LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
National News

ಮಂಗಳೂರಿಗೆ ಬರಲಿದೆ ‘ಶಿವಾಲಿಕ್’ ಹಡಗು

ನವದೆಹಲಿ : ಮಧ್ಯಪ್ರಾಚ್ಯದಲ್ಲಿ ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಉದ್ವಿಗ್ನತೆಯಿಂದಾಗಿ ಎದುರಾಗಿದ್ದ ಅಡುಗೆ ಅನಿಲ ಪೂರೈಕೆ ವ್ಯತ್ಯಯದ ಆತಂಕಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (ಎಲ್‌ಪಿಜಿ) ಹೊತ್ತ ‘ಶಿವಾಲಿಕ್’ ಹಡಗು ಯುದ್ಧ ಪೀಡಿತ ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಗುಜರಾತ್‌ನ ಮುಂದ್ರಾ ಬಂದರನ್ನು ತಲುಪಿದೆ. ಇದು ಕೇವಲ ಗುಜರಾತ್‌ಗೆ ಮಾತ್ರವಲ್ಲ, ಕರ್ನಾಟಕದ ಮಂಗಳೂರಿಗೂ ಹಾಗೂ ದಕ್ಷಿಣ ಭಾರತದ ಎಲ್‌ಪಿಜಿ ಬಳಕೆದಾರರಿಗೂ ದೊಡ್ಡ ಮಟ್ಟದ ನೆಮ್ಮದಿ ತಂದಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗಾಗಿ (IOCL) ಸುಮಾರು ೪೬ ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತು ತಂದಿರುವ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಈ ‘ಶಿವಾಲಿಕ್’ ಹಡಗು, ಮೊದಲ ಹಂತವಾಗಿ ಮುಂದ್ರಾ ಬಂದರಿನಲ್ಲಿ ೨೦ ಸಾವಿರ ಟನ್ ಎಲ್‌ಪಿಜಿಯನ್ನು ಇಳಿಸಲಿದೆ.
ಮುಂದ್ರಾ ಬಂದರಿನಲ್ಲಿ ಈ ಪ್ರಮಾಣದ ಅನಿಲವನ್ನು ಸುರಕ್ಷಿತವಾಗಿ ಖಾಲಿ ಮಾಡಲು ಕನಿಷ್ಠ ಒಂದು ದಿನ ಬೇಕಾಗಲಿದೆ. ಇನ್ನಷ್ಟು ಅನ್ವೇಷಿಸಿ ರಾಜಕೀಯ ವಿಶ್ಲೇಷಣೆ ಸಿನಿಮಾ ಟಿಕೆಟ್‌ಗಳು ಜ್ಯೋತಿಷ್ಯ ಸೇವೆಗಳು ಸುದ್ದಿ ಸಂಗ್ರಹ ಹಣಕಾಸು ಸಲಹೆ ಸೇವೆಗಳು ತದನಂತರ ಹಡಗು ತನ್ನ ಮುಂದಿನ ಪ್ರಯಾಣವನ್ನು ಆರಂಭಿಸಲಿದ್ದು, ಉಳಿದ ೨೬ ಸಾವಿರ ಟನ್ ಎಲ್‌ಪಿಜಿಯೊಂದಿಗೆ ನವಮಂಗಳೂರು ಬಂದರಿಗೆ ಬರಲಿದೆ.
ಮುಂದ್ರಾ ಬಂದರಿನಿAದ ಹೊರಟು ಮಂಗಳೂರು ತಲುಪಲು ಸರಾಸರಿ ಮೂರರಿಂದ ನಾಲ್ಕು ದಿನಗಳ ಸಮಯ ಬೇಕಾಗಬಹುದು ಎಂದು ನವಮಂಗಳೂರು ಬಂದರು ಪ್ರಾಧಿಕಾರದ ಉನ್ನತ ಮೂಲಗಳು ದೃಢಪಡಿಸಿವೆ. ಈ ಮಹತ್ವದ ಬೆಳವಣಿಗೆ ಕುರಿತು ನವದೆಹಲಿಯಲ್ಲಿ ಮಾಹಿತಿ ನೀಡಿರುವ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಅವರು, “ಮಧ್ಯಪ್ರಾಚ್ಯದ ಬಿಕ್ಕಟ್ಟಿನ ನಡುವೆಯೂ ನಮ್ಮ ಹಡಗುಗಳ ಸುರಕ್ಷಿತ ಆಗಮನಕ್ಕೆ ಎಲ್ಲ ರೀತಿಯ ಅತ್ಯಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಶಿವಾಲಿಕ್ ಹಡಗಿನ ಸರಕು ಇಳಿಕೆಯಲ್ಲಿ ಯಾವುದೇ ವಿಳಂಬವಾಗದAತೆ ನೋಡಿಕೊಳ್ಳಲು ಮುಂದ್ರಾ ಬಂದರಿನಲ್ಲಿ ಆದ್ಯತೆಯ ಬರ್ತಿಂಗ್ (ಲಂಗರು ಹಾಕುವ ಪ್ರಕ್ರಿಯೆ) ಮತ್ತು ತ್ವರಿತ ದಾಖಲಾತಿ ವಿಲೇವಾರಿ ವ್ಯವಸ್ಥೆಯನ್ನು ಮಾಡಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಬರುತ್ತಿರುವುದು ಕೇವಲ ಶಿವಾಲಿಕ್ ಹಡಗು ಮಾತ್ರವಲ್ಲ. ಅಡುಗೆ ಅನಿಲ ಹೊತ್ತ ಮತ್ತೊಂದು ಪ್ರಮುಖ ಹಡಗು ‘ನಂದಾದೇವಿ‘ ಗುಜರಾತ್‌ನ ಕಾಂಡ್ಲಾ ಬಂದರನ್ನು ತಲುಪುವ ನಿರೀಕ್ಷೆಯಿದೆ.
ಇದರ ಜೊತೆಗೆ, ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ (ಯುಎಇ) ಸುಮಾರು ೮೧,೦೦೦ ಟನ್ ಮುರ್ಬನ್ ಕಚ್ಚಾ ತೈಲವನ್ನು ಸಾಗಿಸುತ್ತಿರುವ ಭಾರತೀಯ ಧ್ವಜ ಹೊಂದಿರುವ ‘ಜಗ್ ಲಾಡ್ಕಿ’ ಹಡಗು ಕೂಡ ಸುರಕ್ಷಿತವಾಗಿ ಭಾರತದತ್ತ ಪ್ರಯಾಣ ಬೆಳೆಸಿದ್ದು, ಶೀಘ್ರದಲ್ಲೇ ಬಂದರನ್ನು ತಲುಪುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ