ಬಳ್ಳಾರಿ: ಶ್ರೀ ರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಮಹೋತ್ಸವ ಹಾಗೂ 431ನೇ ಪಟ್ಟಾಭಿಷೇಕ ಮಹೋತ್ಸವ ಹಿನ್ನೆಲೆ ನಗರದ ಹೆಸರಾಂತ ವೈದ್ಯ ಡಾ.ಬಿ.ಕೆ.ಸುಂದರ್ ಅವರಿಗೆ, ಶ್ರೀರಾಘವೇಂದ್ರನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪವಿತ್ರ ಧಾರ್ಮಿಕ ಕ್ಷೇತ್ರ
ಮಂತ್ರಾಲಯದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವದಲ್ಲಿ ಶ್ರೀಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು, ಬಳ್ಳಾರಿಯ ಡಾ.ಬಿ.ಕೆ.ಸುಂದರ್ ಅವರಿಗೆ, ಶ್ರೀರಾಘವೇಂದ್ರನುಗ್ರಹ ಪ್ರಶಸ್ತಿ ನೀಡಿ, ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ವಿವಿಧ ಪಂಡಿತರು, ವಿವಿಧ ಗಣ್ಯರು ಇತರರು ಉಪಸ್ಥಿತರಿದ್ದರು. ನಂತರ ಡಾ.ಬಿ.ಕೆ.ಸುಂದರ್ ಅವರು ಮಾತನಾಡಿ, ಶ್ರೀ ರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಮಹೋತ್ಸವ ಹಾಗೂ 431ನೇ ಪಟ್ಟಾಭಿಷೇಕ ಮಹೋತ್ಸವ ಹಿನ್ನೆಲೆಯಲ್ಲಿ ವರ್ಷ ಶ್ರೀಮಠದಿಂದ ಕೊಡಲಾಗುವ ಶ್ರೀರಾಘವೇಂದ್ರನುಗ್ರಹ ಪ್ರಶಸ್ತಿಯನ್ನು ಈ ಬಾರಿ ನಮ್ಮನ್ನು ಗುರುತಿಸಿ ಶ್ರೀಮಠದ ಸ್ವಾಮಿಗಳು ಪ್ರಧಾನ ಮಾಡಿರುವುದು ಅತ್ಯಂತ ಸಂತಸ ಮೂಡಿಸಿದೆ. ಕಲಿಯುಗದ ಕಾಮಧೇನು, ಕಲ್ಪವೃಕ್ಷ ಶ್ರೀಗುರುರಾಯರು ಎಲ್ಲರಿಗೂ ಒಳಿತನ್ನು ಮಾಡಲಿ, ಸೇವೆಯನ್ನು ಮಾಡುವ ಸೌಭಾಗ್ಯ ಕಲ್ಪಿಸಲಿ ಎಂದು ಪ್ರಾರ್ಥಿಸುವೆ ಎಂದರು.