತಡೆದಿರುವುದು ಕಂಡುಬಂದಿದೆ. ಭೀತಿಗೊಳಗಾದ ಜನರು ವಿಮಾನ ನಿಲ್ದಾಣಗಳಲ್ಲಿ ಓಡಾಟ ನಡೆಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಜಾಲಿಸ್ಕೋ ಗವರ್ನರ್ ಪ್ಯಾಬ್ಲೊ ಲೆಮಸ್ ನವರೊ ಜನರಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಮನೆಗಳಲ್ಲೇ ಇರಲು ಮನವಿ ಮಾಡಿದ್ದಾರೆ.
ಈ ಸೈನಿಕ ದಾಳಿ ಅಮೆರಿಕದ ಒತ್ತಡದ ನಡುವೆ ನಡೆದಿದೆ ಎಂದು ಹೇಳಲಾಗಿದೆ.ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಮೆಕ್ಸಿಕೋ ಸರ್ಕಾರದ ಮೇಲೆ ಡ್ರಗ್ ಸಾಗಾಣಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿತ್ತು. ಎಲ್ ಮೆಂಚೋ ಬಂಧನ ಅಥವಾ ಶಿಕ್ಷೆಗೆ ಸಂಬಂಧಿಸಿದ ಮಾಹಿತಿಗೆ ಅಮೆರಿಕವು 15 ಮಿಲಿಯನ್ ಡಾಲರ್ ಬಹುಮಾನ ಕೂಡ ಘೋಷಿಸಿತ್ತು. ಸಿಜೆಎನ್‍ಜಿ ಸಂಘಟನೆಯನ್ನು ಅಮೆರಿಕ ಸರ್ಕಾರವು ವಿದೇಶಿ ಭಯೋತ್ಪಾದಕ ಸಂಘಟನೆಯಾಗಿ ಗುರುತಿಸಿತ್ತು. ಎಲ್ ಮೆಂಚೋ ನೇತೃತ್ವದಲ್ಲಿ ಕೋಕೇನ್, ಮೆಥಾಂಫೆಟಮಿನ್ ಹಾಗೂ ಫೆಂಟನಿಲ್ ಮುಂತಾದ ಮದ್ದಿನ ದೊಡ್ಡ ಪ್ರಮಾಣದ ಸಾಗಾಣಿಕೆ ನಡೆಯುತ್ತಿತ್ತು ಎಂದು ಆರೋಪಿಸಲಾಗಿತ್ತು. ಎಲ್ ಮೆಂಚೋ ಸಾವಿನಿಂದ ಮೆಕ್ಸಿಕೋದಲ್ಲಿನ ಸಂಘಟಿತ ಅಪರಾಧ ಜಗತ್ತಿನಲ್ಲಿ ದೊಡ್ಡ ಸ್ಥಾನ ಖಾಲಿಯಾಗಿದೆ ಎಂದು ಹೇಳಲಾಗುತ್ತಿದೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ