ಬೆಂಗಳೂರು: ರಾಯಚೂರು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ನಿಂದ ಸ್ವಾತಂತ್ರ‍್ಯ ಬಂದಾಗಿನಿ0ದಲೂ ಒಬ್ಬರಿಗೂ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹಲವು ವರ್ಷಗಳಿಂದ ತಳಮಟ್ಟದಲ್ಲಿ ಪಕ್ಷವನ್ನು ಕಟ್ಟಿಬೆಳೆಸಿದ ಕಾರ್ಯಕರ್ತರು ಮತ್ತು ಮುಖಂಡರಿಗೆ ಅವಕಾಶ ನೀಡಲು ಪಕ್ಷ ಮುಂದಾಗಿಲ್ಲ.
ದಾವಣಗೆರೆಯಲ್ಲಿ ಸ್ಪರ್ಧಿಸಲು ಅಮಿತೋತ್ಸಾಹದಲ್ಲಿದ್ದ ಮುಸ್ಲೀಮ್ ಸಮುದಾಯ ಈ ಬಾರಿ ಟಿಕೆಟ್ ತ್ಯಾಗ ಮಾಡಿದ್ದು, ವಾಣಿಜ್ಯ ನಗರಿಯ ಮುಸ್ಲೀಂ ಸಮುದಾಯಕ್ಕೆ ವಿಧಾನಪರಿಷತ್ ನಲ್ಲಿ ಪ್ರಾತಿನಿಧ್ಯೆ ಕಲ್ಪಿಸಲು ಕಾಂಗ್ರೆಸ್ ಉತ್ಸುಕವಾಗಿದೆ. ಆದರೆ ಐತಿಹಾಸಿಕ ವಂಚನೆಗೆ ಒಳಗಾಗಿರುವ ರಾಯಚೂರು ಜಿಲ್ಲೆಯ ಮುಸ್ಲೀಂ ಸಮುದಾಯಕ್ಕೆ ಈ ಬಾರಿಯೂ ಅವಕಾಶ ವಂಚಿತವಾಗುವ ಸಾಧ್ಯತೆಗಳೇ ಹೆಚ್ಚಿವೆ.
ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಸ್ಥಿರ ಬೆಂಬಲ ನೀಡುತ್ತದೆ ಎಂಬ ಅರಿವಿದ್ದರೂ, ಅವರನ್ನೇ ಕಡೆಗಣಿಸಲಾಗುತ್ತಿದೆ ಎಂಬ ಬೇಸರ ರಾಯಚೂರಿನಲ್ಲಿದೆ. ಚುನಾವಣಾ ಸಂದರ್ಭದಲ್ಲಿ ನಾವು ಪಕ್ಷದ ಪರವಾಗಿ ಶ್ರಮಿಸುತ್ತೇವೆ. ಆದರೆ ಪ್ರತಿಫಲದ ವಿಚಾರದಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ ಎಂಬುದು ಕಾರ್ಯಕರ್ತರ ಅಸಮಾಧಾನವಾಗಿದೆ.
ಈ ವಿಷಯ ಜಿಲ್ಲೆಯ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದ್ದು, ಪಕ್ಷದೊಳಗೆಯೇ ಅಸಮಾಧಾನದ ಧ್ವನಿಗಳು ಕೇಳಿಬರುತ್ತಿವೆ. ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರತಿನಿಧ್ಯೆ ನೀಡದಿರುವುದು ಮುಂದಿನ ದಿನಗಳಲ್ಲಿ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಇಂಡಿಯನ್ ಸ್ಟೂಡೆಂಟ್ ನ್ಯಾಷನಲ್ ಕಾಂಗ್ರೆಸ್ ಘಟಕದಿಂದಲೇ ಚಳವಳಿ ನಡೆಸಿ ಪಕ್ಷಕ್ಕಾಗಿ ದುಡಿದ ಹಲವರ ನಿರೀಕ್ಷೆಗಳು ಈಗ ಕುಸಿದಂತಾಗಿದೆ. ರಾಜ್ಯದ ನಾಯಕರು ಜಿಲ್ಲೆಗೆ ಜಿಲ್ಲೆಗೆ ಭೇಟಿ ನೀಡಿದಾಗ ಭರವಸೆಯ ಆಶ್ವಾಸನೆಗಳನ್ನು ನೀಡಿದ್ದರು. ಅವುಗಳು ಈಗ ಕೇವಲ ಮಾತುಗಳಾಗಿ ಉಳಿದಿವೆ.
ಇದೀಗ ಸರ್ಕಾರದ ಅರ್ಧ ಅವಧಿ ಮುಗಿದ ಬಳಿಕ ಬದಲಾವಣೆ ಸಾಧ್ಯವೆಂಬ ಚರ್ಚೆಗಳು ನಡೆಯುತ್ತಿವೆ. ಈ ಸಂಬAಧ ಜಿಲ್ಲೆಯ ಹಾಗೂ ರಾಜ್ಯದ ಶಾಸಕರು ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ರಂದೀಪ್ ಸಿಂಗ್ ಸುರ್ಜೆವಾಲ ಅವರನ್ನು ಭೇಟಿಯಾಗಿ ಸಚಿವ ಸ್ಥಾನ, ನಿಗಮ ಮಂಡಳಿ ಹಾಗೂ ವಿಧಾನ ಪರಿಷತ್ ಸದಸ್ಯತ್ವದ ಕುರಿತು ಚರ್ಚಿಸಿದ್ದಾರೆ.
ಬಿಜೆಪಿ ಆಡಳಿತದಿಂದ ಬೇಸತ್ತ ಜನರು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದರೂ, ಮುಸ್ಲಿಂ ಸಮುದಾಯದ ಶೇ.೪ರಷ್ಟು ಮೀಸಲಾತಿ ಜಾರಿಗೊಳಿಸುವ ವಿಚಾರದಲ್ಲಿ, ಹಿಜಾಬ್ ವಿಷಯ, ಹತ್ತು ಸಾವಿರ ಕೋಟಿ ಅನುದಾನ, ಪ್ರಾಣಿ ವಧೆ ನಿಷೇಧ ಕಾಯ್ದೆ ವಾಪಸ್ ಪಡೆಯುವುದು ಸೇರಿದಂತೆ ಹಲವು ಭರವಸೆಗಳನ್ನು ಈಡೇರಿಸುವಲ್ಲಿ ಪ್ರಗತಿ ಕಾಣುತ್ತಿಲ್ಲ ಎಂಬ ಟೀಕೆಗಳೂ ಕೇಳಿಬರುತ್ತಿವೆ.
ಜಿಲ್ಲೆಯಲ್ಲಿ ಸೈಯದ್ ಯಾಸೀನ್ ಎರಡು ಬಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದನ್ನು ಹೊರತುಪಡಿಸಿ, ಇನ್ನಾ¬ರಿಗೂ ವಿಧಾನ ಪರಿಷತ್ ಸದಸ್ಯತ್ವವಾಗಲಿ ಅಥವಾ ರಾಜ್ಯ ಮಟ್ಟದ ನಿಗಮ ಮಂಡಳಿ ಸ್ಥಾನಗಳು ದೊರಕಿಲ್ಲ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ಬಷೀರುದ್ದೀನ್ ಕೆ. ಅಸ್ಲಾಂ ಪಾಷಾ, ರಜಾಕ್ ಉಸ್ತಾದ್, ಮಹ್ಮದ್ ಶಾಲಂ, ಹಾರಿಸ್ ಸಿದ್ದೀಕಿ ಸೇರಿದಂತೆ ಅನೇಕರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರೂ, ಅವರಿಗೆ ಅವಕಾಶ ಸಿಗದೆ ಇರುವುದರಿಂದ ಅಸಮಾಧಾನ ಹೆಚ್ಚಾಗಿದೆ.
ಸರ್ಕಾರದ ಕೊನೆಯ ಅವಧಿಯಾದ ಈಗ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಕನಿಷ್ಠ ಒಬ್ಬರಿಗೆ ವಿಧಾನ ಪರಿಷತ್ ಸದಸ್ಯರಾಗಿ ಅಥವಾ ರಾಜ್ಯಮಟ್ಟದ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ಬೇಡಿಕೆ ವ್ಯಾಪಕವಾಗಿದೆ.
ಈ ನಡುವೆ, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಹಲವು ಅಂಶಗಳನ್ನು ಪರಿಗಣಿಸಲಾಗುತ್ತದೆ ಎಂಬುದನ್ನು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿ ಅಸಮಾಧಾನ ಶಮನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನೆಲಮಟ್ಟದಲ್ಲಿ ಅಸಮಾಧಾನ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ವಿಧಾನ ಪರಿಷತ್ ಸ್ಥಾನ ನೀಡುತ್ತದೆಯೇ ಇಲ್ಲವೆ ಅಸಮಾಧಾನವನ್ನು ಹೇಗೆ ಪರಿಹರಿಸುತ್ತದೆ ಎಂಬುದು