LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Entertainment News

ಮೂತ್ರಕೋಶ ಕ್ಯಾನ್ಸರ್ ಯಶಸ್ವಿ ಚಿಕಿತ್ಸೆ ನಂತರ ಅಮೆರಿಕಾದಿಂದ ತಾಯ್ನಾಡಿಗೆ ಮರಳಿದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್

ಬೆಂಗಳೂರು:  ಅಮೆರಿಕಾದಲ್ಲಿ ಮೂತ್ರಕೋಶ ಕ್ಯಾನ್ಸರ್‌ ಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿರುವ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಒಂದು ತಿಂಗಳ ನಂತರ ತಾಯ್ನಾಡಿಗೆ ಮರಳಿದರು. ಅಮೆರಿಕಾದಿಂದ ದುಬೈಗೆ, ಅಲ್ಲಿಂದ ನೇರವಾಗಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಶಿವರಾಜ್‌ಕುಮಾರ್‌ ದಂಪತಿಗೆ ಹೂಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು.

ವಿಮಾನ ನಿಲ್ದಾಣದಿಂದ ಗೇಟ್‌ ಬಳಿ ಬರುತ್ತಿದ್ದಂತೆ ಶಿವರಾಜ್‌ಕುಮಾರ್‌ ಆಗಮನವನ್ನೇ ಚಾತಕಪಕ್ಷಿಯಂತೆ ಕಾಯುತ್ತಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಪಟಾಕಿ ಸಿಡಿಸಿ, ಹಾರ ಹಾಕಿ ಜೈಕಾರ ಕೂಗಿ ನೂರು ಕಾಲ ಬದುಕಲಿ ಎಂದು ಹಾರೈಸಿದರು.ಅಲ್ಲಿಂದ ನಾಗವಾರ ರಸ್ತೆಯ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿರುವ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಇಲ್ಲಿಯೂ ಕೂಡ ಜನಜಂಗುಳಿಯೇ ನೆರೆದಿತ್ತು. ಅಭಿಮಾನಿಗಳು ಮೂರು ಜೆಸಿಬಿಯಲ್ಲಿ ಸೇಬು ಹಣ್ಣಿನ ಹಾರ ಹಾಕಿ ಅಭಿಮಾನ ಮೆರೆದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸ್ನೇಹಿತರು, ಸಂಬಂಧಿಕರು ನನಗೆ ಧೈರ್ಯ ತುಂಬಿದ್ದಾರೆ. ಹೋಗಬೇಕಾದರೆ ಭಾವುಕನಾಗಿದ್ದೆ. ಮನೆಯಲ್ಲಿ ಎಲ್ಲರ ಬೆಂಬಲ ಸಿಕ್ಕಿತು ಅಲ್ಲಿ ಹೋದ ಮೇಲೆ ಆತವಿಶ್ವಾಸ ಬಂತು. 6 ಗಂಟೆ ಮನೆಯವರಿಗೂ ಚಿಂತೆ ಕಾಡಿತ್ತು. ಎರಡು ಮೂರು ದಿನ ಲಿಕ್ವಿಡ್‌ ಫುಡ್‌ನಲ್ಲೇ ಇದ್ದೆ. ಎರಡು ದಿನ, ಮೂರು ದಿನದ ಬಳಿಕ ಲೈಟ್‌ ವಾಕ್‌ ಶುರು ಮಾಡಿದೆ ಎಂದರು. ಜೀವನನೇ ಒಂದು ಪಾಠ. ಜೀವನದಲ್ಲಿ ಇದೆಲ್ಲ ತಾನಾಗಿ ಬರುತ್ತದೆ, ನಾನು ಎಲ್ಲವನ್ನೂ ಧೈರ್ಯವಾಗಿ ಮಾಡಿದೆ ಎಂದು ಭಾವುಕರಾಗಿ ನುಡಿದರು. ಮುಂದಿನ ಪ್ರಾಜೆಕ್ಟ್‌ ಬಗ್ಗೆ ಮಾತನಾಡಿದ ಅವರು, ಈಗ 131 ಸಿನಿಮಾ ಬಗ್ಗೆ ಪ್ಲ್ಯಾನ್‌ ಮಾಡಿದ್ದೇವೆ. ರಾಮ್‌ಚರಣ್‌ ಅವರ ಸಿನಿಮಾ ಮಾಡುತ್ತಿದ್ದೇನೆ ಎಂದರು.

ಮೂತ್ರಕೋಶದ ಕ್ಯಾನ್ಸರ್‌ ಸಂಬಂಧ ಆಪರೇಷನ್‌ ಮಾಡಿಸಿಕೊಳ್ಳಲು ನಟ ಶಿವರಾಜಕುಮಾರ್‌ ಡಿ.18ರಂದು ಅಮೆರಿಕಕ್ಕೆ ತೆರಳಿದ್ದರು. ಬಳಿಕ ಡಿ.24 ರಂದು ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಆಪರೇಷನ್‌ ಆದ ಒಂದು ತಿಂಗಳ ಬಳಿಕ ಅಮರಿಕಾದಿಂದ ತಾಯ್ನಾಡಿಗೆ ಇಂದು ಮರಳಿದ್ದಾರೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ